KN/690217 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 00:01, 5 December 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಹೇಗೋ ಬೆರಳು ಕತ್ತರಿಸಲ್ಪಟ್ಟಿದೆ, ಮತ್ತು ಅದು ನೆಲದ ಮೇಲೆ ಬೀಳುತ್ತಿದೆ; ಅದಕ್ಕೆ ಯಾವುದೇ ಮೌಲ್ಯವಿಲ್ಲ. ನನ್ನ ಬೆರಳು, ಅದು ಬೇರ್ಪಡೆಯಾಗಿ, ನೆಲದ ಮೇಲೆ ಬಿದ್ದಾಗ ಅದಕ್ಕೆ ಯಾವುದೇ ಮೌಲ್ಯವಿಲ್ಲ. ಆದರೆ, ಯಾವ ತಕ್ಷಣ ಬೆರಳು ಈ ದೇಹದೊಂದಿಗೆ ಸೇರುವುದೋ, ಅದು ಲಕ್ಷಾಂತರ ಮತ್ತು ಕೊಟ್ಯಅಂತರ ಡಾಲರ್ ಮೌಲ್ಯವನ್ನು ಪಡೆದುಕೊಂಡಿದೆ. ಅತ್ಯಮೂಲ್ಯ. ಅದೇ ರೀತಿ, ನಾವು ಈಗ ಈ ಭೌತಿಕ ಸ್ಥಿತಿಯಾ ಕಾರಣದಿಂದ ದೇವರೊಂದಿಗೆ ಅಥವಾ ಕೃಷ್ಣನ ಜೊತೆ ಸಂಪರ್ಕ ಕಡಿತಗೊಂಡಿದ್ದೇವೆ. ಮರೆತುಬಿಡಿ ... ಸಂಪರ್ಕ ಕಡಿತಗೊಂಡಿಲ್ಲ. ಸಂಪರ್ಕವಿದೆ. ದೇವರು ನಮ್ಮ ಎಲ್ಲ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾನೆ. ರಾಜ್ಯ ಅಪರಾಧ ಇಲಾಖೆ ನಾಗರಿಕ ಇಲಾಖೆಯಿಂದ ಸಂಪರ್ಕ ಕಡಿತಗೊಳಿಸಿದಂತೆಯೇ; ಅವನು ಅಪರಾಧ ಇಲಾಖೆಗೆ ಬಂದಿದ್ದಾನೆ. ವಾಸ್ತವವಾಗಿ ಸಂಪರ್ಕ ಕಡಿತಗೊಂಡಿಲ್ಲ. ಸರ್ಕಾರ ಇನ್ನೂ ಕಾಳಜಿ ವಹಿಸುತ್ತಿದೆ, ಆದರೆ ಕಾನೂನುಬದ್ಧವಾಗಿ ಸಂಪರ್ಕ ಕಡಿತಗೊಂಡಿದೆ. ಅದೇ ರೀತಿ, ನಮ್ಮ ಸಂಪರ್ಕ ಕಡಿತಗೊಂಡಿಲ್ಲ. ಸಂಪರ್ಕ ಕಡಿತಗೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಕೃಷ್ಣನಿಲ್ಲದೆ ಯಾವುದರ ಅಸ್ತಿತ್ವವೂ ಇಲ್ಲ. ಹಾಗಾಗಿ ನಾನು ಹೇಗೆ ಸಂಪರ್ಕ ಕಡಿತಗೊಳ್ಳಬಹುದು? ಸಂಪರ್ಕ ಕಡಿತ ಎಂದರೆ ಕೃಷ್ಣನನ್ನು ಮರೆತು, ಕೃಷ್ಣ ಪ್ರಜ್ಞೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುವ ಬದಲು, ನಾನು ಅನೇಕ ಅಸಂಬದ್ಧ ಪ್ರಜ್ಞೆಯಲ್ಲಿ ತೊಡಗಿದ್ದೇನೆ. ಅದು ಸಂಪರ್ಕ ಕಡಿತವಾಗಿದೆ. "
690217 - ಉಪನ್ಯಾಸ ಭ. ಗೀತಾ ೦೬.೧೬-೨೪ - ಲಾಸ್ ಎಂಜಲೀಸ್