KN/Prabhupada 0012 - ಶ್ರವಣವು ಜ್ಞಾನದ ಮೂಲವಾಗಿರಬೇಕು



Lecture on BG 16.7 -- Hawaii, February 3, 1975

ಪ್ರತಿಯೊಬ್ಬರು, ನಾವು ಅಪೂರ್ಣ ನಮ್ಮಗೆ ನಮ್ಮ ಕಣ್ಣುಗಳ ಬಗ್ಗೆ ತುಂಬಾ ದುರಹಂಕಾರ:"ನನಗೆ ತೋರಿಸಬಲ್ಲಿರ?" ನೀವು ನೋಡಲು ನಿಮ್ಮ ಕಣ್ಣುಗಳಿಗೆ ಏನು ಅರ್ಹತೆ ಇದೆ ? ಅವನು ಹೀಗೆ ಯೋಚಿಸುವುದಿಲ್ಲ, "ನನಗೆ ಏನು ಅರ್ಹತೆ ಇಲ್ಲ: ಆದರು ,ನಾನು ನೋಡಬೇಕು." ಎಂದು ಈ ಕಣ್ಣುಗಳು, ಅಯೋ, ಅವುಗಳು ಅನೇಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಈಗ ವಿದ್ಯುತ್ಶಕ್ತಿ ಇದೆ, ನೀವು ನೋಡಬಹುದು. ಈ ವಿದ್ಯುತ್ಶಕ್ತಿ ಆಫ್ ಆದ ತಕ್ಷಣ, ನೀವು ನೋಡಲು ಸಾಧ್ಯವಿಲ್ಲ. ಆಗ ನಿಮ್ಮ ಕಣ್ಣುಗಳ ಮೌಲ್ಯವೇನು? ಈ ಗೋಡೆಯ ಆಚೆಗೆ ಏನಾಗುತ್ತಿದೆ ಎಂದು ನಿಮಗೆ ಕಾಣುವುದಿಲ್ಲ. ಆದರಿಂದ ನಿಮ್ಮ ಕರೆಯಲ್ಪಡುವ ಇಂದ್ರಿಯಗಳನ್ನು ಜ್ಞಾನದ ಮೂಲವೆಂದು ನಂಬಬೇಡಿ. ಇಲ್ಲ. ಈ ಜ್ಞಾನಾರ್ಜನೆಯು ಕೇಳುವ ಮೂಲಕ ಪಡೆಯಬೇಕು. ಇದ್ದನು ಶೃತಿ ಎಂದು ಕರೆಯುತ್ತಾರೆ. ಆದ್ದರಿಂದ ವೇದಗಳ ಹೆಸರು ಶೃತಿ ಎಂದು. ಶೃತಿ-ಪ್ರಮಾಣ, ಶೃತಿ-ಪ್ರಮಾಣ ಕೇವಲ ಒಂದು ಮಗುವಿನ ರೀತಿಯ ಅಥವಾ ಒಂದು ಹುಡುಗ ತನ್ನ ತಂದೆ ಯಾರು ಎಂದು ತಿಳಿಯಲು ಬಯಸುತ್ತಾನೆ. ಆದ್ದರಿಂದ ಸಾಕ್ಷಿ ಏನು? ಶೃತಿ ಆ ಸಾಕ್ಷಿ, ತಾಯಿಯ ಮೂಲಕ ಕೇಳುವುದು. ತಾಯಿ ಹೇಳುತ್ತಾರೆ, "ಇವರೆ ನಿಮ್ಮ ತಂದೆ." ಆದ್ದರಿಂದ ಅವನು ಕೇಳಿಸಿಕೊಳ್ಳುತ್ತಾನೆ, ಅವರು ಅವನ ತಂದೆ ಹೇಗೆ ಆದರೂ ಎಂದು ಅವನು ನೋಡುವುದಿಲ್ಲ. ಏಕೆಂದರೆ ಅವನ ದೇಹ ನಿರ್ಮಣವಾಗುವ ಮೊದಲೆ ಅವನ ತಂದೆ ಇದ್ದರು, ಅವನು ಹೇಗೆ ನೋಡಬಹುದು? ನೋಡುವುದರಿಂದ, ನಿಮ್ಮ ತಂದೆ ಯಾರೆಂದು ಖಚಿತ ಪಡಿಸಿಕೊಳ್ಳಲಾಗುವುದಿಲ್ಲ. ನೀವು ಅಧಿಕಾರದಲ್ಲಿರುವ ಬಳಿ ಕೇಳಿ ತಿಳಿದುಕೊಳ್ಳಬೇಕು. ತಾಯಿ ಆ ಅಧಿಕಾರಿ. ಆದ್ದರಿಂದ ಶೃತಿ-ಪ್ರಮಾಣ: ಕೇಳುವುದು ಪುರಾವೆ, ನೋಡುವುದಲ್ಲ. ನೋಡುವುದು.... ನಮ್ಮ ಅಪೂರ್ಣ ಕಣ್ಣುಗಳು.. ಅನೇಕ ಅಡ್ಡಿಗಳು ಗೋಚರಿಸುತ್ತಿವೆ ಅದೇ ರೀತಿ, ನೇರ ಗ್ರಹಿಕೆಯಿಂದ, ನಿಮ್ಮಗೆ ಸತ್ಯ ಗೊತ್ತಾಗುವುದಿಲ್ಲ ನೇರ ಗ್ರಹಿಕೆಯು ಊಹಾಪೋಹಗಳು. ಡಾ ಕಪ್ಪೆ. ಡಾ ಕಪ್ಪೆ ಅಟ್ಲಾಂಟಿಕ್ ಸಾಗರ ಏನು ಎಂದು ಊಹಿಸುತ್ತಿದ್ದಾನೆ ಅವನು ಒಂದು ಬಾವಿಯಲ್ಲಿದ್ದಾನೆ, ಮೂರು ಅಡಿಯ ಬಾವಿ ಮತ್ತು ಒಬ್ಬ ಸ್ನೇಹಿತ ಅವನಿಗೆ ತಿಳಿಸಿದ "ಓಹ್, ನಾನು ಅಪಾರ ನೀರು ನೋಡಿದ್ದೇನೆ." "ಆ ಅಪಾರ ನೀರು ಏನು?" "ಅಟ್ಲಾಂಟಿಕ್ ಸಾಗರ." "ಇದು ಎಷ್ಟು ದೊಡ್ಡದಾಗಿದೆ?" "ತುಂಬಾ ತುಂಬಾ ದೊಡ್ಡದು." ಆದ್ದರಿಂದ ಡಾ. ಕಪ್ಪೆ ಆಲೋಚಿಸಿದ "ಬಹುಶಃ ನಾಲ್ಕು ಅಡಿ ಇರಬಹುದು. ಈ ಬಾವಿ ಮೂರು ಅಡಿ ಇದೆ. ಅದು ನಾಲ್ಕು ಅಡಿ ಇರಬಹುದು. ಸರಿ, ಐದು ಅಡಿ. ಬಾ, ಹತ್ತು ಅಡಿ." ಆದ್ದರಿಂದ ಈ ರೀತಿಯಲ್ಲಿ, ಊಹಿಸಿ, ಹೇಗೆ ಆ ಕಪ್ಪೆ, ಡಾ. ಕಪ್ಪೆ, ಅಟ್ಲಾಂಟಿಕ್ ಸಮುದ್ರ ಅಥವ ಪೆಸಿಫಿಕ್ ಸಮುದ್ರವನ್ನು ಅರ್ಥಮಾಡಿಕೊಳ್ಳುತ್ತದೆ ನೀವು ಊಹೆಯಿಂದ, ಅಟ್ಲಾಂಟಿಕ್, ಪೆಸಿಫಿಕ್ ಸಾಗರ ಉದ್ದಗಲ, ಅಂದಾಜು ಮಾಡಬಹುದಾ? ಅದಕ್ಕೆ ಊಹೆಯಿಂದ, ನಿಮ್ಮಗೆ ಆಗುವುದಿಲ್ಲ ಅವರು ಊಹಿಸುತ್ತಿದ್ದಾರೆ ಎಷ್ಟೊ ವರುಷಗಳಿಂದ ಈ ಬ್ರಹಾಂಡ ಬಗ್ಗೆ, ಎಷ್ಟು ನಕ್ಷತ್ರಗಳು ಇವೆ, ಅದರ ಉದ್ದ ಮತ್ತು ಅಗಲ ಎಷ್ಟು, ಎಲ್ಲಿದೆ.... ಯಾರಿಗೂ ಸಹ ಈ ಭೌತಿಕ ಜಗತ್ತಿನ ಬಗ್ಗೆಯೆ ತಿಳಿದಿಲ್ಲ, ಮತ್ತು ಆಧ್ಯಾತ್ಮಿಕ ಜಗತ್ತಿನ ಬಗ್ಗೆ ಏನು ಮಾತನಾಡುವುದು? ಅದು ದೂರವಿದೆ, ಬಹಳ ದೂರವಿದೆ. ಪರಸ್ ತಸ್ಮಾತ್ ತು ಭಾವೊ 'ನ್ಯೊ 'ವ್ಯಕ್ತೊ 'ವ್ಯಕ್ತಾತ್ ಸನಾತನಃ (ಭ ಗೀ ೮.