KN/670329b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವಿರಹ ಎಂದರೆ ಪ್ರತ್ಯೇಕತೆ. ಪ್ರತ್ಯೇಕತೆ." ಕೃಷ್ಣ, ನೀನು ಎಷ್ಟು ಓಳ್ಳೆಯವನು, ನೀನು ಎಷ್ಟು ಕರುಣಾಮಯಿ, ನೀನು ಎಷ್ಟು ಒಳ್ಳೆಯವನು. ಆದರೆ ನಾನು ತುಂಬಾ ಅಯೋಗ್ಯನಾಗಿದ್ದೇನೆ, ನಾನು ಪಾಪದಿಂದ ತುಂಬಿದ್ದೇನೆ, ನಾನು ನಿನ್ನನ್ನು ನೋಡಲಾರೆ. ನಿನ್ನನ್ನು ನೋಡಲು ನನಗೆ ಯಾವುದೇ ಅರ್ಹತೆ ಇಲ್ಲ. "ಆದ್ದರಿಂದ ಈ ರೀತಿಯಾಗಿ, ಒಬ್ಬರು ಕೃಷ್ಣನ ಅಗಲುವಿಕೆಯನ್ನು ಅನುಭವಿಸಿದರೆ,"ಕೃಷ್ಣ, ನಾನು ನಿನ್ನನ್ನು ನೋಡಬೇಕೆಂದು ಬಯಸುತ್ತೇನೆ, ಆದರೆ ನಾನು ನಿನ್ನನ್ನು ನೋಡಲು ಸಾಧ್ಯವಾಗದಷ್ಟು ಅನರ್ಹನಾಗಿದ್ದೇನೆ, " ಎಂಬ ಈ ವಿರಹದ ಭಾವನೆಯು ನಿಮ್ಮನ್ನು ಕೃಷ್ಣ ಪ್ರಜ್ಞೆಯಲ್ಲಿ ಸಂಪನ್ನರಾಗಿಸುತ್ತದೆ. ಪ್ರತ್ಯೇಕತೆಯ ಭಾವನೆ. "ಕೃಷ್ಣ, ನಾನು ನಿನ್ನನ್ನು ನೋಡಿದ್ದೇನೆ ಎಂಬುದಲ್ಲ. ಮುಗಿದಿದೆ. ಸರಿ. ನಾನು ನಿನ್ನನ್ನು ಅರ್ಥಮಾಡಿಕೊಂಡಿದ್ದೇನೆ. ಮುಗಿದಿದೆ. ನನ್ನ ಎಲ್ಲಾ ವ್ಯವಹಾರಗಳು ಮುಗಿದವು. "ಅಲ್ಲ !" ನಾನು ಕೃಷ್ಣನನ್ನು ನೋಡಲು ಅನರ್ಹನಾಗಿದ್ದೇನೆ "ಎಂದು ನಿರಂತರವಾಗಿ ನಿಮ್ಮಲ್ಲೆ ಯೋಚಿಸಿ. ಅದು ನಿಮ್ಮನ್ನು ಕೃಷ್ಣ ಪ್ರಜ್ಞೆಯಲ್ಲಿ ಉತ್ಕೃಷ್ಟಗೊಳಿಸುತ್ತದೆ.
670329 - ಉಪನ್ಯಾಸ - ಸ್ಯಾನ್ ಫ್ರಾನ್ಸಿಸ್ಕೋ