KN/661208 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಭೌತವಾದಿಗಳಿಗೆ ಸಂಬಂಧಿಸಿದಂತೆ, ಅವರು ಅಗಿದದ್ದನ್ನು ಪುನಃ ಅಗಿಯುತ್ತಿದ್ದಾರೆ. ಪುನಃ ಪುನಶ್ ಚರ್ವಿತ-ಚರ್ವಣಾನಾಮ್ (ಶ್ರೀ.ಭಾ 7.5.30). ಕೊನೆಯ ದಿನ ನಾನು ಕೊಟ್ಟ ಈ ಉದಾಹರಣೆ, ಅದೆ ಕಬ್ಬಿನ ಬಗ್ಗೆ, ಅದರಿಂದ ಎಲ್ಲಾ ರಸವನ್ನು ಅಗಿದು ತೆಗೆಯಲಾಗಿದೆ, ಮತ್ತು ಅದನ್ನು ಮತ್ತೆ ಭೂಮಿಯ ಮೇಲೆ ಎಸೆಯಲಾಗುತ್ತದೆ, ಮತ್ತು ಯಾರೋ ಅಗಿಯುತ್ತಾರೆ, ಆದ್ದರಿಂದ ಯಾವುದೇ ರಸವಿಲ್ಲ. ಆದ್ದರಿಂದ ನಾವು ಒಂದೇ ವಿಷಯವನ್ನು ಪುನರಾವರ್ತಿಸುತ್ತಿದ್ದೇವೆ. ಈ ಜೀವನದ ಪ್ರಕ್ರಿಯೆಯು ನಮಗೆ ಸಂತೋಷವನ್ನು ನೀಡಬಹುದೇ ಎಂದು ನಾವು ಪ್ರಶ್ನಿಸುವುದಿಲ್ಲ. ಆದರೆ ನಾವು ಪುನಃ ಪುನಃ ಪ್ರಯತ್ನಿಸುತ್ತಿದ್ದೇವೆ, ಒಂದೇ ವಿಷಯವನ್ನು ಪ್ರಯತ್ನಿಸುತ್ತಿದ್ದೇವೆ. ಇಂದ್ರಿಯ ತೃಪ್ತಿಯ ಮೂಲ ಉದ್ದೇಶ, ಮತ್ತು ಅತ್ಯುನ್ನತವಾದ ಇಂದ್ರಿಯ ತೃಪ್ತಿಯು ಮೈಥುನ. ಆದ್ದರಿಂದ ನಾವು ಪ್ರಯತ್ನಿಸುತ್ತಿದ್ದೇವೆ, ಅಗಿಯುತ್ತೇವೆ, ತ್ಯಜಿಸುತ್ತೇವೆ, ಹಿಂಡಿತೆಗೆಯುತ್ತೇವೆ. ಆದರೆ ಅದು ಸಂತೋಷದ ಪ್ರಕ್ರಿಯೆಯಲ್ಲ. ಸಂತೋಷವು ವಿಭಿನ್ನವಾಗಿದೆ. ಸುಖಮ್ ಅತ್ಯಂತಿಕಮ್ ಯತ್ ತದ್ ಅತೀಂದ್ರಿಯ-ಗ್ರಾಹ್ಯಂ (ಭ.ಗೀ 6.21). ನಿಜವಾದ ಸಂತೋಷವು ಅತೀಂದ್ರಿಯವಾಗಿದೆ. ಅತೀಂದ್ರಿಯ ಎಂದರೆ ನನ್ನ ಸ್ಥಾನ ಯಾವುದು, ಮತ್ತು ನನ್ನ ಜೀವನದ ಪ್ರಕ್ರಿಯೆ ಏನು ಎಂಬುದನ್ನು ನಾನು ಅರ್ಥಮಾಡಿಕೊಳ್ಳಬೇಕು. ಈ ರೀತಿಯಾಗಿ ಈ ಕೃಷ್ಣ ಪ್ರಜ್ಞೆ ನಿಮಗೆ ಕಲಿಸುತ್ತದೆ.”
661208 - ಉಪನ್ಯಾಸ BG 09.22-23 - ನ್ಯೂ ಯಾರ್ಕ್