KN/690908b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹ್ಯಾಂಬರ್ಗ್

Revision as of 14:04, 22 August 2022 by Shiv Kumar (talk | contribs)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಮಾಯೆ ಇದ್ದಾಳೆ. ಆದ್ದರಿಂದ ಕೃಷ್ಣನು ಹೇಳುತ್ತಾನೆ, 'ಮಾಯೆಯು ತುಂಬಾ ಬಲಶಾಲಿ'. ಆದರೆ ನೀವು ಕೃಷ್ಣನನ್ನು ತುಂಬಾ ..., ಹೆಚ್ಚು ಬಲವಾಗಿ ಹಿಡಿದರೆ, ಮಾಯೆಯು ಏನನ್ನೂ ಮಾಡಲಾರದು. ನಿಮ್ಮ ಜಪವನ್ನು ಯಾವುದಾದರೂ ಪ್ರತಿರೋಧಿಸುತ್ತಿದ್ದರೆ, ಆಗ ನೀವು ಹೆಚ್ಚು ಗಟ್ಟಿಯಾಗಿ ಜಪವನ್ನು ಮಾಡಬೇಕಾಗುತ್ತದೆ. : ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ/ ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ. ಆದ್ದರಿಂದ ನೀವು ಮಾಯೆಯನ್ನು ಸೋಲಿಸಬಹುದು. ಔಷಧಿ ಒಂದೇ. ಕನಿಷ್ಠ, ನಾನು ಹಾಗೆ ಮಾಡುತ್ತೇನೆ. ನಾನು ಯಾವುದಾದರೂ ಅಪಾಯದಲ್ಲಿರುವಾಗ, ನಾನು ಹರೇ ಕೃಷ್ಣ ಎಂದು ಜೋರಾಗಿ ಜಪಿಸುತ್ತೇನೆ: ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ/ (ನಗು) ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ. ಅಷ್ಟೇ. ಭಕ್ತಿವಿನೋದ್ ಠಾಕೂರ ......... ಅಲ್ಲೊಂದು ಪದ್ಯವಿದೆ: ಜಾಯ್ ಸಕಲ್ ಬಿಪೋದ್ ಗಯ ಭಕ್ತಿವಿನೋದ್ ಬೋಲೆ ಜಖೋನ್ ಒ-ನಾಮ್ ಗಾಯಿ (ಗೀತಾಾವಳಿಯಿಂದ). ಅವರು ಹೇಳುತ್ತಾರೆ, "ನಾನು ಈ ಹರೇ ಕೃಷ್ಣನನ್ನು ಜಪಿಸಿದ ತಕ್ಷಣ, ನಾನು ಎಲ್ಲಾ ಅಪಾಯಗಳಿಂದ ತಕ್ಷಣವೇ ಮುಕ್ತನಾಗುತ್ತೇನೆ."
690908 - ಸಂಭಾಷಣೆ - ಹ್ಯಾಂಬರ್ಗ್