KN/690616b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಐಹಿಕ ಪ್ರಕೃತಿಯ ಹಿಡಿತದಲ್ಲಿದ್ದೇವೆ. ಕರ್ಮಣಾ ದೈವ-ನೇತ್ರೇಣ (ಶ್ರೀ.ಭಾ 3.31.1). ನೀವು ಪ್ರಕೃತಿಯ ನಿರ್ದಿಷ್ಟ ಗುಣದ ಪ್ರಭಾವದಲ್ಲಿ ಕೆಲಸ ಮಾಡುತ್ತಿದ್ದೀರಿ ಮತ್ತು ನೀವು ನಿಮ್ಮ ಮುಂದಿನ ಜೀವನವನ್ನು ಸಿದ್ಧಗೊಳಿಸುತ್ತಿದ್ದೀರಿ. ನೀವು ಹೀಗೆ ಹೇಳಲು ಸಾಧ್ಯವಿಲ್ಲ, 'ಸರಿ, ನಾನು ತುಂಬಾ ಸಂತೋಷವಾಗಿದ್ದೇನೆ..., ನಾನು ಅಮೇರಿಕಾದಲ್ಲಿ ಹುಟ್ಟಿದ್ದೇನೆ, ನನ್ನ ರಾಷ್ಟ್ರವು ಬಹಳ ಶ್ರೇಷ್ಠ ರಾಷ್ಟ್ರವಾಗಿದೆ ಮತ್ತು ನಾವು ತುಂಬಾ ಶ್ರೀಮಂತರಾಗಿದ್ದೇವೆ. ಹಾಗಾಗಿ ಮುಂದಿನ ಜೀವನದಲ್ಲೂ ನಾನು ಅಮೇರಿಕಾಕ್ಕೆ ಬರುತ್ತೇನೆ, ನಾನು ಇಲ್ಲೇ ನನ್ನ ಜನ್ಮವನ್ನು ಪಡೆದು ಈ ರೀತಿ ಆನಂದಿಸುತ್ತೇನೆ'. ಓ ಅದು ನಿಮ್ಮ ಕೈಯಲ್ಲಿ ಇಲ್ಲ, ಅದನ್ನು ನೀವು ಹೇಳಲು ಸಾಧ್ಯವಿಲ್ಲ. ಅದು ದೈವ-ನೇತ್ರೇಣ, ದೈವ. ದೈವ ಅಂದರೆ ಅದು ಅಪ್ರಾಕೃತ ಶಕ್ತಿ, ದೈವ. ಅದೇ ವಿಷಯ: ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ (ಭ.ಗೀ 7.14).ನೀವು ಹೇಳಲು ಸಾಧ್ಯವಿಲ್ಲ. ದೈವ-ನೇತ್ರೇಣ. ನೀವು ನಿಮ್ಮ ಜೀವನವನ್ನು ಸಿದ್ಧಗೊಳಿಸುತ್ತಿದ್ದೀರಿ. ಉನ್ನತ ಅಧಿಕಾರಿಗಳು ನಿಮಗೆ ಅವಕಾಶವನ್ನು ನೀಡುತ್ತಾರೆ. ನೀವು ನಿಮ್ಮನ್ನು ಚೆನ್ನಾಗಿ ಸಿದ್ಧಗೊಳಿಸಿದರೆ, ನಿಮಗೆ ಒಳ್ಳೆಯ ಅವಕಾಶ ದೊರೆಯುತ್ತದೆ; ನೀವು ಉನ್ನತ ಗ್ರಹದಲ್ಲಿ ಜನ್ಮ ಪಡೆಯುತ್ತೀರಿ. ಅಥವಾ ನೀವು ನಿಮ್ಮನ್ನು ಉತ್ತಮವಾಗಿ ಸಿದ್ಧಗೊಳಿಸಿದರೆ, ನಂತರ ನೀವು ಕೃಷ್ಣನ ಬಳಿಗೆ ಸಹ ಹೋಗುತ್ತೀರಿ. ಈಗ ಅದು ನಿಮ್ಮ ಆಯ್ಕೆ."
690616 - ಉಪನ್ಯಾಸ SB 01.05.13 - New Vrindaban, USA