KN/660530 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಒಬ್ಬ ಸಾಧು ಎಲ್ಲಾ ಜೀವಾತ್ಮಗಳ ಸ್ನೇಹಿತ. ಅವನು ಮಾನವಕುಲದ ಸ್ನೇಹಿತ ಮಾತ್ರವಲ್ಲ. ಅವನು ಪ್ರಾಣಿಗಳ ಸ್ನೇಹಿತ. ಅವನು ಮರಗಳ ಸ್ನೇಹಿತ. ಅವನು ಇರುವೆಗಳು, ಹುಳುಗಳು, ಸರೀಸೃಪಗಳು, ಸರ್ಪಗಳು - ಎಲ್ಲರ ಸ್ನೇಹಿತ. ತಿತಿಕ್ಷ್ವಃ ಕಾರುಣಿಕಾಃ ಸುಹೃದಃ ಸರ್ವ-ದೇಹಿನಾಂ. ಮತ್ತು ಅಜಾತ-ಶತ್ರು. ಮತ್ತು ಅವನು ಎಲ್ಲರ ಸ್ನೇಹಿತನಾಗಿರುವುದರಿಂದ ಅವನಿಗೆ ಶತ್ರುಗಳಿಲ್ಲ. ಆದರೆ ದುರದೃಷ್ಟವಶಾತ್ ಜಗತ್ತು ಎಷ್ಟು ಅಧಾರ್ಮಿಕವಾಗಿದೆಯೆಂದರೆ, ಅಂತಹ ಸಾಧುವಿಗು ಸಹ ಶತ್ರು ಇರುತ್ತಾನೆ. ಪ್ರಭು ಯೇಸು ಕ್ರಿಸ್ತನಿಗೆ ಕೆಲವು ಶತ್ರುಗಳು ಇದ್ದಂತೆ, ಮತ್ತು ಮಹಾತ್ಮ ಗಾಂಧಿಯವರಿಗು ಅವರನ್ನು ಹತ್ಯೆ ಮಾಡಿದ ಕೆಲವು ಶತ್ರುಗಳಿದ್ದರು. ಆದ್ದರಿಂದ ಜಗತ್ತು ನಂಬಬಾರದಾಗಿದೆ. ಒಬ್ಬ ಸಾಧುವಿಗು ಕೂಡ ಕೆಲವು ಶತ್ರುಗಳಿದ್ದಾರೆ. ನೋಡಿದಿರಾ? ಆದರೆ ಸಾಧು, ಅವನ ಕಡೆಯಿಂದ ಅವನಿಗೆ ಶತ್ರುಗಳಿಲ್ಲ. ಅವನು ಎಲ್ಲರ ಸ್ನೇಹಿತ. ತಿತಿಕ್ಷ್ವಃ ಕಾರುಣಿಕಾಃ ಸುಹೃದಃ ಸರ್ವ-ದೇಹಿನಾಂ (ಶ್ರೀ.ಭಾ 3.25.21). ಮತ್ತು ಅಜಾತ-ಶತ್ರವಃ, ಶಾಂತಾಃ, ಯಾವಾಗಲೂ ಶಾಂತಿಯುತವಾಗಿರುವುದು. ಇವುಗಳು ಸಾಧು, ಸಂತ ವ್ಯಕ್ತಿಗಳ ಗುಣಗಳು."
660530 - ಉಪನ್ಯಾಸ BG 03.21-25 - ನ್ಯೂ ಯಾರ್ಕ್