KN/690523 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾನು ನ್ಯೂಯಾರ್ಕ್‌ನಲ್ಲಿದ್ದಾಗ, ಒಬ್ಬ ಮುದುಕಿ, ಅವಳು ನನ್ನ ತರಗತಿಗೆ ಬರುತ್ತಿದ್ದಳು. ಸೆಕೆಂಡ್ ಅವೆನ್ಯೂದಲ್ಲಿ ಅಲ್ಲ; ನಾನು ಮೊದಲು ೭೨ ನೇ ರಸ್ತೆಯಲ್ಲಿ ಪ್ರಾರಂಭಿಸಿದಾಗ. ಅವಳಿಗೆ ಒಬ್ಬ ಮಗನಿದ್ದನು. ಆದ್ದರಿಂದ ನಾನು ಕೇಳಿದೆ, ಯಾಕೆ ನಿಮ್ಮ ಮಗನಿಗೆ ನೀವು ವಿವಾಹವನ್ನು ಮಾಡಬಾರದು? "ಒಹ್ ಸರಿ, ಅವನು ಹೆಂಡತಿಯನ್ನು ಪೋಷಿಸಲು ಸಾಧ್ಯವಾದರೆ, ನನ್ನ ಅಭ್ಯಂತರವಿಲ್ಲ." ಈ ಯುಗದಲ್ಲಿ ಹೆಂಡತಿಯನ್ನು ಪೋಷಿಸುವುದೇ ಒಂದು ದೊಡ್ಡ ಕೆಲಸ. ದಾಕ್ಷ್ಯಮ್ ಕುಟುಂಬ - ಭರಣಂ (ಶ್ರೀ ಮ ಭಾ ೧೨.೨.೬). ಮತ್ತು ನಾವು ಇನ್ನೂ ಮುಂದುವರಿಯುತ್ತಿದ್ದೇವೆ ಎಂದು ನಾವು ತುಂಬ ಹೆಮ್ಮೆಪಡುತ್ತೇವೆ. ಪಕ್ಷಿ ಕೂಡ ಹೆಂಡತಿಯನ್ನು ನಿರ್ವಹಿಸುತ್ತದೆ, ಮೃಗವೂ ಸಹ ಹೆಂಡತಿಯನ್ನು ನಿರ್ವಹಿಸುತ್ತದೆ. ಆದರೆ ಮನುಷ್ಯ ಹೆಂಡತಿಯನ್ನು ಪೋಷಿಸಲು ಹಿಂಜರಿಯುತ್ತಾನೆ? ನೀವೇ ನೋಡಿ ? ಮತ್ತು ಅವರು ನಾಗರಿಕತೆಯಲ್ಲಿ ಮುಂದುವರಿದಿದ್ದಾರೆ? ಹಾಂ? ಇದೊಂದು ಅತ್ಯಂತ ಭಯಾನಕ ಯುಗ. ಆದ್ದರಿಂದ ಚೈತನ್ಯ ಮಹಾಪ್ರಭುಗಳು ನಿಮ್ಮ ಸಮಯವನ್ನು ಯಾವುದೇ ರೀತಿಯಲ್ಲಿ ವ್ಯರ್ಥ ಮಾಡಬೇಡಿ ಎಂದು ಹೇಳಿದ್ದಾರೆ. ಸುಮ್ಮನೆ ಹರೇ ಕೃಷ್ಣ ಜಪ ಮಾಡಿ. ಹರೇರ್ ನಾಮ ಹರೇರ್ ನಾಮ ಹರೇರ್ ನಾಮೈವ... (ಚೈ ಚ ಆದಿ ೧೭.೨೧). ಆದರೆ ಜನರು ಆಧ್ಯಾತ್ಮಿಕ ಜೀವನದಲ್ಲಿ ಆಸಕ್ತಿಯನ್ನೇ ಹೊಂದಿಲ್ಲ. ಯಾವುದೇ ವಿಚಾರಣೆಯಿಲ್ಲ."
690523 - ಉಪನ್ಯಾಸ ಶ್ರೀ ಮ ಭಾ ೦೧.೦೫.೦೧-೮ - ನ್ಯೂ ವೃಂದಾಬನ್, ಯು ಯಸ್ ಏ