KN/690712 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಯೋಚಿಸಿದರೆ ..., ಖೈದಿಯೊಬ್ಬರು ಯೋಚಿಸಿದರೆ "ನಾನು ಈ ಕಾರಾಗಾರದಲ್ಲಿದ್ದೇನೆ. ಜೈಲಿನ ಅಧೀಕ್ಷಕರನ್ನು ನನ್ನ ಕೋಶವನ್ನು ಬದಲಾಯಿಸಲು ನಾನು ವಿನಂತಿಸುತ್ತೇನೆ ಮತ್ತು ನಾನು ಸಂತೋಷವಾಗಿರುತ್ತೇನೆ." ಇದು ತಪ್ಪು ಕಲ್ಪನೆ, ಜೈಲಿನ ಗೋಡೆಗಳ ಒಳಗೆ ಇರುವಷ್ಟು ದಿನ ಸಂತೋಷವಾಗಿರಲು ಸಾಧ್ಯವಿಲ್ಲ. ಒಬ್ಬನು ಸ್ವತಂತ್ರನಾಗಬೇಕು. ಅದು ನಮ್ಮ ಜೀವನದ ಗುರಿಯಾಗಿರಬೇಕು. ಆದ್ದರಿಂದ ನಾವು ಕೋಶವನ್ನು ಬದಲಾಯಿಸುವ ಮೂಲಕ ಸಂತೋಷವಾಗಿರಲು ಪ್ರಯತ್ನಿಸುತ್ತಿದ್ದೇವೆ, ಈ "ಇಸಮ್" ನಿಂದ ಆ "ಇಸಂ" ಗೆ, ಬಂಡವಾಳಶಾಹಿಯಿಂದ ಸಮತಾವಾದಕ್ಕೆ (ಕಮ್ಯುನಿಸಂ) , ಸಮತಾವಾದದಿಂದ ಈ "ಇಸಂ" ಗೆ, ಆ "ಇಸಂ" ಗೆ. ಅದು ನಮಗೆ ಸಂತೋಷವನ್ನುಂಟು ಮಾಡುವುದಿಲ್ಲ. ನೀವು ಈ "ಇಸಂ", ಈ ಭೌತವಾದದಿಂದ ಸಂಪೂರ್ಣವಾಗಿ ಬದಲಾಗಬೇಕು, ಅಷ್ಟೆ. ಆಗ ನೀವು ಸಂತೋಷವಾಗಿರುತ್ತೀರಿ. ಅದು ನಮ್ಮ ಕೃಷ್ಣ ಪ್ರಜ್ಞೆ."
690712 - ಉಪನ್ಯಾಸ ಶ್ರೀ ಮ ಭಾ - ಲಾಸ್ ಎಂಜಲೀಸ್