KN/690622 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಹಾಗಾಗಿ ಶ್ರೀಮದ್-ಭಾಗವತಮ್‌ನ ಈ ಹೇಳಿಕೆಯು ತಲ್ ಲಭ್ಯತೆ ದುಃಖವದ್ ಅನ್ಯತಃ ಸುಖಮ್ (ಶ್ರೀ.ಭಾ 1.5.18). ನೀವು "ಆರ್ಥಿಕ ಅಭಿವೃದ್ಧಿಗೆ" ಪ್ರಯತ್ನ ಪಡಬೇಡಿ. ನೀಮ್ಮ ವಿಧಿ ನಿಯಮಿತಕ್ಕಿಂತ ಹೆಚ್ಚಾಗಿ ಪಡೆಯಲು ಸಾಧ್ಯವಿಲ್ಲ. ಅದು ಈಗಾಗಲೇ ನಿರ್ಧಾರವಾಗಿದೆ. ಜೀವಿಯು ವಿವಿಧ ಶ್ರೇಣಿಗಳ ಜೀವನ ಗುಣಮಟ್ಟವನ್ನು ಪಡೆಯುತ್ತದೆ, ಆದ್ದರಿಂದ ಅವು ಹಿಂದಿನ ಕರ್ಮದ ಆಧಾರಿತ, ದೈವೇನ, ದೈವ-ನೇತ್ರೇಣ (ಶ್ರೀ.ಭಾ 3.31.1), ಕರ್ಮಣ. ಅದನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ. ಅದು ಪ್ರಕೃತಿಯ ನಿಯಮ, ನೀವು ಬದಲಾಯಿಸಲು ಸಾಧ್ಯವಿಲ್ಲ. ಜೀವನ ವೈವಿಧ್ಯಗಳು, ಸ್ಥಾನದ ವೈವಿಧ್ಯಗಳು, ವ್ಯಾಪಾರದ ವೈವಿಧ್ಯತೆಗಳನ್ನು ಏಕೆ ಪಡೆದುಕೊಂಡಿದ್ದೀರಿ. ಅದು ವಿಧಿ ನಿರ್ಧರಿತ. ವಿಷಯಃ ಖಲು ಸರ್ವತಃ ಸ್ಯಾತ್ (ಶ್ರೀ.ಭಾ 11.9.29). ವಿಷಯಃ , ಈ ಐಹಿಕ ಆನಂದ ಎಂದರೆ ತಿನ್ನುವುದು, ನಿದ್ರಿಸುವುದು, ಮೈಥುನ ಮತ್ತು ರಕ್ಷಣೆ - ಇವಷ್ಟೇ... ಕೇವಲ ಮಾನದಂಡ ಮಾತ್ರ ಬೇರೆ, ನಾನು ಏನನ್ನೋ ತಿನ್ನುತ್ತಿದ್ದೇನೆ, ನೀನು ಏನನ್ನೋ ತಿನ್ನುತ್ತಿದ್ದೀಯ, ಬಹುಶಃ, ನನ್ನ ಲೆಕ್ಕಾಚಾರದಲ್ಲಿ, ನೀನು ತುಂಬಾ ಚೆನ್ನಾಗಿ ತಿನ್ನುತ್ತಿಲ್ಲ, ನಿನ್ನ ಲೆಕ್ಕಾಚಾರದಲ್ಲಿ ನಾನು ತುಂಬಾ ಚೆನ್ನಾಗಿ ತಿನ್ನುತ್ತಿಲ್ಲ, ಆದರೆ ತಿನ್ನುವುದು ಅದೇ, ನೀನೂ ತಿನ್ನುತ್ತಿದ್ದೀಯ, ನಾನೂ ತಿನ್ನುತ್ತಿದ್ದೆನೆ, ಆದ್ದರಿಂದ ಮೂಲಭೂತ ತತ್ವವನ್ನು ತೆಗೆದುಕೊಂಡರೆ, ಭೌತಿಕ ಜಗತ್ತಿನಲ್ಲಿ ಸಂತೋಷದ ಮಾನದಂಡವೆಲ್ಲವೂ ಒಂದೇ. ಆದರೆ ನಾವು ಸೃಷ್ಟಿಸಿದ್ದೇವೆ, 'ಇದು ಉತ್ತಮ ಮಾನದಂಡವಾಗಿದೆ. ಅದು ಕೆಟ್ಟ ಮಾನದಂಡವಾಗಿದೆ. ಇದು ತುಂಬಾ ಚೆನ್ನಾಗಿದೆ. ಇದು ತುಂಬಾ ಕೆಟ್ಟಗಿದೆ.”

690622 - ಉಪನ್ಯಾಸ SB 01.05.18-19 - New Vrindaban, USA