KN/Prabhupada 0126 - ನನ್ನ ಆಧ್ಯಾತ್ಮಿಕ ಗುರುವಿನ ತೃಪ್ತಿಗಾಗಿ ಮಾತ್ರ

Revision as of 00:20, 26 February 2021 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0126 - in all Languages Category:KN-Quotes - 1973 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on BG 4.18 -- Delhi, November 3, 1973

ಭಕ್ತಿನ್: ನಾವು ಕೆಲವು ಚಟುವಟಿಕೆಯನ್ನು ಮಾಡುತ್ತಿದ್ದರೆ, ಪ್ರಭು ಕೃಷ್ಣ ಸಂತಸಗೊಂಡಿದ್ದಾನೆಯೇ ಎಂದು ತಿಳಿಯಲು ಆ ಚಟುವಟಿಕೆಯನ್ನು ಪರೀಕ್ಷಿಸಬೇಕು ಎಂದು ನೀವು ಹೇಳಿದ್ದೀರಿ. ಆದರೆ ಆ ಪರೀಕ್ಷೆ ಏನು?

ಪ್ರಭುಪಾದ: ಆಧ್ಯಾತ್ಮಿಕ ಗುರು ಸಂತೋಷಪಟ್ಟರೆ, ಕೃಷ್ಣ ಸಂತೋಷಪಡುತ್ತಾನೆ. ನೀವು ಪ್ರತಿದಿನ ಹಾಡುತ್ತಿದ್ದೀರಿ. ಯಸ್ಯ ಪ್ರಸಾದಾದ್ ಭಗವತ್-ಪ್ರಸಾದೊ ಯಸ್ಯಾಪ್ರಸಾದಾನ್ ನ ಗತಿಃ ಕುತೊ 'ಪಿ. ಆಧ್ಯಾತ್ಮಿಕ ಗುರು ಸಂತೋಷಪಟ್ಟರೆ, ಆಗ ಕೃಷ್ಣನೂ ಸಂತೋಷಪಡುತ್ತಾನೆ. ಅದೇ ಪರೀಕ್ಷೆ. ಗುರುವಿಗೆ ಸಂತೋಷವಾಗದಿದ್ದರೆ, ಆಗ ಬೇರೆ ದಾರಿಯಿಲ್ಲ.

ಇದನ್ನು ಅರ್ಥಮಾಡಿಕೊಳ್ಳುವುದು ತುಂಬ ಸರಳ. ಕಚೇರಿಯಲ್ಲಿ ಕೆಲಸ ಮಾಡುವ ಒಬ್ಬನಿಗೆ ನೇರ ಮುಖ್ಯಸ್ಥರಾಗಿ, ಮುಖ್ಯಗುಮಾಸ್ತ, ಅಥವಾ ಆ ವಿಭಾಗದ ಅಧೀಕ್ಷಕರು ಇರುತ್ತಾರೆಂದು ಭಾವಿಸೋಣ. ಎಲ್ಲರೂ ಕೆಲಸ ಮಾಡುತ್ತಿರುತ್ತಾರೆ. ಅವನು ಅಧೀಕ್ಷಕನನ್ನು ಅಥವಾ ಮುಖ್ಯ ಗುಮಾಸ್ತನನ್ನು ತೃಪ್ತಿಪಡಿಸಿದರೆ, ಅವನು ವ್ಯವಸ್ಥಾಪಕ ನಿರ್ದೇಶಕರನ್ನು ತೃಪ್ತಿಪಡಿಸಿದ್ದಾನೆ ಎಂದೇ ತಿಳಿಯಬೇಕು. ಇದು ತುಂಬಾ ಕಷ್ಟವಲ್ಲ. ನಿಮ್ಮ ನೇರ ಮುಖ್ಯಸ್ಥ, ಕೃಷ್ಣನ ಪ್ರತಿನಿಧಿ, ಅವನು ತೃಪ್ತನಾಗಬೇಕು. ಯಸ್ಯ ಪ್ರಸಾದಾದ್ ಭಗವತ್-ಪ್ರಸಾದೋ ಯಸ್ಯ. ಆದ್ದರಿಂದ ಆಧ್ಯಾತ್ಮಿಕ ಗುರುವಿನ ಮಾರ್ಗದರ್ಶನದ ಅಗತ್ಯವಿದೆ. ಕೃಷ್ಣನು ಮಾರ್ಗದರ್ಶನ ಮಾಡಲು ಆಧ್ಯಾತ್ಮಿಕ ಗುರುವಿನ ರೂಪದಲ್ಲಿ ಬರುತ್ತಾನೆ. ಅದನ್ನು ಚೈತನ್ಯ-ಚರಿತಾಮೃತದಲ್ಲಿ ಹೇಳಲಾಗಿದೆ. ಗುರು-ಕೃಷ್ಣ-ಕೃಪಾಯ. ಗುರು-ಕೃಷ್ಣ-ಕೃಪಾಯ. ಆದ್ದರಿಂದ ಗುರು-ಕೃಪಾ, ಗುರುವಿನ ಕೃಪೆ ಕೃಷ್ಣನ ಕೃಪೆ. ಆದ್ದರಿಂದ ಇಬ್ಬರೂ ತೃಪ್ತರಾದಾಗ, ನಮ್ಮ ಮಾರ್ಗವು ನಿರ್ವಿಘ್ನವಾಗುತ್ತದೆ. ಗುರು-ಕೃಷ್ಣ-ಕೃಪಾಯ ಪಾಯ ಭಕ್ತಿ-ಲತಾ-ಬೀಜ (ಚೈ.ಚ ಮಧ್ಯ 19.151). ಆಗ ನಮ್ಮ ಭಕ್ತಿ ಸೇವೆ ಪರಿಪೂರ್ಣವಾಗುತ್ತದೆ. ಹಾಗಾದರೆ ನೀವು ಈ ಹೇಳಿಕೆಯನ್ನು ಗುರುವಷ್ಠಕದಲ್ಲಿ ಗುರುತಿಸಲಿಲ್ಲವೇ? ಯಸ್ಯ ಪ್ರಸಾದಾದ್ ಭಗವತ್-ಪ್ರಸಾದೋ ಯಸ್ಯಾಪ್ರಸಾದಾನ್ ನ ಗತಿಃ ಕುತೊ 'ಪಿ.

