KN/690513 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕೊಲಂಬಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಾಗವತದಲ್ಲಿ ಹೇಳಿದ ಹಾಗೆ, ಏವಂ ಪ್ರಸನ್ನ ಮನಸೋ (ಶ್ರೀ ಮ ಭಾ ೧.೨.೨೦) " ಭಕ್ತಿ-ಯೋಗದ ಅಭ್ಯಾಸದಿಂದ, "ಸಂಪೂರ್ಣವಾಗಿ ಸಂತೋಷದಾಯಕ," ಭಗವದ್-ಭಕ್ತಿ-ಯೋಗ. " ಏವಂ ಪ್ರಸನ್ನ- ಮನಸೋ ಭಗವದ್ - ಭಕ್ತಿ - ಯೋಗತಃ, ಮುಕ್ತ -ಸಂಗಸ್ಯ: "ಮತ್ತು ಎಲ್ಲಾ ಭೌತಿಕ ಮಾಲಿನ್ಯದಿಂದ ಮುಕ್ತಿ ಹೊಂದುವುದು. " ಅವನು ದೇವರನ್ನು ಅರ್ಥಮಾಡಿಕೊಳ್ಳಬಲ್ಲನು. ಯಾರು ಬೇಕಾದರೂ ಅರ್ಥಮಾಡಿಕೊಳ್ಳುವುದಕ್ಕೆ ದೇವರು ತುಂಬಾ ಅಗ್ಗದ ವಸ್ತು ಎಂದು ನೀವು ಭಾವಿಸುತ್ತೀರಾ? ಅವರು ದೇವರನ್ನು ಅರ್ಥಮಾಡಿಕೊಂಡಿಲ್ಲದಿರುವುದರಿಂದ, ಏನಾದರೂ ಅಸಂಬದ್ಧತೆಯನ್ನು ಪ್ರಸ್ತುತ ಪಡಿಸುತ್ತಾರೆ: "ದೇವರು ಹೀಗಿದ್ದಾನೆ. ದೇವರು ಹಾಗೆ. ದೇವರು ಹಾಗೆ ಇದ್ದಾನೆ." ಆದರೆ ದೇವರೇ ಸ್ವತಃ ಬಂದು "ನಾನು ಇಲ್ಲಿದ್ದೇನೆ: ಕೃಷ್ಣ" ಎಂದಾಗ, ಅವರು ಅದನ್ನು ಸ್ವೀಕರಿಸುವುದಿಲ್ಲ, ಅವರು ತಮ್ಮದೇ ಆದ ದೇವರನ್ನು ಸೃಷ್ಟಿಸುತ್ತಾರೆ."
690513 -ಅಲೆನ್ ಗಿನ್ಸ್ಬರ್ಗ್ ಅವರೊಂದಿಗೆ ಸಂಭಾಷಣೆ - ಕೊಲಂಬಸ್