KN/680309b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ ಎಂದರೆ ಎಲ್ಲ-ಆಕರ್ಷಕ, ಮತ್ತು ಅದು ದೇವರ ಪರಿಪೂರ್ಣ ಹೆಸರು. ದೇವರು ಸರ್ವಾಕರ್ಷಕನಾಗದ ಹೊರತು ಅವನು ದೇವರಾಗಲು ಸಾಧ್ಯವಿಲ್ಲ. ದೇವರು ಹಿಂದೂಗಳ ದೇವರು ಅಥವಾ ಕ್ರಿಶ್ಚಿಯನ್ನರ ದೇವರು ಅಥವಾ ಯಹೂದಿಗಳ ದೇವರು ಅಥವಾ ಮೊಹಮ್ಮದನ್ನರ ದೇವರಾಗಲು ಸಾಧ್ಯವಿಲ್ಲ. ಅವನು ಎಲ್ಲರಿಗೂ ದೇವರು, ಮತ್ತು ಅವನು ಸರ್ವ -ಆಕರ್ಷಕ, ಅವನು ಸಂಪೂರ್ಣವಾಗಿ ಐಶ್ವರ್ಯವಂತನು, ಅವನು ಜ್ಞಾನದಲ್ಲಿಸಂಪೂರ್ಣನು, ಜ್ಞಾನದಲ್ಲಿ ಪರಿಪೂರ್ಣನು, ಸೌಂದರ್ಯದಲ್ಲಿ ಪರಿಪೂರ್ಣನು, ಪರಿತ್ಯಾಗದಲ್ಲಿ ಪರಿಪೂರ್ಣನು, ಕೀರ್ತಿಯಲ್ಲಿ ಪರಿಪೂರ್ಣನು, ಬಲದಲ್ಲಿ ಪರಿಪೂರ್ಣನು.ಹೀಗೆ ಅವನು ಎಲ್ಲರನ್ನೂ ಆಕರ್ಷಿಸುತ್ತಾನೆ. ಆದ್ದರಿಂದ ನಾವು ದೇವರೊಂದಿಗಿನ ನಮ್ಮ ಸಂಬಂಧವನ್ನು ತಿಳಿದುಕೊಳ್ಳಬೇಕು. ಅದು ಈ ಪುಸ್ತಕದ ಮೊದಲ ವಿಷಯವಾಗಿದೆ, "ಭಗವದ್ಗೀತಾ ಯಥಾ ರೂಪ". ನಂತರ ನಾವು ನಮ್ಮ ಸಂಬಂಧವನ್ನು ಅರ್ಥಮಾಡಿಕೊಂಡರೆ, ನಾವು ಅದರಂತೆ ವರ್ತಿಸಬಹುದು."
680309 - ಸಂದರ್ಶನ - ಸ್ಯಾನ್ ಫ್ರಾನ್ಸಿಸ್ಕೋ