KN/Prabhupada 0065 - ಪ್ರತಿಯೊಬ್ಬರೂ ಸಂತೋಷವಾಗಿರುತ್ತಾರೆ



Arrival Lecture -- Gainesville, July 29, 1971

ಹೆಣ್ಣು ಅತಿಥಿ: ಈ ಚಳುವಳಿಯಲ್ಲಿ ಬೇರೆಯವರಿಗೆ, ಅಂದರೆ ಯಾರು ಇಡೀ ದಿನ ಹರೇಕೃಷ್ಣ ಜಪಿಸದೆ ಕೃಷ್ಣನನ್ನು ಪರೋಕ್ಷವಾಗಿ ಸೇವಿಸುತ್ತಾರೋ ಅವರಿಗೆ ಸ್ಥಾನವಿದೆಯೇ?

ಪ್ರಭುಪಾದ: ಇಲ್ಲ. ಈ ಪ್ರಕ್ರಿಯೆ ಹೇಗೆಂದರೆ, ನೀವು ಮರದ ಬುಡ್ಡಕ್ಕೆ ನೀರು ಹಾಕಿದರೆ ಆ ನೀರು ರಂಬೆಗಳಿಗೆ, ಎಲೆಗಳಿಗೆ, ಟೊಂಗೆಗಳಿಗೆ, ವಿತರಣೆಯಾಗಿ ಅವು ತಾಜಾವಾಗಿರುತ್ತವೆ. ಆದರೆ ಎಲೆಗಳಿಗೆ ಮಾತ್ರ ನೀರು ಹಾಕಿದರೆ ಎಲೆಯೂ ಬಾಡಿಹೋಗುತ್ತದೆ, ಹಾಗು ಮರವೂ ಬಾಡಿಹೋಗುತ್ತದೆ. ನೀನು ಆಹಾರವನ್ನು ಹೊಟ್ಟೆಗೆ ಕೊಟ್ಟರೆ ಆಗ ಅದರ ಶಕ್ತಿಯು ನಿನ್ನ ಬೆರಳುಗಳಿಗೆ, ಕೂದಲಿಗೆ, ಉಗುರುಗಳಿಗೆ, ಮತ್ತು ಎಲ್ಲೆಡೆ ವಿತರಣೆಯಾಗುತ್ತದೆ. ಆದರೆ ಆಹಾರವನ್ನು ಕೈಯಲಿಟ್ಟುಕೊಂಡು ಹೊಟ್ಟೆಗೆ ಕೊಡದಿದ್ದರೆ ಅದು ವ್ಯರ್ಥ. ಆದ್ದರಿಂದ ಈ ಎಲ್ಲ ಮಾನವಕಲ್ಯಾಣ ಸೇವೆಯು ವ್ಯರ್ಥ ಎಕೆಂದರೆ ಅದರಲ್ಲಿ ಕೃಷ್ಣ ಪ್ರಜ್ಞೆ ಇಲ್ಲ. ಎಷ್ಟೋ ರೀತಿಯಲ್ಲಿ ಮಾನವ ಸಮಾಜಕ್ಕೆ ಸೇವೆಮಾಡಲು ಪ್ರಯತ್ನಿಸುತ್ತಿದ್ದಾರೆ, ಆದರೆ ವ್ಯರ್ಥವಾದ ಪ್ರಯತ್ನದಲ್ಲಿ ಅವು ಅಸಫಲವಾಗುತ್ತಿದೆ, ಏಕೆಂದರೆ ಅದರಿಲ್ಲಿ ಕೃಷ್ಣ ಪ್ರಜ್ಞೆ ಇಲ್ಲ. ಜನರನ್ನು ಕೃಷ್ಣ ಪ್ರಜ್ಞಾವಂತರಾಗಲು ತರಬೇತಿ ನೀಡಿದರೆ ಪ್ರತಿಯೋಬ್ಬರೂ ತನ್ತಾನೆ ಸಂತೋಷವಾಗಿರುತ್ತಾರೆ. ಯಾರೊಬ್ಬರು ಸೇರಿಕೊಳ್ಳುತ್ತಾರೆ, ಯಾರೊಬ್ಬರು ಕೇಳಿಸಿಕೊಳ್ಳುತ್ತಾರೆ, ಯಾರೊಬ್ಬರು