KN/690102 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆಧ್ಯಾತ್ಮಿಕ ಗುರುವು ಗುರುಪರಂಪರೆಯಲ್ಲಿರುವವರು ಎಂದು ನಮಗೆ ಎಂದಿಗೂ ನೆನಪಿನಲ್ಲಿರಬೇಕು. ದೇವೋತ್ತಮ ಪರಮಪುರುಷನೇ ಆದಿ ಆಧ್ಯಾತ್ಮಿಕ ಗುರುವು. ಅವನು ತನ್ನ ಶಿಷ್ಯನಾದ ಬ್ರಹ್ಮನನ್ನು ಆಶೀರ್ವದಿಸುತ್ತಾನೆ. ಬ್ರಹ್ಮ ತನ್ನ ಶಿಷ್ಯನಾದ ನಾರದನನ್ನು ಆಶೀರ್ವದಿಸುತ್ತಾನೆ. ನಾರದ ತನ್ನ ಶಿಷ್ಯನಾದ ವ್ಯಾಸನನ್ನು ಆಶೀರ್ವದಿಸುತ್ತಾನೆ. ವ್ಯಾಸ ತನ್ನ ಶಿಷ್ಯನಾದ ಮಧ್ವಾಚಾರ್ಯನನ್ನು ಆಶೀರ್ವದಿಸುತ್ತಾನೆ. ಅಂತೆಯೇ, ಆಶೀರ್ವಾದ ಮುನ್ನಡೆಯುತ್ತಿದೆ. ರಾಜವಂಶದಂತೆ – ಸಿಂಹಾಸನವು ಗುರು ಪಾರಂಪರ್ಯವಾಗಿ ಅಥವ ವಂಶ ಪಾರಂಪರ್ಯವಾಗಿ ಪಡೆಯಲಾಗುತ್ತದೆ – ಹಾಗೆಯೇ ಈ ಶಕ್ತಿಯನ್ನೂ ಕೂಡ ದೇವೋತ್ತಮ ಪರಮಪುರುಷನಿಂದ ಸ್ವೀಕರಿಸ ಬೇಕು. ಯುಕ್ತವಾದ ಮೂಲದಿಂದ ಶಕ್ತಿಯನ್ನು ಪಡೆಯದೆ ಯಾರೂ ಬೋಧಿಸಲಾರರು, ಆಧ್ಯಾತ್ಮಿಕ ಗುರುವಾಗಲಾರರು."
690102 - ಉಪನ್ಯಾಸ Purport to Sri-Sri-Gurv-astakam - ಲಾಸ್ ಎಂಜಲೀಸ್