KN/Prabhupada 0137 - ಜೀವನದ ಗುರಿಯೇನು



Lecture on BG 7.4 -- Nairobi, October 31, 1975

ಹರಿಕೇಶ: "ಅನುವಾದ - ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ, ಮತ್ತು ಅಹಂಕಾರ - ಒಟ್ಟಾರೆಯಾಗಿ ಈ ಎಂಟು ನನ್ನ ಪ್ರತ್ಯೇಕಗೊಂಡ ಭೌತಿಕ ಶಕ್ತಿಗಳಾಗಿವೆ."

ಪ್ರಭುಪಾದ:

ಭೂಮಿರ್‌ ಆಪೋ ಅನಲೋ ವಾಯುಃ
ಖಂ ಮನೋ ಬುದ್ಧಿರ್‌ ಏವ ಚ
ಅಹಂಕಾರ ಇತೀಯಮ್‌ ಮೇ
ಭಿನ್ನಾ ಪ್ರಕೃತಿರ್‌ ಅಷ್ಟಧಾ
(ಭ.ಗೀ 7.4).

ಕೃಷ್ಣ ತನ್ನ ಬಗ್ಗೆ ತಾನೇ ವಿವರಿಸುತ್ತಿದ್ದಾನೆ. ದೇವರು ಏನು ಎಂದು ದೇವರೇ ವಿವರಿಸುತ್ತಿದ್ದಾನೆ. ಅದು ನಿಜವಾದ ಜ್ಞಾನ. ನೀವು ದೇವರ ಬಗ್ಗೆ ಊಸಿದರೆ, ಅದು ಸಾಧ್ಯವಿಲ್ಲ. ದೇವರು ಅಪರಿಮಿತ. ನಿಮಗೆ ಅರ್ಥವಾಗುವುದಿಲ್ಲ. ದೇವರು, ಕೃಷ್ಣ, ಆರಂಭದಲ್ಲಿ ಹೇಳಿದನು, ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತತ್‌ ಶೃಣು (ಭ.ಗೀ 7.1). ಸಮಗ್ರಮ್. ಸಮಗ್ರ ಎಂದರೆ ಯಾವುದಾದರೂ... ಅಥವಾ ಸಮಗ್ರ ಎಂದರೆ ಸಂಪೂರ್ಣ. ಆದ್ದರಿಂದ, ಅಧ್ಯಯನ ಮತ್ತು ಜ್ಞಾನಕ್ಕಾಗಿ ಯಾವುದೇ ವಿಷಯವಿದ್ದರೂ, ಅದೆಲ್ಲದರ ಒಟ್ಟು ಮೊತ್ತ ಒಂದೇ. ಭಗವಂತನೇ ಎಲ್ಲದರ ಒಟ್ಟು ಮೊತ್ತ. ಆದ್ದರಿಂದ, ಅವನ ಬಗ್ಗೆ ಅವನೇ ವಿವರಿಸಲು ಪ್ರಾರಂಭಿಸುತ್ತಾನೆ.

