KN/690512c ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕೊಲಂಬಸ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಮ್ಮ ಶಿಫಾರಸ್ಸು ಸುಮ್ಮನೆ, ಹರೇ ಕೃಷ್ಣ ಜಪಿಸಿ. ಇದು ಸಂಸ್ಕೃತ ಪದವಾಗಿದ್ದರೂ, ಅದು ಸಮಸ್ಯೆ ಅಲ್ಲ, ಎಲ್ಲರೂ ಜಪಿಸುತ್ತಿದ್ದಾರೆ. ಆದ್ದರಿಂದ ಏನು ಕಷ್ಟ? ಯಾವುದೇ ಧಾರ್ಮಿಕ ತತ್ವವನ್ನು ತನ್ನಿ. ನಿಮಗೆ ಅಷ್ಟು ಸುಲಭವಾದದ್ದು ಕಾಣುವುದಿಲ್ಲ. ನಾವು ಸಂಪ್ರದಾಯವನ್ನು ಶಿಫಾರಸು ಮಾಡುವುದಿಲ್ಲ. ಅಂದರೆ ಅದು... ಅದು ತುಂಬಾ ಮುಖ್ಯವಾದ ವಿಷಯವಲ್ಲ. ನಾವು ಹೇಳುವುದೇನೆಂದರೆ, ಸುಮ್ಮನೆ ಜಪ ಮಾಡಿ. ಸಂಪ್ರದಾಯದ ಆಚರಣೆ ಸ್ವಲ್ಪ ಹೆಚ್ಚು ಸಹಾಯ ಮಾಡುತ್ತದೆ. ಅಷ್ಟೇ. ಇದು ಸಹಾಯ ಮಾಡುತ್ತದೆ. ಇದು ಅಗತ್ಯವಿಲ್ಲ. ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ, ಎಲ್ಲಾ ಶಕ್ತಿ ಮತ್ತು ಎಲ್ಲಾ ಸೌಂದರ್ಯ, ಎಲ್ಲಾ ಬುದ್ಧಿವಂತಿಕೆ, ಎಲ್ಲವೂ ನಾಮದಲ್ಲಿ ಇದೆ. ಸುಮ್ಮನೆ ಜಪಿಸುವುದರಿಂದ ನಾವು ಎಲ್ಲವನ್ನೂ ಪಡೆಯುತ್ತೇವೆ. ಆದರೆ ಅದಕ್ಕೆ ಸಹಾಯ ಮಾಡಲು, ಅದು ಇಲ್ಲ ... ಯಾರಾದರೂ ನಮ್ಮ ಸಂಪ್ರದಾಯವನ್ನು ಬಯಸದಿದ್ದರೆ, ಅದು ಮುಖ್ಯವಾದ ವಿಷಯವಲ್ಲ . ನಾವು ಹೇಳುವುದಿಲ್ಲ. 'ನೀವು ದಯವಿಟ್ಟು ಜಪ ಮಾಡಿ' ಎಂದು ನಾವು ಶಿಫಾರಸು ಮಾಡುತ್ತೇವೆ. ಅಷ್ಟೆ."
690512 - ಸಂಭಾಷಣೆ ಅಲೆನ್ ಗಿನ್ಸ್ಬರ್ಗ್ ಅವರೊಂದಿಗೆ - ಕೊಲಂಬಸ್