KN/Prabhupada 0075 - ನೀನು ಗುರುವಿನೆಡೆಗೆ ಸಾಗಬೇಕು



Lecture on SB 1.8.25 -- Mayapur, October 5, 1974

ಒಬ್ಬನು ಉತ್ತಮ ಮಟ್ಟದ ಪ್ರಶ್ನೆಗಳ ಬಗ್ಗೆ ವಿಚಾರಿಸಬೇಕೆಂದು ಜಿಜ್ಞಾಸೆಯನಾಗಿದ್ದರೆ, ಬ್ರಹ್ಮಜಿಜ್ಞಾಸ, ಆಗ ಅವನಿಗೆ ಗುರುವಿನ ಅಗತ್ಯವಿದೆ. ತಸ್ಮಾದ್ ಗುರುಮ್ ಪ್ರಪದ್ಯೇತ – “ಉತ್ತಮ ಮಟ್ಟದ ಜ್ಞಾನವನ್ನು ತಿಳಿಯಲು ನೀನು ಜಿಜ್ಞಾಸಿಯಾಗಿರುವೆ, ಆದ್ದರಿಂದ ನೀನು ಗುರುವಿನೆಡೆಗೆ ಸಾಗಬೇಕು.” ತಸ್ಮಾದ್ ಗುರುಮ್ ಪ್ರಪದ್ಯೇತ. ಯಾರು? ಜಿಜ್ಞಾಸು ಶ್ರೇಯ ಉತ್ತಮಮ್. ಉತ್ತಮಮ್. ಉತ್ತಮಮ್ ಅಂದರೆ ಕತ್ತಲೆಗೆ ಅತೀತವಾಗಿರುವುದು. ಈ ಸಂಪೂರ್ಣ ಜಗತ್ತು ಕತ್ತಲೆ. ಆದ್ದರಿಂದ ಯಾರು ಕತ್ತಲೆಗೆ ಅತೀತವಾಗಬೇಕೆಂದುಕೊಂಡಿದ್ದಾನೋ ಅವನು. ತಮಸಿ ಮಾ ಜ್ಯೋತಿರ್ ಗಮ. ವೈದಿಕ ಆದೇಶವೇನೆಂದರೆ – “ಕತ್ತಲೆಯಲ್ಲಿ ಇರಬೇಡ. ಬೆಳಿಕಿನತ್ತ ಹೊರಡು.” ಆ ಬೆಳಕು ಬ್ರಹ್ಮನ್, ಬ್ರಹ್ಮ ಜಿಜ್ಞಾಸ. ಆದ್ದರಿಂದ ಯಾರು ಜಜ್ಞಾಸಿ… ಉತ್ತಮ… ಉದ್ಗತ-ತಮ ಯಸ್ಮಾತ್. ಉದ್ಗತ-ತಮ. ತಮಾ ಅಂದರೆ ಅಜ್ಞಾನ. ನಿರಾಕಾರವಾದಿ ತತ್ವಜ್ಞರು ಕೇವಲ ಜ್ಞಾನ, ಜ್ಞಾನವಾನ್ ಎನ್ನುತ್ತಾರೆ. ನಿರಾಕಾರವಾದಿ ತತ್ವಜ್ಞರು ಕೇವಲ ಜ್ಞಾನ, ಜ್ಞಾನವಾನ್ ಎನ್ನುತ್ತಾರೆ. ಆದರೆ ಜ್ಞಾನ ಎಂಬುದು ಏಕರೂಪಿಯಲ್ಲ. ಹಲವಾರು ಬಗೆಯ ಜ್ಞಾನವಿದೆ. ವೃಂದಾವನದಲ್ಲಿರುವ ಹಾಗೆ, ಜ್ಞಾನವಿದೆ, ಆದರೆ ವಿವಿಧವಾದವು. ಒಬ್ಬನು ಸೇವಕನಾಗಿ ಕೃಷ್ಣನನ್ನು ಪ್ರೀತಿಸುತ್ತಾನೆ. ಒಬ್ಬನು ಸ್ನೇಹಿತನಾಗಿ ಕೃಷ್ಣನನ್ನು ಪ್ರೀತಿಸುತ್ತಾನೆ. ಒಬ್ಬನು ಕೃಷ್ಣನ ಐಶ್ವರ್ಯವನ್ನು ಮೆಚ್ಚುತ್ತಾನೆ. ಒಬ್ಬನು ಕೃಷ್ಣನೆ ತನ್ನ ತಂದೆ ತಾಯಿ ಎನ್ನುವಂತೆ ಪ್ರೀತಿಸುತ್ತಾನೆ. ಒಬ್ಬನು ಪ್ರಿಯಕರನಂತೆ ಕೃಷ್ಣನನ್ನು ಪ್ರೀತಿಸುತ್ತಾನೆ, - ಚಿಂತಿಸಬೇಡಿ. ಒಬ್ಬನು ಶತ್ರುವಾಗಿ ಕೃಷ್ಣನನ್ನು ಪ್ರೀತಿಸುತ್ತಾನೆ. ಕಂಸನ ಹಾಗೆ. ಅದು ಕೂಡ ವೃಂದಾವನ-ಲೀಲಾ. ಅವನು ಕೃಷ್ಣನ ಬಗ್ಗೆ ವಿವಿಧ ರೀತಿಯಲ್ಲಿ ಆಲೋಚಿಸುತ್ತಿದ್ದ, ಹೇಗೆ ಕೃಷ್ಣನನ್ನು ಕೊಲ್ಲಬಹುದು ಎಂದು. ಪೂತನಾ, ಅವಳೂ ಕೂಡ ಕೃಷ್ಣನ ಪ್ರೇಯಸಿಯಾಗಿ ಬಂದಳು, ಅವಳ ಎದೆ ಹಾಲನ್ನು ಕುಡಿಸಲು, ಆದರೆ ಅವನನ್ನು ಕೊಲ್ಲುವುದು ಹೇಗೆ ಎಂಬುದು ಅವಳ ಆಂತರಿಕ ಬಯಕೆಯಾಗಿತ್ತು. ಆದರೆ ಅದನ್ನೂ ಕೂಡ ಪರೋಕ್ಷವಾದ ಪ್ರೀತಿಯೆಂದು ಪರಿಗಣಿಸಲಾಗಿದೆ. ಅನ್ವಯಾತ್.