ಮೊದಲನೆಯದಾಗಿ, ನಮಗೆ ದೇವರ ಬಗ್ಗೆ ಯಾವುದೇ ಮಾಹಿತಿ ಇಲ್ಲ - ಆದರೆ ಪ್ರಾಯೇಣ ನಾವು ವಿಶಾಲವಾದ ಭೂಮಿ, ವಿಶಾಲವಾದ ನೀರು, ಸಾಗರ, ವಿಶಾಲವಾದ ಆಕಾಶ, ಮತ್ತೆ ಬೆಂಕಿಯನ್ನು ನೋಡುತ್ತೇವೆ, ಅನೇಕ ವಸ್ತುಗಳು, ಭೌತಿಕ ವಸ್ತುಗಳು, ಮನಸ್ಸು ಸಹ… ಮನಸ್ಸು ಕೂಡ ಭೌತಿಕ ವಸ್ತು. ಮತ್ತು ಅಹಂಕಾರ. ಪ್ರತಿಯೊಬ್ಬರೂ ಆಲೋಚಿಸುವುದು, “ನಾನು ಅದು, ನಾನು…” ಕರ್ತಾಹಮ್‌ ಇತಿ ಮನ್ಯತೇ. ಅಹಂಕಾರ ವಿಮೂಢಾತ್ಮಾ (ಭ.ಗೀ 3.27). ಇದು ಅಹಂಕಾರ. ಈ ಅಹಂಕಾರ ಅಶುದ್ಧ ಅಹಂಕಾರ. ಪರಿಶುದ್ಧ ಅಹಂಕಾರವೂ ಇದೆ. ಆ ಪರಿಶುದ್ಧ ಅಹಂಕಾರವೇ ಅಹಂ ಬ್ರಹ್ಮಾಸ್ಮಿ. ಮತ್ತು ಅಶುದ್ಧ ಅಹಂ: "ನಾನು ಭಾರತೀಯ," "ನಾನು ಅಮೆರಿಕನ್," "ನಾನು ಆಫ್ರಿಕನ್," "ನಾನು ಬ್ರಾಹ್ಮಣ," "ನಾನು ಕ್ಷತ್ರಿಯ," "ನಾನು ಇದು." ಇದು ಅಶುದ್ಧ ಅಹಂ, ಅಹಂಕಾರ. ಈ ಸಮಯದಲ್ಲಿ... ಈ ಸಮಯದಲ್ಲಿ ಮಾತ್ರವಲ್ಲ, ಯಾವಾಗಲು, ಈ ಎಲ್ಲ ವಿಷಯಗಳಿಂದ ಸುತ್ತುವರೆದಿದ್ದೇವೆ. ನಮ್ಮ ತತ್ವದ ಆರಂಭ ಅಲ್ಲಿಂದಲೇ: ಈ ಭೂಮಿ ಎಲ್ಲಿಂದ ಬಂತು? ಈ ನೀರು ಎಲ್ಲಿಂದ ಬಂತು? ಅಗ್ನಿ ಎಲ್ಲಿಂದ ಬಂತು? ಅದು ಸಹಜ ಪ್ರಶ್ನೆ. ಆಕಾಶ ಎಲ್ಲಿಂದ ಬಂತು? ಕೋಟ್ಯಾಂತರ ನಕ್ಷತ್ರಗಳು ಹೇಗೆ ನೆಲೆಗೊಂಡಿವೆ? ಆದ್ದರಿಂದ, ಇವು ಬುದ್ಧಿವಂತ ವ್ಯಕ್ತಿಯ ವಿಚಾರಣೆಗಳು. ಇದುವೇ ತಾತ್ವಿಕ ಜೀವನದ ಪ್ರಾರಂಭ. ಆದ್ದರಿಂದ, ಚಿಂತನಶೀಲ ವ್ಯಕ್ತಿಯು ಕ್ರಮೇಣ, ಪರಮ ಪ್ರಭುವಾದ ಕೃಷ್ಣನನ್ನು ಅರ್ಥಮಾಡಿಕೊಳ್ಳುವಲ್ಲಿ ಜಿಜ್ಞಾಸೆ ಹೊಂದಿರುತ್ತಾರೆ.

