KN/670207b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
" ಒಬ್ಬ, ಸನ್ಯಾಸಿಯನ್ನು ನೋಡಿದ ತಕ್ಷಣವೇ, ತನ್ನ ಗೌರವವನ್ನು ಕೂಡಲೇ ಅರ್ಪಿಸಬೇಕು. ಅವನು ತನ್ನ ಗೌರವವನ್ನು ಅರ್ಪಿಸದಿದ್ದರೆ, ಅವನು ಶಿಕ್ಷೆಯಾಗಿ ಒಂದು ದಿನ ಉಪವಾಸ ಮಾಡಬೇಕೆಂದು ಆದೇಶಿಸಲಾಗಿದೆ. ಅವನು ತಿನ್ನಬಾರದು." ಓಹ್, ನಾನು ಸನ್ಯಾಸಿಯನ್ನು ನೋಡಿದೆ, ಆದರೆ ನಾನು ನನ್ನ ಗೌರವವನ್ನು ನೀಡಲಿಲ್ಲ. ಆದ್ದರಿಂದ ಪ್ರಾಯಶ್ಚಿತ್ತವಾಗಿ ನಾನು ಒಂದು ದಿನ ಉಪವಾಸ ಮಾಡಬೇಕು. "ಇದು ಕಟ್ಟಣೆ. ಆದ್ದರಿಂದ ಚೈತನ್ಯ ಮಹಾಪ್ರಭುಗಳು, ಅವರು ಸ್ವತಃ ದೇವರಾಗಿದ್ದರು, ಆದರೆ ಅವರ ನಡವಳಿಕೆ ಮತ್ತು ಅವರ ಶಿಷ್ಟಾಚಾರವು ಅತ್ಯುತ್ತಮವಾಗಿತ್ತು. ಅವರು ಸನ್ಯಾಸಿಗಳನ್ನು ನೋಡಿದ ಕೂಡಲೇ, ಅವರು ತಮ್ಮ ಗೌರವವನ್ನು ಅರ್ಪಿಸಿದರು. ಪಾದ ಪ್ರಕ್ಷಾಲನ ಕರಿ ವಸಿಲಾ ಸೇಈ ಸ್ಥಾನೇ (ಚೈ.ಚ ಆದಿ ೭.೫೯). ಮತ್ತು ಪದ್ದತಿಯಾಗಿ ಒಬ್ಬನು ಹೊರಗಿನಿಂದ ಬಂದಾಗ, ಅವನು ಕೋಣೆಗೆ ಪ್ರವೇಶಿಸುವ ಮೊದಲು ತನ್ನ ಪಾದಗಳನ್ನು ತೊಳೆಯಬೇಕು, ವಿಶೇಷವಾಗಿ ಸನ್ಯಾಸಿಗಾಗಿ. ಅವರು ತನ್ನ ಪಾದಗಳನ್ನು ತೊಳೆದು ಹೊರಗೆ ಕುಳಿತುಕೊಂಡರು ಎಲ್ಲಿ ಇತರ ಸನ್ಯಾಸಿ ಕುಳಿತಿದ್ದರೋ, ಸ್ವಲ್ಪ ದೂರದಲ್ಲಿ, ಅದೇ ಸ್ಥಳದಲ್ಲಿ ಎಲ್ಲಿ ಅವರು ತಮ್ಮ ಪಾದಗಳನ್ನು ತೊಳೆದರೋ."
670207 - ಉಪನ್ಯಾಸ ಚೈ.ಚ. ಆದಿ ೦೭.೪೯-೬೫ - ಸ್ಯಾನ್ ಫ್ರಾನ್ಸಿಸ್ಕೋ