KN/760808 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಟೆಹ್ರಾನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಚಿನ್ನ, ಇರಾನ್ನಲ್ಲಿ ಅಥವಾ ಭಾರತದಲ್ಲಿ, ಚಿನ್ನವು ಚಿನ್ನವಾಗಿದೆ. ನೀವು 'ಇರಾನಿನ ಚಿನ್ನ' ಅಥವಾ 'ಭಾರತೀಯ ಚಿನ್ನ' ಎಂದು ಹೇಳಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಅದೇ ರೀತಿ, ನೀವು 'ಇರಾನಿನ ಆಧ್ಯಾತ್ಮಿಕ ಸಂಸ್ಕೃತಿ' ಮತ್ತು 'ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿ' ಎಂದು ಹೇಳಿದಾಗ, ಅದರಲ್ಲಿ ಸಾಮಾನ್ಯ ಅಂಶವೆಂದರೆ ಆಧ್ಯಾತ್ಮಿಕ ಸಂಸ್ಕೃತಿ. ಆಧ್ಯಾತ್ಮಿಕ ಸಂಸ್ಕೃತಿ ಒಂದೇ. ಅದು ಇರಾನಿಯನ್, ಭಾರತೀಯ, ಅಥವಾ ಎಲ್ಲಿಯಾದರು ಇರುವ ಭಟ್ಟಂಗಿಗೆ ಸೇರಿದ ಸಂಸ್ಕೃತಿಯಾಗಲಾರದು. ಈ ಚಂದ್ರನಂತೆಯೇ. ಈ ಚಂದ್ರ ಈಗ ಇರಾನ್ ನಲ್ಲಿದೆ. ಆದರೆ ಅದು ಇರಾನಿನ ಚಂದ್ರ ಎಂದು ಅರ್ಥವಲ್ಲ. ಅಥವಾ ಸೂರ್ಯ, ಇದರ ಅರ್ಥ ಇರಾನಿನ ಸೂರ್ಯ ಎಂದಲ್ಲ. ಚಂದ್ರನು ಒಂದು. ಭಾರತದಲ್ಲಿ ಅಥವಾ ಇರಾನ್ ನಲ್ಲಿ, ಚಂದ್ರನು ಚಂದ್ರನೇ. ನೀವು 'ಇರಾನಿನ ಚಂದ್ರ' ಅಥವಾ 'ಭಾರತೀಯ ಚಂದ್ರ' ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಆಧ್ಯಾತ್ಮಿಕ ಸಂಸ್ಕೃತಿ ಒಂದು, ಮತ್ತು ಭೌತಿಕ ಸಂಸ್ಕೃತಿ ಒಂದು."
760808 - ಸಂಭಾಷಣೆ - ಟೆಹ್ರಾನ್