ಆದ್ದರಿಂದ, ಕೃಷ್ಣನಿದ್ದಾನೆ, ಮತ್ತು ಅವನ ಬಗ್ಗೆ ಅವನೇ ವಿವರಿಸುತ್ತಿದ್ದಾನೆ: "ನಾನು ಹೀಗಿದ್ದೇನೆ." ಆದರೆ ದುರದೃಷ್ಟವಶಾತ್ ಕೃಷ್ಣನನ್ನು ಅರ್ಥಮಾಡಿಕೊಳ್ಳದೆ ದೇವರು ಎಂದರೇನು ಎಂದು ಉಹಿಸಲು ಪ್ರಯತ್ನಿಸುತ್ತೇವೆ. ಇದೇ ನಮ್ಮ ರೋಗ. ಕೃಷ್ಣನು ಅವನ ಬಗ್ಗೆ ಅವನೇ ವಿವರಿಸುತ್ತಿದ್ದಾನೆ; ದೇವರು ತನ್ನ ಬಗ್ಗೆ ತಾನೇ ವಿವರಿಸುತ್ತಿದ್ದಾನೆ. ನಾವು ಅದನ್ನು ಸ್ವೀಕರಿಸುವುದಿಲ್ಲ, ಒಂದೋ ನಿರಾಕರಿಸುತ್ತೇವೆ, ಅಥವ ಕಾಲು, ತಲೆ, ಇತ್ಯಾದಿ ಇಲ್ಲದ ದೇವರನ್ನು ಸ್ವೀಕರಿಸುತ್ತೇವೆ. ಅದೇ ನಮ್ಮ ರೋಗ. ಇದನ್ನು ಹಿಂದಿನ ಶ್ಲೋಕದಲ್ಲಿ ವಿವರಿಸಲಾಗಿದೆ,

ಮನುಷ್ಯಾಣಾಂ ಸಹಸ್ರೇಷು
ಕಸ್ಚಿದ್‌ ಯತತಿ ಸಿದ್ಧಯೇ
ಯತತಾಮ್‌ ಅಪಿ ಸಿದ್ಧಾನಾಂ
ಕಶ್ಚಿನ್‌ ಮಾಂ ವೇತ್ತಿ ತತ್ತ್ವತಃ
(ಭ.ಗೀ 7.3).

ಕೋಟ್ಯಾಂತರ ವ್ಯಕ್ತಿಗಳಲ್ಲಿ, ಕೆಲವರೂ ಮಾತ್ರ "ಜೀವನದ ಗುರಿ ಏನು? ದೇವರು ಯಾರು? ನನ್ನ ಸಂಬಂಧ ಏನು..." ಎಂದು ಅರಿಯಲು ಆಸಕ್ತರಾಗಿರುತ್ತಾರೆ. ಯಾರಿಗೂ ಆಸಕ್ತಿಯಿಲ್ಲ. ಹೇಗೆಂದರೆ... ಸ ಏವ ಗೋ-ಖರಃ (ಶ್ರೀ.ಭಾ 10.84.13). ಬೆಕ್ಕು ಮತ್ತು ನಾಯಿಗಳಂತೆ ದೇಹಾತ್ಮ ಅಭಿಮಾನದಲ್ಲಿ ಪ್ರತಿಯೊಬ್ಬರೂ ಆಸಕ್ತರಾಗಿದ್ದಾರೆ. ಇದು ಪರಿಸ್ಥಿತಿ. ಈಗ ಮಾತ್ರವಲ್ಲ, ಯಾವಾಗಲೂ ಸರಿ, ಇದೇ ಭೌತಿಕ ಸ್ಥಿತಿ. ಆದರೆ ಒಬ್ಬ ಮನುಷ್ಯ, ಮನುಷ್ಯಾಣಾಂ ಸಹಸ್ರೇಷು, ಲಕ್ಷಾಂತರ ಜನರಲ್ಲಿ, ಒಬ್ಬನು ತನ್ನ ಜೀವನವನ್ನು ಪರಿಪೂರ್ಣವಾಗಿಸಲು ಪ್ರಯತ್ನಿಸುತ್ತಾನೆ. ಮತ್ತು ಅಂತಹ ಪರಿಪೂರ್ಣತೆಯಿಂದ...

ಪರಿಪೂರ್ಣತೆ ಎಂದರೆ ಅವನ ನೈಜ ಸ್ಥಾನವನ್ನು ಅರಿಯುವುದು, ಅಂದರೆ ತಾನು ಈ ಭೌತಿಕ ದೇಹವಲ್ಲ; ಅವನು ಆತ್ಮ, ಬ್ರಹ್ಮನ್, ಎಂದು. ಅದೇ ಪರಿಪೂರ್ಣತೆ, ಜ್ಞಾನದ ಪರಿಪೂರ್ಣತೆ, ಬ್ರಹ್ಮ-ಜ್ಞಾನ.