KN/680623b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಮೂಲ ಕಲ್ಪನೆಯೆಂದರೆ, ಸಮಾಜದಲ್ಲಿ, ಯಾರು ಬುದ್ಧಿಜೀವಿಗಳೋ, ಯಾರು ಬುದ್ಧಿಶಕ್ತಿಯ ಕೆಲಸದಲ್ಲಿ ತೊಡಗಿರುವವರೋ, ಅವರನ್ನು ಬ್ರಾಹ್ಮಣರು ಎಂದು ಕರೆಯಲಾಗುತ್ತದೆ. ಬ್ರಹ್ಮನನ್ನು ಅರ್ಥಮಾಡಿಕೊಳ್ಳಲು, ಈ ಪ್ರಪಂಚದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು, ಅವರು ಆಧ್ಯಾತ್ಮಿಕ ಜ್ಞಾನವನ್ನು ಅರ್ಥಮಾಡಿಕೊಳ್ಳುತ್ತಾರೆ. ಅಂತಹ ಜ್ಞಾನದ ಬೆಳೆವಣಿಗೆಯಲ್ಲಿ ತೊಡಗಿರುವವರನ್ನು ಬ್ರಾಹ್ಮಣ ಎಂದು ಕರೆಯಲಾಗುತ್ತಿತ್ತು. ಆದರೆ ಪ್ರಸ್ತುತ ಕ್ಷಣದಲ್ಲಿ ಯಾರಾದರೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೆ, ಅವರನ್ನು ಬ್ರಾಹ್ಮಣ ಎಂದು ಕರೆಯಲಾಗುತ್ತದೆ. ಆದರೆ ವಾಸ್ತವವಾಗಿ ಅವನು ಚಮ್ಮಾರನಾಗಿರಬಹುದು. ಆದರೆ ಅದರ ಯೋಚನೆಯೇ ಇಲ್ಲ. ಆದ್ದರಿಂದ, ಮಾನವ ಸಮಾಜದ ಈ ಎಂಟು ವಿಭಾಗಗಳು, ವೈಜ್ಞಾನಿಕ ಆಧಾರದ ಮಾನವ ಸಮಾಜದ ವಿಭಜನೆಯ ಅರ್ಥವು ಈಗ ಕಳೆದುಹೋಗಿದೆ. ಆದ್ದರಿಂದ ಚೈತನ್ಯ ಮಹಾಪ್ರಭುಗಳು ಉಪದೇಶಿಸಿದರು ಕಲೌ, 'ಈ ಯುಗದಲ್ಲಿ', ನಾಸ್ತ್ಯೇವ ನಾಸ್ತ್ಯೇವ ನಾಸ್ತ್ಯೇವ ಗತಿರ್ ಅನ್ಯಥಾ(ಚೈ ಚ ಆದಿ ೧೭.೨೧),'ಮಾನವ ಸಮಾಜದ ಜೀವನದ ಗುರಿಯ ಪ್ರಗತಿಗೆ ಬೇರೆ ಪರ್ಯಾಯಗಳಿಲ್ಲ'. ಏಕೆಂದರೆ ಮಾನವ ಸಮಾಜದ ಉದ್ದೇಶವೇ ಜೀವನದ ಗುರಿಯಲ್ಲಿ ಮುನ್ನಡೆಯುವುದು, ಮತ್ತು ಆ ಜೀವನದ ಗುರಿಯೇ ಕೃಷ್ಣ ಪ್ರಜ್ಞೆ. "
680623 - ಉಪನ್ಯಾಸ ಶ್ರೀ.ಭಾ. ೦೭.೦೬.೦೬-೯- ಮಾಂಟ್ರಿಯಲ್