KN/Prabhupada 0021 - ಈ ದೇಶದಲ್ಲಿ ಬಹಳಷ್ಟು ವಿಚ್ಛೇದನಗಳು ಏಕೆ ಆಗುತ್ತಿದೆ



Lecture on SB 6.1.26 -- Honolulu, May 26, 1976

ಇದು ಸಾಮಾನ್ಯ ಜೀವನ ವಿಧಾನವಾಗಿದೆ. ಪ್ರತಿಯೊಬ್ಬರೂ ಈ ಭೌತಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮತ್ತು ಭೌತಿಕ ಚಟುವಟಿಕೆಯ ಮೂಲ ತತ್ವವು ಗ್ರಹಸ್ಥ, ಕುಟುಂಬ ಜೀವನ. ವೈದಿಕ ವ್ಯವಸ್ಥೆಯ ಪ್ರಕಾರ, ಅಥವಾ ಇನ್ನು ಯಾವುದೇ ವ್ಯವಸ್ಥೆಯ ಪ್ರಕಾರ ಕುಟುಂಬ ಜೀವನ ಎಂದರೆ ಹೆಂಡತಿ ಮಕ್ಕಳನ್ನು ಪಾಲಿಸುವ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಕೆಲಸ ಮಾಡುತ್ತಾರೆ. ಅವರು ಕೇವಲ ಇದಷ್ಟೇ ನನ್ನ ಕರ್ತವ್ಯ ಎಂದು ತಿಳಿದಿರುತ್ತಾರೆ. ಕುಟುಂಬವನ್ನು ಸಾಕುವುದು ನನ್ನ ಕರ್ತವ್ಯ. ಸಾಧ್ಯವಾದಷ್ಟು ಸುಖವಾಗಿರುವಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಈ ರೀತಿಯ ಕರ್ತವ್ಯವನ್ನು ಪ್ರಾಣಿಗಳೂ ಸಹ ನಿರ್ವಹಿಸುತ್ತವೆ ಎಂಬುದನ್ನು ಅವರು ಅರಿಯಲಾರರು. ಅವುಗಳಿಗೂ ಮರಿಗಳಿವೆ, ಮತ್ತು ಅವು ಆಹಾರ ಒದಗಿಸುತ್ತವೆ. ಇದರಲ್ಲಿ ವ್ಯತ್ಯಾಸವೇನಿದೆ? ಆದ್ದರಿಂದ ಅವರನ್ನು ಇಲ್ಲಿ ಮೂಢ ಎಂದು ಕರೆದಿದೆ ಮೂಢ ಎಂದರೆ ಕತ್ತೆ. ಯಾರು ಇಂತಹ ಕರ್ತವ್ಯದಲ್ಲಿ ತೊಡಗಿದ್ದಾರೆಯೋ "ಭುಂಜಾನಃ ಪ್ರಪಿಬನ್ ಖಾದನ್ (ಭಾಗವತ 6.1.26) ಪ್ರಬಿಪನ್ ಎಂದರೆ ಕುಡಿಯುವುದು ಮತ್ತು ಭುಂಜಾನಃ ಎಂದರೆ ತಿನ್ನುವುದು. ತಿನ್ನುವಾಗ, ಕುಡಿಯುವಾಗ, ಜಗಿಯುವಾಗ, ಚರ್ವ ಚಾಸ್ಯ ರಾಜ ಪ್ರೇಯ. ಆಹಾರ ವಸ್ತುಗಳಲ್ಲಿ ನಾಲ್ಕು ವಿಧಗಳಿವೆ. ಕೆಲವೊಮ್ಮೆ ನಾವು ಜಗಿಯುತ್ತೇವೆ, ಕೆಲವೊಮ್ಮೆ ನೆಕ್ಕುತ್ತೇವೆ, ಕೆಲವೊಮ್ಮೆ ನುಂಗುತ್ತೇವೆ ಮತ್ತು ಕೆಲವೊಮ್ಮೆ ಕುಡಿಯುತ್ತೇವೆ. ಹೀಗೆ ನಾಲ್ಕು ರೀತಿಯ ಆಹಾರ ವಸ್ತುಗಳಿವೆ. ಆದ್ದರಿಂದ ನಾವು 'ಚತುರ್ವಿಧ ಶ್ರೀ ಭಗವತ್ಪ್ರಸಾದ' ಎಂದು ಹಾಡುತ್ತೇವೆ. ಚತುರ್ವಿಧ ಎಂದರೆ ನಾಲ್ಕು ಬಗೆಯ. ನಾವು ಅರ್ಚಾವಿಗ್ರಹಕ್ಕೆ ಈ ನಾಲ್ಕು ರೀತಿಯ ಆಹಾರಗಳನ್ನು ಅರ್ಪಿಸುತ್ತೇವೆ. ಕೆಲವೊಂದನ್ನು ಜಗಿಯುತ್ತೇವೆ ಕೆಲವೊಂದನ್ನು ನೆಕ್ಕುತ್ತೇವೆ, ಕೆಲವೊಂದನ್ನು ನಂಗುತ್ತೇವೆ. ಈ ರೀತಿಯಾಗಿ ಭುಂಜಾನಃ ಪ್ರಪಿಬನ್ ಖಾದನ್ ಬಾಲಕಂ ಸ್ನೇಹ ಯಂತ್ರಿತಃ ಆಹಾರವಸ್ತುಗಳನ್ನು ನೀಡಿ ತಂದೆ ತಾಯಂದಿರು ಮಕ್ಕಳನ್ನು ಪೋಷಿಸುತ್ತಾರೆ. ತಾಯಿ ಯಶೋದೆಯು ಕೃಷ್ಣನಿಗೆ ತಿನ್ನಿಸುವುದನ್ನು ಕಾಣುತ್ತೇವೆ. ಅದೇ ರೀತಿ. ಆದರೆ ವ್ಯತ್ಯಾಸವಿದೆ. ನಾವು ಸಾಮಾನ್ಯ ಮಗುವಿಗೆ ತಿನ್ನಿಸುತ್ತೇವೆ. ಇದನ್ನು ಬೆಕ್ಕು ನಾಯಿಗಳೂ ಮಾಡುತ್ತವೆ. ಆದರೆ ತಾಯಿ ಯಶೋದೆಯು ಕೃಷ್ಣನಿಗೆ ತಿನ್ನಿಸುತ್ತಾಳೆ. ಒಂದೇ ರಿತಿಯ ಕೆಲಸ. ಕೆಲಸದಲ್ಲಿ ವ್ಯತ್ಯಾಸವಿಲ್ಲ. ಆದರೆ ಒಂದರಲ್ಲಿ ಕೃಷ್ಣನು ಕೇಂದ್ರದಲ್ಲಿ ಇದ್ದಾನೆ ಮತ್ತು ಇನ್ನೊಂದರಲ್ಲಿ ಸ್ವಾರ್ಥ. ಇದೇ ವ್ಯತ್ಯಾಸ. ಕೃಷ್ಣನು ಕೇಂದ್ರದಲ್ಲಿ ಇದ್ದಾಗ ಅದು ಆಧ್ಯಾತ್ಮಿಕ. ಸ್ವಾರ್ಥವು ಕೇಂದ್ರದಲ್ಲಿ ಇದ್ದಾಗ ಅದು ಭೌತಿಕ. ಇದೇ ವ್ಯತ್ಯಾಸ. ಕಾಮ ಮತ್ತು ಶುದ್ಧ ಪ್ರೇಮ ಇದ್ದ ಹಾಗೆ. ಕಾಮ ಮತ್ತು ಶುದ್ಧವಾದ ಪ್ರೇಮದ ನಡುವೆ ಇರುವ ವ್ಯತ್ಯಾಸವೇನು? ಇಲ್ಲಿ ಗಂಡು ಹೆಣ್ಣುಗಳು ಕಾಮದ ಬಂiÀÄಕೆಯಿಂದ ಒಂದಾಗುತ್ತಾರೆ. ಕೃಷ್ಣನೂ ಗೋಪಿಯರೊಡನೆ ನೃತ್ಯವಾಡುತ್ತಾನೆ. ಮೇಲ್ನೋಟಕ್ಕೆ ಇವೆರಡೂ ಒಂದೇ ರೀತಿಯಾಗಿ ಕಾಣುತ್ತವೆ. ಆದರೆ ವ್ಯತ್ಯಾಸವೇನು? ಈ ವ್ಯತ್ಯಾಸವನ್ನು ಚೈತನ್ಯ ಚರಿತಾಮೃತವನ್ನು ಬರೆದವರು ವರ್ಣಿಸಿದ್ದಾರೆ. ಕಾಮದ ಬಂiÀÄಕೆಗೂ ಶುದ್ಧವಾದ ಪ್ರೇಮಕ್ಕೂ ಇರುವ ವ್ಯತ್ಯಾಸವೇನು? ಅದನ್ನು