KN/680324 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಬ್ರಾಹ್ಮಣತೆಯ ಅರ್ಹತೆಗಳನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ: ಸತ್ಯಂ ಶೌಚ ಶಮ ದಮ ತಿತಿಕ್ಷ ಆರ್ಜವಂ, ಜ್ಞಾನಂ ವಿಜ್ಞಾನಂ ಆಸ್ತಿಕ್ಯಮ್ ಬ್ರಹ್ಮ-ಕರ್ಮ ಸ್ವಭಾವ-ಜಮ್ (ಭ.ಗೀತಾ ೧೮.೪೨). ಯಾರು ನಿಜವಾಗಿಯೂ ಬ್ರಾಹ್ಮಣರೋ, ಅವರು ಸತ್ಯವಂತರಾಗಿರಬೇಕು, ಯಾವಾಗಲೂ ಸ್ವಚ್ಛವಾಗಿರಬೇಕು, ಒಳಗೂ ಮತ್ತು ಹೊರಗೂ. ಸತ್ಯತನ, ಸ್ವಚ್ಛತೇ ಮತ್ತು ಇಂದ್ರಿಯಗಳನ್ನು ನಿಯಂತ್ರಿಸುವುದು, ಶಮ ದಮ, ಮನಸ್ಸನ್ನು ನಿಯಂತ್ರಿಸುವುದು, ಇಂದ್ರಿಯಗಳನ್ನು ನಿಯಂತ್ರಿಸುವುದು, ಮನಸ್ಸನ್ನು ನಿಯಂತ್ರಿಸುವುದು; ಶಮ ದಮ ತಿತಿಕ್ಷ, ಸಹನೆ, ತಿತಿಕ್ಷ, ಸಹನೆ; ಆರ್ಜವಮ್, ಸರಳತೆ; ಮತ್ತು ಜ್ಞಾನಂ, ಅತ್ಯಧಿಕ ಬುದ್ಧಿವಂತನಾಗಿರಬೇಕು; ವಿಜ್ಞಾನಂ, ಜೀವನದಲ್ಲಿ ಪ್ರಾಯೋಗಿಕ ಅನ್ವಯಿಕೆ; ಜ್ಞಾನಂ ವಿಜ್ಞಾನಂ ಆಸ್ತಿಕ್ಯಮ್, ಧರ್ಮಗ್ರಂಥಗಳಲ್ಲಿ ಮತ್ತು ದೇವರಲ್ಲಿ ಅಥವಾ ಕೃಷ್ಣನಲ್ಲಿ ಸಂಪೂರ್ಣ ವಿಶ್ವಾಸ, ಆಸ್ತಿಕ್ಯಮ್. ಬ್ರಹ್ಮ-ಕರ್ಮ ಸ್ವಭಾವ-ಜಮ್: ಇವು ಬ್ರಾಹ್ಮಣನ ಪ್ರಾಕೃತ ಕರ್ತವ್ಯಗಳು ಅಥವಾ ಕೆಲಸ."
680324 - ಉಪನ್ಯಾಸ ದೀಕ್ಷೆ - ಸ್ಯಾನ್ ಫ್ರಾನ್ಸಿಸ್ಕೋ