KN/691201b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಂಡನ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆಶ್ಲಿಷ್ಯ ವಾ:ಪಾದ- ರತಾಂ ಪಿನಸ್ತು ಮಾಮ್
ಅದರ್ಶನಾನ್ ಮರ್ಮ-ಹತಾಂ ಕರೋತು ವಾ
(ಚೈ ಚ ಅಂತ್ಯ ಲೀಲಾ 20.47)

ಆದ್ದರಿಂದ ಇದು ಒಂದು ದೊಡ್ಡ ವಿಜ್ಞಾನವಾಗಿದೆ, ಮತ್ತು ನೀವು ಸಂಪೂರ್ಣ ಜ್ಞಾನವನ್ನು ಹೊಂದಬಹುದು. ಹಲವಾರು ಪುಸ್ತಕಗಳು ಮತ್ತು ವ್ಯಕ್ತಿಗಳು ಇರುವವು ; ನೀವು ಅದರ ಲಾಭ ಪಡೆಯಬಹುದು. ದುರದೃಷ್ಟವಶಾತ್, ಈ ಯುಗದಲ್ಲಿ ಅವರು ಸ್ವಯಂ-ಸಾಕ್ಷಾತ್ಕಾರದಲ್ಲಿ ತುಂಬಾ ನಿರ್ಲಕ್ಷ್ಯರಾಗಿದ್ದಾರೆ. ಅದು ಆತ್ಮಹತ್ಯಾ ನೀತಿಯಾಗಿದೆ, ಏಕೆಂದರೆ ಈ ಮಾನವ ದೇಹವು ಮುಗಿದ ತಕ್ಷಣ, ನೀವು ಮತ್ತೆ ಭೌತಿಕ ಪ್ರಕೃತಿಯ ನಿಯಮಗಳ ಹಿಡಿತದಲ್ಲಿದ್ದೀರಿ. ನೀವು ಎಲ್ಲಿಗೆ ಹೋಗುವಿರಿ, ಯಾವ ದೇಹವನ್ನು ಪಡೆಯುವಿರಿ ಎಂದು ನಿಮಗೆ ತಿಳಿದಿಲ್ಲ. ನೀವು ಪತ್ತೆಹಚ್ಚಲು ಆಗುವುದಿಲ್ಲ; ಅದು ಕೆಳಗಿದೆ... ನೀವು ಆದ ತಕ್ಷಣ..., ಕೆಲವು ಅಪರಾಧಗಳನ್ನು ಮಾಡಿದರೆ, ತಕ್ಷಣ ನಿಮ್ಮನ್ನು ಪೊಲೀಸರು ಬಂಧಿಸುತ್ತಾರೆ, ಮತ್ತು ನಂತರ ನಿಮಗೆ ಏನಾಗುತ್ತದೆ ಎಂದು ನಿಮಗೆ ತಿಳಿದಿಲ್ಲ. ಅದು ನಿಮ್ಮ ನಿಯಂತ್ರಣದಲ್ಲಿಲ್ಲ. ಆದ್ದರಿಂದ, ನೀವು ಎಲ್ಲಿಯವರೆಗೆ ಪ್ರಜ್ಞಾವಂತರಾಗಿರುವಿರೋ, ಅಪರಾಧಗಳನ್ನು ಮಾಡಬೇಡಿ ಮತ್ತು ಪೊಲೀಸರಿಂದ ಬಂಧಿಸಲ್ಪಡಬೇಡಿ. ಅದು ನಮ್ಮ ಜಾಗೃತ, ಸ್ಪಷ್ಟ ಪ್ರಜ್ಞೆ. "

691201 - ಉಪನ್ಯಾಸ - ಲಂಡನ್