KN/681018b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಯಾವ ರೀತಿಯಲ್ಲಿ ನೀವು ಸಾವಿರ ಮತ್ತು ಸಾವಿರಾರು ಮೈಲುಗಳಷ್ಟು ದೂರಕ್ಕೆ ಟೆಲಿವಿಷನ್ ಚಿತ್ರ ಅಥವಾ ನಿಮ್ಮ ರೇಡಿಯೊ ಧ್ವನಿಯನ್ನು ವರ್ಗಾಯಿಸಬಹುದೋ, ಅದೇ ರೀತಿ, ನೀವೇ ನಿಮ್ಮನ್ನು ತಯಾರಿ ಮಾಡಿಕೊಳ್ಳಲು ಸಾಧ್ಯವಾದರೆ, ನೀವು ಯಾವಾಗಲೂ ಗೋವಿಂದನನ್ನು ನೋಡಬಹುದು. ಇದು ಕಷ್ಟವೇನಲ್ಲ. ಇದನ್ನು ಬ್ರಹ್ಮ-ಸಂಹಿತದಲ್ಲಿ, ಪ್ರೇಮಾಂಜನ-ಚುರಿತ-ಭಕ್ತಿ-ವಿಲೋಚನೇನ ಎಂದು ಹೇಳಲಾಗಿದೆ. ಸುಮ್ಮನೆ ನೀವು ನಿಮ್ಮ ಕಣ್ಣುಗಳನ್ನು, ನಿಮ್ಮ ಮನಸ್ಸನ್ನು ಆ ರೀತಿಯಲ್ಲಿ ಸಿದ್ಧಪಡಿಸಬೇಕು. ನಿಮ್ಮ ಹೃದಯದೊಳಗೆ ಇಲ್ಲಿ ದೂರ ದರ್ಶನದ ಒಂದು ಪೆಟ್ಟಿಗೆ ಇದೆ. ಇದು ಯೋಗದ ಪರಿಪೂರ್ಣತೆ. ನೀವು ಒಂದು ಯಂತ್ರ ಅಥವಾ ಟೆಲಿವಿಷನ್ ಸೆಟ್ ಅನ್ನು ಖರೀದಿಸಬೇಕಾಗಿಲ್ಲ. ಅದು ಇದೆ, ಮತ್ತು ದೇವರು ಕೂಡ ಇದ್ದಾನೆ. ನಿಮಗೆ ಆ ಯಂತ್ರ ದೊರಕಿದರೆ ನೀವು ನೋಡಬಹುದು, ನೀವು ಕೇಳಬಹುದು, ಮಾತನಾಡಬಹುದು, ನೀವು ಅದನ್ನು ಸರಿಪಡಿಸುತ್ತೀರಿ, ಅಷ್ಟೆ. ದುರಸ್ತಿ ಪ್ರಕ್ರಿಯೆಯು ಕೃಷ್ಣ ಪ್ರಜ್ಞೆ. "
681018 - ಉಪನ್ಯಾಸ - ಸಿಯಾಟಲ್