KN/680629 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಕ್ತರು ಕರ್ಮದ ಅಧೀನದಲ್ಲಿಲ್ಲ. ಬ್ರಹ್ಮ-ಸಂಹಿತದಲ್ಲಿ ಹೀಗೆ ಉಲ್ಲೇಖಿಸಲಾಗಿದೆ, ಕರ್ಮಾಣಿ ನಿರ್ದಹತಿ ಕಿಂತು ಚ ಭಕ್ತಿ -ಭಾಜಾಮ್(ಬ್ರ ಸಂ. ೫.೫೪). ಪ್ರಹ್ಲಾದ ಮಹಾರಾಜನನ್ನು ಅವನ ತಂದೆಯು ಅನೇಕ ರೀತಿಯಲ್ಲಿ ಹಿಂಸಿಸಿದನು, ಆದರೆ ಅವನ ಮೇಲೆ ಪರಿಣಾಮ ಬೀರಲಿಲ್ಲ. ಅವನಿಗೆ ಯಾವುದೇ ಪರಿಣಾಮ ಬೀರಲಿಲ್ಲ. ಮೇಲ್ನೋಟಕ್ಕೆ ...... ಕ್ರಿಶ್ಚಿಯನ್ ಬೈಬಲ್ನಲ್ಲಿಯೂ, ದೇವನಾದ ಯೇಸು ಕ್ರಿಸ್ತನನ್ನು ಹಿಂಸಿಸಲಾಯಿತು, ಆದರೆ ಅವನ ಮೇಲೆ ಯಾವ ಪರಿಣಾಮವೂ ಬೀರಲಿಲ್ಲ. ಇದು ಸಾಮಾನ್ಯ ಮನುಷ್ಯರ ಮತ್ತು ಭಕ್ತರು ಅಥವಾ ಅತೀಂದ್ರಿಯವಾದಿಗಳ ನಡುವಿನ ವ್ಯತ್ಯಾಸ. ಭಕ್ತನನ್ನು ಹಿಂಸಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ಕಂಡುಬರುತ್ತದೆ, ಆದರೆ ಅವನನ್ನು ಹಿಂಸಿಸಲಾಗುವುದಿಲ್ಲ. "
680629 - ಉಪನ್ಯಾಸ Excerpt - ಮಾಂಟ್ರಿಯಲ್