ಈ ಚಳವಳಿಯಂತೆ. ಈ ಆಂದೋಲನವನ್ನು ನನ್ನ ಆಧ್ಯಾತ್ಮಿಕ ಗುರುವಿನ ತೃಪ್ತಿಗಾಗಿ ಮಾತ್ರ ಪ್ರಾರಂಭಿಸಲಾಯಿತು. ಅವರು ಬಯಸಿದ್ದರು. ಈ ಆಂದೋಲನವನ್ನು ಪ್ರಪಂಚದಾದ್ಯಂತ ಹರಡಬೇಕೆಂದು ಚೈತನ್ಯ ಮಹಾಪ್ರಭು ಬಯಸಿದ್ದರು. ಆದುದರಿಂದ ಅವರು ನನ್ನ ಅನೇಕ ಆಧ್ಯಾತ್ಮಿಕ ಸಹೋದರರನ್ನು ಆದೇಶಿಸಿದರು, ಮತ್ತು ಬಯಸಿದರು... ಆದೇಶಿಸಲೂ ಇಲ್ಲ, ಕೇವಲ ಬಯಸಿದರು. ಅವರು ನನ್ನ ಕೆಲವು ಆಧ್ಯಾತ್ಮಿಕ ಸಹೋದರರನ್ನು ವಿದೇಶಗಳಿಗೆ ಪ್ರಚಾರಕ್ಕೆ ಕಳುಹಿಸಿದರು, ಆದರೆ ಕೆಲ್ಲವೊಂದು ಕಾರಣಗಳಿಂದ ಅವರು ಹೆಚ್ಚು ಯಶಸ್ವಿಯಾಗಲಿಲ್ಲ. ಅವರನ್ನು ವಾಪಸ್ಸು ಕರೆಸಲಾಯಿತು. ಆದ್ದರಿಂದ ನಾನು ಆಲೋಚಿಸಿದೆ, "ಈ ವೃದ್ಧಾಪ್ಯದಲ್ಲಿ ಪ್ರಯತ್ನಿಸೋಣ" ಎಂದು. ಆದ್ದರಿಂದ ಆಧ್ಯಾತ್ಮಿಕ ಗುರುವಿನ ಬಯಕೆಯನ್ನು ಪೂರೈಸುವ ಒಂದೇ ಬಯಕೆ. ನೀವು ಈಗ ಸಹಾಯ ಮಾಡಿದ್ದೀರಿ. ಇದು ಯಶಸ್ವಿಯಾಗುತ್ತಿದೆ. ಇದುವೇ ಯಸ್ಯ ಪ್ರಸಾದಾದ್ ಭಗವತ್-ಪ್ರಸಾದಃ. ನಾವು ನಿಜವಾಗಿಯೂ ಆಧ್ಯಾತ್ಮಿಕ ಗುರುವಿನ ನಿರ್ದೇಶನದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ, ಅದು ಕೃಷ್ಣನನ್ನು ತೃಪ್ತಿಪಡಿಸುತ್ತದೆ, ಮತ್ತು ಕೃಷ್ಣ ನಮಗೆ ಮುಂದುವರಿಯಲು ಎಲ್ಲಾ ರೀತಿಯಲ್ಲಿ ಸಹಾಯ ಮಾಡುತ್ತಾನೆ.