ಸಹಕರಿಸುತ್ತಾರೆ – ಪ್ರತಿಯೊಬ್ಬರೂ ಸಂತೋಷವಾಗಿರುತ್ತಾರೆ. ಆದ್ದರಿಂದ ನಮ್ಮ ಪ್ರಕ್ರಿಯೆ ಸಹಜ ಪ್ರಕ್ರಿಯೆ. ನೀನು ದೇವರನ್ನು ಪ್ರೀತಿಸುವೆ, ಮತ್ತು ಅವನನ್ನು ಪ್ರೀತಿಸುವುದರಲ್ಲಿ ನಿಪುಣನಾದರೆ, ಸ್ವಾಭಾವಿಕವಾಗಿ ಎಲ್ಲರನ್ನೂ ಪ್ರೀತಿಸುವೆ. ಕೃಷ್ಣ ಪ್ರಜ್ಞಾವಂತ ವ್ಯಕ್ತಿಯ ಹಾಗೆ. ಅವನು ದೇವರನ್ನು ಪ್ರೀತಿಸುವ ಕಾರಣದಿಂದಾಗಿ ಎಲ್ಲ ಪ್ರಾಣಿಗಳನ್ನು ಕೂಡ ಪ್ರೀತಿಸುತ್ತಾನೆ. ಪಕ್ಷಿಗಳನ್ನು, ಪಶುಗಳನ್ನು, ಎಲ್ಲರನ್ನೂ ಪ್ರೀತಿಸುತ್ತಾನೆ. ಆದರೆ ಮಾನವೀಯ ಪ್ರೀತಿಯೆಂದರೆ ಕೆಲವು ಮನುಷ್ಯರನ್ನು ಪ್ರೀತಿಸುವುದು, ಆದರೆ ಪಶುಗಳನ್ನು ಕೊಲ್ಲುವುದು. ಅವರು ಪಶುಗಳನ್ನು ಏಕೆ ಪ್ರೀತಿಸುವುದಿಲ್ಲ? ಏಕೆಂದರೆ ಅವರು ಅಪರಿಪೂರ್ಣರು. ಆದರೆ ಕೃಷ್ಣಪ್ರಜ್ಞಾವಂತ ವ್ಯಕ್ತಿಯು ಯಾವ ಪಶುವನ್ನು ಕೊಲ್ಲುವುದಿಲ್ಲ, ತೊಂದರೆ ಕೂಡ ಕೊಡುವುದಿಲ್ಲ. ಅದುವೇ ಸಾರ್ವತ್ರಿಕ ಪ್ರೀತಿಯೆಂದರೆ. ನೀನು ಕೇವಲ ನಿನ್ನ ತಮ್ಮ ಅಥವ ತಂಗಿಯನ್ನು ಪ್ರೀತಿಸಿದರೆ ಅದು ಸಾರ್ವತ್ರಿಕ ಪ್ರೀತಿಯಲ್ಲ. ಸಾರ್ವತ್ರಿಕ ಪ್ರೀತಿಯೆಂದರೆ ಎಲ್ಲರನೂ ಪ್ರೀತಿಸುವುದು. ಅಂತಹ ಸಾರ್ವತ್ರಿಕ ಪ್ರೀತಿಯನ್ನು ಕೃಷ್ಣ ಪ್ರಜ್ಞೆಯಿಂದ ವಿಕಸಿಸ ಬಹುದೆ ಹೊರತು ಬೇರೆ ರೀತಿಯಿಂದಲ್ಲ.

ಹೆಣ್ಣು ಅತಿಥಿ: ನನಗೆ ಗೊತ್ತಿರುವ ಕೆಲವು ಭಕ್ತರು ಸಂಬಂಧಗಳನ್ನು ಕಡಿಯಬೇಕಾಯಿತು, ತಮ್ಮ ಭೌತಿಕ ತಂದೆ ತಾಯಿಯರ ಜೊತೆ. ಅದು ಅವರಿಗೆ ನೋವನ್ನುಂಟುಮಾಡಿತು, ಏಕೆಂದರೆ ಅದು ಪೋಷಕರಿಗೆ ಅರ್ಥವಾಗುವುದಿಲ್ಲ. ಅದು ಅವರಿಗೆ ಸುಲಭವಾಗಲು ಏನು ಹೇಳುವಿರಿ?