ಕೃಷ್ಣನು ಜಗದ್-ಗುರು. ಅವನೇ ಆದಿ ಗುರುವು. ಭಗವದ್ಗೀತೆಯ ಮುಖಾಂತರ ಆ ಗುರುವೇ ಬೋಧಿಸುತ್ತಿದ್ದಾನೆ, ಆದರೆ ನಾವು ದೂರ್ತರು ಪಾಠವನ್ನು ಕಲಿಯುವುದಿಲ್ಲ. ಅದ್ದರಿಂದ ನಾವು ಮೂಢರು. ಯಾರೊಬ್ಬನು ಜಗದ್-ಗುರುವಿನಿಂದ ಬೋಧನೆಯನ್ನು ಪಡೆಯಲು ಅನರ್ಹನೋ, ಅವನೇ ಮೂಢ. ಆದ್ದರಿಂದ ನಮ್ಮ ಪರೀಕ್ಷಾ ಪ್ರನಾಳವೇನೆಂದರೆ, ಯಾರಿಗೆ ಕೃಷ್ಣನನ್ನು ತಿಳಿಯದೋ, ಭಗವದ್ಗೀತೆಯನ್ನು ಪಾಲಿಸಲು ತಿಳಿಯದೋ, ನಾವು ತಕ್ಷಣ ಅವನನ್ನು ದೂರ್ತನೆಂದು ಪರಿಗಣಿಸುತ್ತೇವೆ. ಅವನು ಪ್ರಧಾನ ಮಂತ್ರಿಯಾಗಿರಬಹುದು, ಅವನು ಉಚ್ಚನ್ಯಾಯಾಲಯದ ನ್ಯಾಯಾಧೀಶನಾಗಿರಬಹುದು, ಅಥವ... ಚಿಂತಿಸಬೇಡ… ಇಲ್ಲ. “ಅದರೆ ಅವನು ಪ್ರಧಾನಮಂತ್ರಿ. ಅವನು ಉಚ್ಚನ್ಯಾಯಾಲಯದ ತೀರ್ಪುಗಾರನಾದರೂ ಮೂಢನೆ?” ಹೌದು. ಹೇಗೆ? ಮಾಯಯಾಪಹೃತ-ಜ್ಞಾನಾಃ (ಭ.ಗೀ 7.15). “ಅವನಿಗೆ ಕೃಷ್ಣನ ಅರಿವೇ ಇಲ್ಲ. ಅವನನ್ನು ಮಾಯೆ ಆವರಿಸಿದ್ದಾಳೆ.” ಮಾಯಯಾಪಹೃತ-ಜ್ಞಾನಾ ಆಸುರಮ್ ಭಾವಮ್ ಆಶ್ರಿತಾಃ. ಆದ್ದರಿಂದ ಅವನು ಮೂಢ. ಆದ್ದರಿಂದ ನೇರವಾಗಿ ಬೋಧನೆಮಾಡಿ. ನೀವು ಇವೆಲ್ಲವನ್ನು ಮೃದುಭಾಷೆಯಲ್ಲಿ ಹೇಳಬಹುದು, ಉದ್ವೇಗ ಮಾಡದಿರಲು, ಆದರೂ ಯಾರೆ ಕೃಷ್ಣನನ್ನು ಜಗದ್-ಗುರು ಎಂದು ಸ್ವೀಕರಿಸುವುದಿಲ್ಲವೋ, ಹಾಗು ಅವನಿಂದ ಪಾಠಗಳನ್ನು ಸ್ವೀಕರಿಸುವುದಿಲ್ಲವೋ ಅವನು ದೂರ್ತ. ಜಗನ್ನಾಥ ಪುರೀಯಲ್ಲಿರುವ ಆ ಒಬ್ಬ ಮೂಢನಂತೆ. ಅವನು ಹೇಳುತ್ತಾನೆ, “ನೀನು ಮರುಜನ್ಮ ಪಡೆ. ಆಗ ನೀನು…” ಆ ಮೂಢ, ಅವನು ದೂರ್ತನೆಂದು ತಿಳಿ. ಏಕೆ? ಅವನು ಜಗದ್-ಗುರು; ಅವನೇ ಹೇಳಿಕೊಳ್ಳುತ್ತಾನೆ, “ನಾನು ಜಗದ್-ಗುರು”, ಎಂದು. ಆದರೆ ಅವನು ಜಗದ್-ಗುರು ಅಲ್ಲ. ಅವನು ಜಗತ್ತನ್ನೆ ನೋಡಿಲ್ಲ. ಅವನು ಒಂದು ಕಪ್ಪೆ. ಆದರೆ ತಾನು ಜಗದ್-ಗುರು ಎಂದು ಹೇಳಿಕೊಳ್ಳುತ್ತಾನೆ. ಆದ್ದರಿಂದ ಅವನು ಮೂಢ. ಕೃಷ್ಣ ಹೇಳುತ್ತಾನೆ. ಅವನು ಮೂಢ, ಏಕೆಂದರೆ ಅವನು ಕೃಷ್ಣನು ಬೋಧಿಸಿದ ಪಾಠವನ್ನು ಸ್ವೀಕರಿಸಲಿಲ್ಲ.