KN/690430 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಜೀವನದ ಭೌತಿಕ ಪರಿಕಲ್ಪನೆಯಲ್ಲಿ ಅಥವಾ ಜೀವನದ ದೈಹಿಕ ಪರಿಕಲ್ಪನೆಯಲ್ಲಿ, ನಮ್ಮ ಇಂದ್ರಿಯಗಳು ಬಹಳ ಮಹತ್ವದ್ದಾಗಿವೆ ಎಂದು ಭಗವಾನ್ ಕೃಷ್ಣ ಹೇಳುತ್ತಾರೆ. ಅದು ಪ್ರಸ್ತುತ ಕ್ಷಣದಲ್ಲಿ ನಡೆದು ಬರುತ್ತಿದೆ. ಪ್ರಸ್ತುತ ಕ್ಷಣದಲ್ಲಿ ಮಾತ್ರವೇ ಅಲ್ಲ; ಈ ಭೌತಿಕ ಪ್ರಪಂಚದ ಸೃಷ್ಟಿಯಾದಾಗಿಂದಲೂ. ಅದುವೇ ರೋಗ, ಆ 'ನಾನು ಈ ದೇಹ' ಎಂದು. ಶ್ರೀಮದ್-ಭಾಗವತ್ ದಲ್ಲಿ ಹೇಳಿದೆ, ಯಸ್ಯಾತ್ಮ-ಬುದ್ಧಿಃ ಕುಣಪೆ ತ್ರಿ-ಧಾತುಕೆ ಸ್ವ-ಧಿ ಕಲತ್ರಾ- ದಿಷು ಭೌಮ ಇಜ್ಯ ಧಿ. (ಶ್ರೀ.ಭಾ. ೧೦.೮೪.೧೩), ಯಾರು ಈ ದೈಹಿಕ ತಿಳುವಳಿಕೆಯ ಪರಿಕಲ್ಪನೆಯನ್ನು ಹೊಂದಿದ್ದಾರೋ, 'ನಾನು ಈ ದೇಹ' ಎಂದು. ಆತ್ಮ-ಬುದ್ಧಿ ಕುಣಪೆ ತ್ರಿ-ಧಾತುಕೆ. ಆತ್ಮ-ಬುದ್ಧಿ ಎಂದರೆ ಚರ್ಮ ಮತ್ತು ಮೂಳೆಯ ಈ ಚೀಲದಲ್ಲಿ ಸ್ವಯಂ ಪರಿಕಲ್ಪನೆ. ಇದು ಒಂದು ಚೀಲ. ಈ ದೇಹವು ಚರ್ಮ, ಮೂಳೆ, ರಕ್ತ, ಮೂತ್ರ, ಮಲ, ಮತ್ತು ಅನೇಕ ಒಳ್ಳೆಯ ವಸ್ತುಗಳ ಒಂದು ಚೀಲವಾಗಿದೆ. ನೋಡಿ? ಆದರೆ ನಾವು ಅಂದುಕೊಳ್ಳುತ್ತಿದ್ದೇವೆ 'ನಾನು ಈ ಮೂಳೆ ಮತ್ತು ಚರ್ಮ ಮತ್ತು ಮಲ ಮತ್ತು ಮೂತ್ರದ ಚೀಲ. ಅದು ನಮ್ಮ ಸೌಂದರ್ಯ. ಅದು ನಮ್ಮ ಸರ್ವಸ್ವವೂ".
690430 - ಉಪನ್ಯಾಸ ಈಶಾನ್ಯ ವಿಶ್ವವಿದ್ಯಾಲಯ - ಬೋಸ್ಟನ್