KN/680811b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಚೈತನ್ಯ ಚರಿತಾಮೃತದಲ್ಲಿ ಹೇಳಿದೆ, ಗುರು-ಕೃಷ್ಣ ಕೃಪಾಯಾ ಪಾಯ ಭಕ್ತಿ-ಲತಾ-ಬೀಜ (ಚೈ ಚ ಮದ್ಯ ೧೯.೧೫೧): ಅಲ್ಲಿ ಕೃಷ್ಣ ಮತ್ತು ಗುರುವಿನ ಸಂಯೋಜಿತ ಕರುಣೆ ಇರುವುದು. ಆಗ ನಮ್ಮ ಕೃಷ್ಣ ಪ್ರಜ್ಞೆಯ ಗುರಿ ಯಶಸ್ವಿಯಾಗುತ್ತದೆ. ಇದೆ ರಹಸ್ಯ. ಕೃಷ್ಣನು ಯಾವಾಗಲೂ ನಿಮ್ಮೊಳಗೆ ಇರುತ್ತಾನೆ. ಈಶ್ವರಃ ಸರ್ವ-ಭೂತಾನಾಮ್ ಹೃದ್ದೇಶೇ - ಅರ್ಜುನ ತಿಷ್ಠತಿ (ಭ.ಗೀತಾ ೧೮.೬೧). ಆದ್ದರಿಂದ ಕೃಷನಿಗೆ ನಿಮ್ಮ ಎಲ್ಲ ಉದ್ದೇಶವೂ ತಿಳಿದಿದೆ, ಮತ್ತು ನೀವು ನಿರ್ಧರಿಸಿದಂತೆ ಕೆಲಸ ಮಾಡಲು ಅವನು ನಿಮಗೆ ಅವಕಾಶವನ್ನು ನೀಡುತ್ತಾನೆ. ಈ ಭೌತಿಕ ಜಗತ್ತನ್ನು ಆನಂದಿಸಲು ನೀವು ನಿರ್ಧರಿಸಿದರೆ, ನೀವು ತುಂಬಾ ಒಳ್ಳೆಯ ಉದ್ಯಮಿ, ಉತ್ತಮ ರಾಜಕಾರಣಿ, ಬಹಳ ಕುತಂತ್ರದ ಮನುಷ್ಯನಾಗುವುದು ಹೇಗೆ ಎಂದು ಕೃಷ್ಣ ನಿಮಗೆ ಬುದ್ಧಿವಂತಿಕೆಯನ್ನು ನೀಡುತ್ತಾನೆ ಇದರಿಂದ ನೀವು ಹಣವನ್ನು ಸಂಪಾದಿಸಬಹುದು ಮತ್ತು ಇಂದ್ರಿಯಗಳನ್ನು ಆನಂದಿಸಬಹುದು. ಕೃಷ್ಣನು ನಿಮಗೆ ಬುದ್ಧಿವಂತಿಕೆಯನ್ನು ನೀಡುತ್ತಾನೆ"
680811 - ಉಪನ್ಯಾಸ ಬ್ರಾಹ್ಮಣ ದೀಕ್ಷೆ - ಮಾಂಟ್ರಿಯಲ್