೨೦) ನೀವು ಭಗವದ್ಗೀತೆಯಲ್ಲಿ ಕಾಣುವಿರಿ. ಇನ್ನೊಂದು ಪ್ರಕೃತಿ ಇದೆ. ಈ ಪ್ರಕೃತಿ, ನೀವು ಏನು ಕಾಣುವಿರಿ, ಆಕಾಶದಲ್ಲಿ, ಒಂದು ಗುಂಡಾದ ಗುಮ್ಮಟ, ಅದು, ಅದರ ಮೇಲೆ, ಐದು ಅಂಶಗಳ ಪದರಗಳು ಮತ್ತೆ ಇವೆ. ಈ ಆವರಣವನ್ನು ಹೊಂದಿದೆ. ತೆಂಗಿನಕಾಯಿಯಲ್ಲಿ ನೀವು ನೋಡಿರುವ ಹಾಗೆ. ಒಂದು ಗಟ್ಟಿಯಾದ ಪದರವಿದೆ, ಮತ್ತು ಆ ಪದರದ ಒಳಗೆ ನೀರು ಇದೆ. ಅದೇ ರೀತಿ, ಈ ಪದರದ ಒಳಗೆ ಮತ್ತು ಈ ಆವರಣದ ಹೊರಗೆ ಐದು ಪದರಗಳಿವೆ, ಪರಸ್ಪರ ಸಾವಿರ ಬಾರಿ ದೊಡ್ಡದಾಗಿದೆ: ನೀರಿನ ಪದರ, ಗಾಳಿಯ ಪದರ, ಬೆಂಕಿಯ ಪದರ. ಆದ್ದರಿಂದ ನೀವು ಈ ಎಲ್ಲಾ ಪದರಗಳನ್ನು ಭೇದಿಸಬೇಕು. ಆಗ ನಿಮ್ಮಗೆ ಆಧ್ಯತ್ಮಿಕ ಜಗತ್ತು ಸಿಗುತ್ತದೆ. ಈ ಎಲ್ಲ ಬ್ರಹ್ಮಾಂಡ, ಅಸಂಖ್ಯಾತ, ಕೋಟಿ. ಯಸ್ಯ ಪ್ರಭಾ ಪ್ರಭವತೊ ಜಗದ್-ಅಂಡ-ಕೋಟಿ (ಬ್ರ ಸಂ ೫.೪೦) ಜಗದ್-ಅಂಡ ಎಂದರೆ ಬ್ರಹ್ಮಂಡ. ಕೋಟಿ, ಹಲವು ದಶಲಕ್ಷ ಗೊಂಚಲು ಒಟ್ಟಾಗಿ, ಇದೇ ಭೌದಿಕ ಜಗತ್ತು. ಮತ್ತು ಈ ಭೌದಿಕ ಜಗತ್ತಿನ ಆಚೆ ಆಧ್ಯತ್ಮಿಕ ಜಗತ್ತು ಇದೆ, ಮತ್ತೊಂದು ಆಕಾಶ ಅದು ಸಹ ಆಕಾಶ. ಅದನ್ನು ಪರವ್ಯೊಮ ಎಂದು ಕರೆಯುತ್ತಾರೆ. ಆದ್ದರಿಂದ ನಿಮ್ಮ ಇಂದ್ರಿಯಗಳ ಗ್ರಹಿಕೆಯಿಂದ ನೀವು ಚಂದ್ರ ಗ್ರಹದ ಅಥವ ಸೂರ್ಯ ಗ್ರಹದಲ್ಲಿ ಏನಿದೆ ಎಂದು ಸಹ ಅಂದಾಜು ಮಾಡಲು ಆಗುವುದಿಲ್ಲ, ಈ ಗ್ರಹ, ಈ ಬ್ರಹ್ಮಾಂಡದೊಳಗೆ. ಹೇಗೆ ನೀವು ಊಹಾಪೋಹಗಳಿಂದ ಆ ಆಧ್ಯಾತ್ಮಿಕ ಜಗತ್ತಿನ್ನು ಅರ್ಥ ಮಾಡಿಕೊಳ್ಳುವಿರಿ? ಇದು ಮೂರ್ಖತನ. ಆದ್ದರಿಂದ ಶಾಸ್ತ್ರ ಹೇಳುತ್ತೆ, ಅಚಿಂತ್ಯಃ ಖಲೌ ಯೆ ಭಾವಾ ನ ತಾಮ್ಸ್ ತರ್ಕೆಣ ಯೊಜಯೆತ್. ಅಚಿಂತ್ಯ, ಯಾವುದು ಊಹಿಸಲಾಗುವುದಿಲ್ಲ, ನಿಮ್ಮ ಇಂದ್ರಿಯೆಗಳ ಗ್ರಹಿಕೆಗೆ ಮೀರಿದೆಯೊ, ಅದನ್ನು ವಾದಸಿ ಅಥವ ಊಹಿಸಿ ಅರ್ಥ ಮಾಡಿಕೊಳ್ಳಬೇಡಿ. ಇದು ಮೂರ್ಖತನ. ಇದು ಸಾಧ್ಯವಿಲ್ಲ. ಆದ್ದರಿಂದ ನಾವು ಗುರುಗಳ ಬಳಿಗೆ ಹೋಗಬೇಕು. ತದ್-ವಿಜ್ಞಾನಾರ್ಥಮ್ ಸ ಗುರುಮ್ ಏವಾಭಿಗಚ್ಚೆತ್, ಸಮಿತ್-ಪಾಣಿಃ ಶ್ರೊತ್ರಿಯಮ್ ಬ್ರಹ್ಮ-ನಿಷ್ಟಮ್ (ಮ ಉ ೧.೨.೧೨) ಇದೇ ಇದರ ಪ್ರಕ್ರಿಯೆ.