ಪ್ರಭುಪಾದ: ಯಾವೋಬ್ಬ ಹುಡುಗ ಕೃಷ್ಣ ಪ್ರಜ್ಞನೊ ಅವನು ತನ್ನ ಪೋಷಕರಿಗೆ, ಸಂಸಾರಕ್ಕೆ, ದೇಶವಾಸಿಗಳಿಗೆ, ಹಾಗು ಸಮಾಜಕ್ಕೆ ಉತ್ತಮ ಸೇವೆ ನೀಡುತ್ತಾನೆ. ಕೃಷ್ಣ ಪ್ರಜ್ಞೆಯಿಲ್ಲದೆ ತಮ್ಮ ಪೋಷಕರಿಗೆ ಏನು ಸೇವೆ ಮಾಡುತ್ತಿದ್ದಾರೆ? ಪೋಷಕರಿಂದ ಅಗಲಿರುವವರೆ ಜಾಸ್ತಿ. ಪ್ರಹ್ಲಾದ ಮಹಾರಾಜರು ಒಬ್ಬ ಮಾಹಾನ್ ಭಕ್ತ, ಆದರೆ ಅವನ ತಂದೆ ಭಕ್ತನಲ್ಲ. ಎಂತಹ ಭಕ್ತನು ಪ್ರಹ್ಲಾದನೆಂದರೆ ಅವನ ತಂದೆಯನ್ನು ನೃಸಿಂಹದೇವ ಕೊಂದನು, ಹಾಗು ಅವನಿಗೆ ಏನಾದರು ವರವನ್ನು ಕೇಳು ಎಂದು ಆಜ್ಞೆ ಮಾಡಿದಾಗ ಅವನು ಹೇಳಿದನು, “ಪ್ರಭು, ನಾನು ವ್ಯಾಪಾರಿಯಲ್ಲ, ನಿಮಗೆ ಸೇವೆ ಮಾಡಿ ಅದಕ್ಕೆ ಪ್ರತಿಫಲ ಪಡೆಯುವುದ್ದಕ್ಕೆ. ನನ್ನನ್ನು ಕ್ಷಮಿಸಿ.” ನೃಸಿಂಹದೇವ ಬಹಳ ತೃಪ್ತಿಪಟ್ಟನು, “ಇವನು ಪರಿಶುದ್ಧ ಭಕ್ತ”. ಆದರೆ ಆ ಪರಿಶುದ್ಧ ಭಕ್ತನೆ ಪ್ರಭುವನ್ನು ಪ್ರಾರ್ಥಿಸಿದನು, “ನನ್ನ ತಂದೆ ನಾಸ್ತಿಕನು, ಹಾಗು ಎಷ್ಟೋ ಅಪರಾದಗಳನ್ನು ಮಾಡಿದ್ದಾನೆ, ಆದ್ದರಿಂದ ನಿನ್ನನ್ನು ಬೇಡುತ್ತಿದ್ದೇನೆ, ಅವನಿಗೆ ಮುಕ್ತಿಕೊಡು.” ನೃಸಿಂಹದೇವ ಹೇಳಿದನು, “ನೀನು ಮಗನಾಗಿರುವ ಕಾರಣದಿಂದ ನಿನ್ನ ತಂದೆಗೆ ಆಗಲೆ ಮುಕ್ತಿ ಕೊಡಲಾಗಿದೆ. ಅವನು ಅಷ್ಟೆಲ್ಲ ಅಪರಾದಗಳನ್ನು ಮಾಡಿದರೂ, ನೀನು ಅವನ ಮಗನಾಗಿರುವ ಕಾರಣದಿಂದ ಅವನು ಮುಕ್ತಿ ಪಡೆದಿದ್ದಾನೆ. ನಿನ್ನ ತಂದೆ ಮಾತ್ರವಲ್ಲ, ನಿನ್ನ ತಂದೆಯ ತಂದೆ, ಅವನ ತಂದೆ, ಏಳು ತಲೆಮಾರು, ಎಲ್ಲರೂ ಮುಕ್ತರಾಗಿದ್ದಾರೆ.” ಆದ್ದರಿಂದ ಒಬ್ಬ ವೈಷ್ಣವ ಪರಿವಾರದಲ್ಲಿ ಆವಿರ್ಭವಿಸಿದರೆ ಅವನು ತನ್ನ ತಂದೆಯನ್ನು ಮಾತ್ರವಲ್ಲ, ತಂದೆಯೆ ತಂದೆ, ಅವನ ತಂದೆ, ಅವನ ತಂದೆ, ಹಾಗೆ ಎಲ್ಲರನ್ನು ಮುಕ್ತರನ್ನಾಗಿಸುತ್ತಾನೆ. ಆದ್ದರಿಂದ ಕೃಷ್ಣ ಪ್ರಜ್ಞಾವಂತನಾಗುವುದೆ ಪರಿವಾರಕ್ಕೆ ಮಾಡುವ ಶ್ರೇಷ್ಟ ಸೇವೆ. ವಾಸ್ತವಿಕವಾಗಿ ಇದು ನಡೆದಿದೆ. ನನ್ನ ಶಿಷ್ಯನಾದ ಕಾರ್ತಿಕೇಯ, ಅವನ ತಾಯಿಗೆ ಸಂಗಾತಿತನ ಎಷ್ಟು ಇಷ್ಟವೆಂದರೆ ಅವನು, “ಅಮ್ಮ, ನಿನ್ನನು ನೋಡಬೇಕು” ಅಂದರೆ, ಅವಳು “ಕುಳಿತುಕೊ. ನಾನು ನೃತ್ಯ ಕೂಟಕ್ಕೆ ಹೋಗಬೇಕು” ಎನ್ನುತಿದ್ದಳು. ಅವರ ಸಂಬಂಧ ಅಂತಹದು. ಆದರು ಈ ಹುಡುಗ ಕೃಷ್ಣ ಪ್ರಜ್ಞಾವಂತನಾಗಿದ್ದರಿಂದ ಅವನ ಅಮ್ಮನ ಹತ್ತಿರ ಹಲವಾರು ಬಾರಿ ಕೃಷ್ಣನ ಬಗ್ಗೆ ಮಾತಾಡುತ್ತಿದ. ಅವಳು ಮರಣ ಹೊಂದುವ ಸಮಯದಲ್ಲಿ ಕೇಳಿದಳು, “ಎಲ್ಲಿ ನಿನ್ನ ಕೃಷ್ಣ? ಇಲ್ಲಿದ್ದಾನೆಯೆ?” ತಕ್ಷಣ ಅವಳು ಮೃತಳಾದಳು. ಅದರ ಅರ್ಥವೆನೆಂದರೆ ಅವಳು ಮೃತ್ಯುವಿನ ಸಮಯದಲ್ಲಿ ಕೃಷ್ಣನನ್ನು ನೆನೆದಳು, ಆದ್ದರಿಂದ ತಕ್ಷಣ ಮುಕ್ತಿಯನ್ನು ಪಡೆದಳು. ಅದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ: ಯಮ್ ಯಮ್ ವಾಪಿ ಸ್ಮರನ್ ಲೋಕೆ ತ್ಯಜ್ಯತಿ ಅಂತೆ ಕಲೇವರಮ್ (ಭ.ಗೀ 8.6). ಸಾವಿನ ವಿಷಮ ಗಳಿಗೆಯಲ್ಲಿ ಕೃಷ್ಣನನ್ನು ನೆನೆಸಿಕೊಂಡರೆ ಜೀವನ ಸಫಲವಾಗುತ್ತದೆ. ಆದ್ದರಿಂದ ಈ ತಾಯಿ ಅವಳ ಮಗ, ಕೃಷ್ಣ ಪ್ರಜ್ಞಾವಂತ ಮಗನ ಕಾರಣದಿಂದ, ಕೃಷ್ಣ ಪ್ರಜ್ಞೆಗೆ ಬರದೆಯೂ ಮುಕ್ತಿಯನ್ನು ಪಡೆದಳು. ಅದ್ದರಿಂದ ಇದುವೇ ಅದರ ಲಾಭ.