KN/681223d ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 00:28, 17 November 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಕೃಷ್ಣ ಪ್ರಜ್ಞೆ ಆಂದೋಲನ ಜೀವನದ ಒಂದು ಉತ್ತಮ ಕಲೆ, ತುಂಬಾ ಸುಲಭ ಮತ್ತು ಉತ್ಕೃಷ್ಟವಾಗಿದೆ. ಈ ಕೃಷ್ಣ ಪ್ರಜ್ಞೆ ಚಳುವಳಿ ನಿಮಗೆ ಯಾವುದೇ ಕೃತಕ ಪ್ರಯತ್ನವಿಲ್ಲದೆ ನಿಮಗೆ ಬೇಕಾಗಿರುವ ಎಲ್ಲವನ್ನೂ ನೀಡುತ್ತದೆ. ಇದು ಅತೀಂದ್ರಿಯವಾಗಿ ವರ್ಣಮಯವಾಗಿದೆ ಮತ್ತು ಅತೀಂದ್ರಿಯ ಆನಂದದಿಂದ ಕೂಡಿದೆ. ನಾವು ಈ ಕೃಷ್ಣ ಪ್ರಜ್ಞೆಯ ಚಟುವಟಿಕೆಗಳನ್ನು ಹಾಡು,ನೃತ್ಯ, ಪ್ರಸಾದ ಸೇವನೆ ಮತ್ತು ಅಧಿಕೃತ ಪರಂಪರೆಯಿಂದ ಸ್ವೀಕರಿಸಲ್ಪಟ್ಟಿರುವ ತತ್ವಶಾಸ್ತ್ರವನ್ನು ಮಾತನಾಡುವ ಮೂಲಕ ಕಾರ್ಯಗತಗೊಳಿಸುತ್ತೇವೆ, ಮತ್ತು ಆದ್ದರಿಂದ ಇದು ನಮ್ಮ ನೈಸರ್ಗಿಕ ಪ್ರವೃತ್ತಿಯ ಯಾವುದೇ ಕೃತಕ ಬದಲಾವಣೆಯಿಲ್ಲದೆ ನಮಗೆ ಬೇಕಾದ ಎಲ್ಲವನ್ನೂ ನೀಡುತ್ತದೆ. ಪ್ರಜ್ಞೆ ನಿಮ್ಮಲ್ಲಿದೆ, ಆದರೆ ಅದು ಈಗ ಕಲುಷಿತ ಪ್ರಜ್ಞೆಯಾಗಿದೆ, ಮತ್ತು ನೀವೀಗ ಏನು ಮಾಡಬೇಕೆಂದರೆ, ಎಲ್ಲಾ ಕಲುಷಿತ ವಸ್ತುಗಳಿಂದ ಅದನ್ನು ಶುದ್ಧೀಕರಿಸಬೇಕು ಮತ್ತು ದೇವರ ವೈಭವೀಕರಿಸಿದ ಪವಿತ್ರ ಹೆಸರನ್ನು ಆಹ್ಲಾದಕರ ವಿಧಾನದಲ್ಲಿ ಜಪಿಸುವುದರ ಮೂಲಕ ನಿರ್ಮಲವಾದ ಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು: ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ/ ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ."
ಉಪನ್ಯಾಸವನ್ನು ಇಸ್ಕಾನ್ ಲಂಡನ್ ಸದಸ್ಯರಿಗೆ ದಾಖಲಿಸಲಾಗಿದೆ - ಲಾಸ್ ಎಂಜಲೀಸ್