KN/690524 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಭಕ್ತನಿಗೆ ಇಂದ್ರಿಯಗಳನ್ನು ನಿಯಂತ್ರಿಸುವ ಅಗತ್ಯವಿಲ್ಲ. ಅದು ತಂತಾನೇ ನಿಯಂತ್ರಣಗೊಳ್ಳುತ್ತದೆ. ನಾವು ಪ್ರತಿಜ್ಞೆ ಮಾಡಿದಂತೆಯೇ ನಾವು ಕೃಷ್ಣ-ಪ್ರಸಾದವನ್ನು ಹೊರತುಪಡಿಸಿ ಏನನ್ನೂ ತಿನ್ನುವುದಿಲ್ಲ. ಓಹ್, ಇಂದ್ರಿಯವು ಈಗಾಗಲೇ ನಿಯಂತ್ರಣದಲ್ಲಿದೆ. ಪ್ರಶ್ನೆಯೇ ಇಲ್ಲ. ಒಬ್ಬ ಭಕ್ತನಿಗೆ, 'ನೀನು ಕುಡಿಯಬೇಡ, ಇದು ಬೇಡ, ಇದು ಬೇಡ, ಇದು ಬೇಡ' ಎಂದು ಕೇಳುವ ಪ್ರಶ್ನೆಯೇ ಇಲ್ಲ. ಎಷ್ಟೋ ಬೇಡಗಳು. ಸುಮ್ಮನೆ ಕೃಷ್ಣ-ಪ್ರಸಾದವನ್ನು ಸ್ವೀಕರಿಸುವ ಮೂಲಕ, ಅಲ್ಲಿ ಎಲ್ಲ ಬೇಡಗಳು, ಈಗಾಗಲೇ ಇದೆ. ಮತ್ತು ಅದು ತುಂಬಾ ಸುಲಭವಾಗುತ್ತದೆ. ಇತರರು, ನೀವು ಧೂಮಪಾನ ಮಾಡಬೇಡಿ ಎಂದು ವಿನಂತಿಸಿದರೆ, ಅದು ಅವನಿಗೆ ತುಂಬಾ ಕಷ್ಟಕರವಾದ ಕೆಲಸ. ಒಬ್ಬ ಭಕ್ತನಿಗೆ, ಅವನು ಯಾವುದೇ ಕ್ಷಣದಲ್ಲಿ ಬಿಡಬಹುದು. ಅವನಿಗೆ ಯಾವುದೇ ತೊಂದರೆ ಇಲ್ಲ. ಆದ್ದರಿಂದ ಅದೇ ಉದಾಹರಣೆ, ಈ ಇಂದ್ರಿಯಗಳು ನಿಸ್ಸಂದೇಹವಾಗಿ ಬಹಳ ಪ್ರಬಲವಾಗಿವೆ, ಹಾವಿನಷ್ಟೇ ಬಲವಾಗಿರುತ್ತವೆ, ಆದರೆ ನೀವು ವಿಷದ ಹಲ್ಲುಗಳನ್ನು, ವಿಷದ ಹಲ್ಲುಗಳನ್ನು ಮುರಿದರೆ,ಆಗ ಅದು ಉಗ್ರವಾಗಿರುವುದಿಲ್ಲ. ಹಾಗೆಯೇ ನೀವು ನಿಮ್ಮ ಇಂದ್ರಿಯಗಳನ್ನು ಕೃಷ್ಣನಲ್ಲಿ ತೊಡಗಿಸಿಕೊಂಡರೆ, ಇನ್ನು ಮುಂದೆ ನಿಯಂತ್ರಿಸಬೇಕಾಗೆ ಇಲ್ಲ. ಅದಾಗಲೇ ನಿಯಂತ್ರಿತವಾಗಿದೆ."
690524 - ಉಪನ್ಯಾಸ ಶ್ರೀ ಮ ಭಾ ೦೧.೦೫.೦೮-೯ - ನವ ವೃಂದಾವನ, ಯು ಯಸ್ ಏ