ವಿವರಿಸಲಾಗಿದೆ. ಅವರು ಹೇಳಿದ್ದಾರೆ "ಆತ್ಮೇಂದ್ರಿಯ ಪ್ರೀತಿ ವಾಂಛಾ - ತಾರೆ ಬಲಿ ಕಾಮ (ಚೈತನ್ಯ ಚರಿತಾಮೃತ ಆದಿ 4.165) ನನಗೆ ನನ್ನ ಇಂದ್ರಿಯ ತೃಪ್ತಿಯಲ್ಲಿ ಆಸಕ್ತಿ ಇದ್ದರೆ, ಅದು ಕಾಮ. ಆದರೆ ಕೃಷ್ಣೇಂದ್ರಿಯ ಪ್ರೀತಿ ಇಚ್ಛಾ ಧರೆ ಪ್ರೇಮ ನಾಮ. ಮತ್ತು ನಾವು ಕೃಷ್ಣನ ಇಂದ್ರಿಯಗಳನ್ನು ತೃಪ್ತಿಪಡಿಸಲು ಪ್ರಯತ್ನಿಸಿದರೆ, ಅದು ಪ್ರೇಮ. ಅದೇ ವ್ಯತ್ಯಾಸ. ಈ ಭೌತಿಕ ಪ್ರಪಂಚದಲ್ಲಿ ಪ್ರೇಮ ಎಂಬುದು ಇಲ್ಲ. ಏಕೆಂದರೆ ಇಲ್ಲಿ ಯಾರೂ ಇನ್ನೊಬ್ಬರ ಸಂತೋóಕ್ಕಾಗಿ ಕೆಲಸ ಮಾಡುವುದಿಲ್ಲ. ಸ್ತ್ರೀಯು ಆತನ ಸುಖಕ್ಕಾಗಿ ಆತನೊಂದಿಗೆ ಸೇರುವುದಿಲ್ಲ. ಬದಲಾಗಿ ತನ್ನ ಸ್ವಂತ ಸುಖವೇ ಮೂಲವಾಗಿರುತ್ತದೆ. "ಈ ಸ್ತ್ರೀಯೊಂದಿಗೆ ಸೇರಿ ನಾನು ನನ್ನ ಬಂiÀÄಕೆಯನ್ನು ಈಡೇರಿಸುತ್ತೇನೆ" ಎಂದು ಪುರುಷನು ಯೋಚಿಸುತ್ತಾನೆ. ಮತ್ತು ಸ್ತ್ರೀಯು "ಈ ಪುರುಷನೊಂದಿಗೆ ಸೇರಿ ನಾನು ನನ್ನ ಬಂiÀÄಕೆಯನ್ನು ಈಡೇರಿಸುತ್ತೇನೆ" ಎಂದು ಯೋಚಿಸುತ್ತಾಳೆ. ಆದ್ದರಿಂದ ಪಾಶ್ಚಾತ್ಯ ದೇಶಗಳಲ್ಲಿ ವೈಯಕ್ತಿಕ ಸುಖದಲ್ಲಿ ಕಷ್ಟ ಉಂಟಾದಾಗ ತಕ್ಷಣ ವಿಚ್ಛೇದನವನ್ನು ಪಡೆಯುತ್ತಾರೆ. ಇದು ಮನಃಶಾಸ್ತ್ರ. ಈ ದೇಶದಲ್ಲಿ ಇಷ್ಟೊಂದು ವಿಚ್ಛೇದನಗಳು ನಡೆಯಲು ಇದೇ ಕಾರಣ. ಇದರ ಮೂಲ ಕಾರಣವೇನೆಂದರೆ, "ನನಗೆ ಸುಖವು ಲಭಿಸುವುದಿಲ್ಲವಾದರೆ, ಇದು ನನಗೆ ಬೇಡ" ಎಂಬಂತಹ ಮನಃಸ್ಥಿತಿ. ಇದನ್ನು ಶ್ರೀಮದ್ಭಾಗವತದಲ್ಲಿ ಉಲ್ಲೇಖಿಸಲಾಗಿದೆ. ದಾಂಪತ್ಯಂ ರತಿಮೇವಹಿ. ಈ ಕಲಿಯುಗದಲ್ಲಿ ಗಂಡ ಹೆಂಡತಿ ಎಂದರೆ ಲೈಂಗಿಕ ಸುಖದ ತೃಪ್ತಿ. "ಒಂದಾಗಿ ಬಾಳಬೇಕು" ಎಂಬ ಭಾವನೆ ಅವರಿಗಿಲ್ಲ. ನಾವು ಕೃಷ್ಣನನ್ನು ತೃಪ್ತಿಗೊಳಿಸುದು ಹೇಗೆಂದು ತಿಳಿದು ಕೃಷ್ಣನನ್ನು ತೃಪ್ತಿಗೊಳಿಸಲು ಪ್ರಯತ್ನಿಸುತ್ತೇವೆ. ಇದೇ ಕೃಷ್ಣ ಪ್ರಜ್ಞಾ ಆಂದೋಲನ.