KN/Prabhupada 0152 - ಒಬ್ಬ ಪಾಪಿ ಕೃಷ್ಣ ಪ್ರಜ್ಞಾವಂತನಾಗಲು ಸಾಧ್ಯವಿಲ್ಲ



Lecture on BG 1.31 -- London, July 24, 1973

ಪ್ರತಿಯೊಬ್ಬರೂ ಗೃಹ-ಕ್ಷೇತ್ರ-ಸುತಾಪ್ತ-ವಿತ್ತೈಃ (ಶ್ರೀ.ಭಾ 5.5.8), ಈ ಗೃಹಸ್ಥ ಜೀವನ ಮತ್ತು ಸ್ವಲ್ಪ ಭೂಮಿಯನ್ನು ಹೊಂದುವುದರೊಂದಿಗೆ ಸಂತೋಷವಾಗಿರಲು ಬಯಸುತ್ತಾರೆ. ಆಗಿನ ಕಾಲದಲ್ಲಿ ಕೈಗಾರಿಕೆ ಇರಲಿಲ್ಲ. ಆದ್ದರಿಂದ ಉದ್ಯಮದ ಉಲ್ಲೇಕವಿಲ್ಲ. ಭೂಮಿ. ನಿಮಗೆ ಹೊಲವಿದ್ದರೆ, ನೀವೆ ನಿಮ್ಮ ಆಹಾರವನ್ನು ಉತ್ಪಾದಿಸಬಹುದು. ವಾಸ್ತವವಾಗಿ ಅದೇ ನಮ್ಮ ಜೀವನ. ಇಲ್ಲಿ, ಈ ಗ್ರಾಮದಲ್ಲಿ ಸಾಕಷ್ಟು ಭೂಮಿ ಖಾಲಿ ಬಿದ್ದಿರುವುದನ್ನು ನಾವು ಕಾಣುತ್ತೇವೆ, ಆದರೆ ಅವರು ತಮ್ಮ ಆಹಾರವನ್ನು ಉತ್ಪಾದಿಸುತ್ತಿಲ್ಲ. ಅವರು ತಮ್ಮ ಆಹಾರಕ್ಕಾಗಿ ಅಮಾಯಕ ಪ್ರಾಣಿಯಾದ ಹಸುಗಳನ್ನು ಕೊಂದು ತಿನ್ನುತ್ತಾರೆ. ಇದು ಸರಿಯಲ್ಲ. ಗೃಹ-ಕ್ಷೇತ್ರ. ನೀವು ಗೃಹಸ್ಥರಾಗಿ, ಮತ್ತು ನೀವು ನಿಮ್ಮ ಆಹಾರವನ್ನು ಗೃಹ ಕ್ಷೇತ್ರ, ಅಂದರೆ ಭೂಮಿಯಿಂದ, ಉತ್ಪಾದಿಸಿ. ನೀವು ಆಹಾರವನ್ನು ಉತ್ಪಾದಿಸಿ, ನಂತರ ಮಕ್ಕಳನ್ನು ಪಡೆಯಿರಿ, ಗೃಹ-ಕ್ಷೇತ್ರ-ಸುತ-ಆಪ್ತ-ವಿತ್ತ. ಭಾರತದ ಹಳ್ಳಿಗಳಲ್ಲಿ ಈಗಲೂ ಬಡವರಲ್ಲಿ, ಕೃಷಿಕರಲ್ಲಿ ಒಂದು ಪದ್ಧತಿ ಇದೆ. ಕೃಷಿಕನು ಹಸುವನ್ನು ಸಾಕಲು ಸಾಧ್ಯವಾಗದಿದ್ದರೆ, ಅವನು ಮದುವೆಯಾಗುವುದಿಲ್ಲ. ಜೋರು ಮತ್ತು ಗೋರು. ಜೋರು ಎಂದರೆ ಹೆಂಡತಿ, ಮತ್ತು ಗೋರು ಎಂದರೆ ಹಸು. ಆದ್ದರಿಂದ, ಒಬ್ಬನು ಹಸುವನ್ನು ಸಾಕಲು ಸಮರ್ಥನಾಗಿದ್ದರೆ ಮಾತ್ರ ಹೆಂಡತಿಯನ್ನು ಸ್ವೀಕರಿಸಬೇಕು. ಜೋರು ಮತ್ತು ಗೋರು. ಏಕೆಂದರೆ ಹೆಂಡತಿ ಬಂದರೆ, ತಕ್ಷಣ ಮಕ್ಕಳಾಗುತ್ತಾರೆ. ಮತ್ತು ನೀವು ಅವರಿಗೆ ಹಸುವಿನ ಹಾಲನ್ನು ನೀಡದಿದ್ದರೆ, ಮಕ್ಕಳು ದುರ್ಬಲರಾಗಿರುತ್ತಾರೆ, ಆರೋಗ್ಯಕರವಾಗಿರುವುದಿಲ್ಲ. ಅವರು ಸಾಕಷ್ಟು ಹಾಲು ಕುಡಿಯಬೇಕು. ಆದ್ದರಿಂದ, ಹಸುವನ್ನು ತಾಯಿ ಎಂದು ಪರಿಗಣಿಸಲಾಗಿದೆ. ಒಬ್ಬ ತಾಯಿ ಮಗುವಿಗೆ ಜನ್ಮ ನೀಡಿದರೆ, ಇನ್ನೊಬ್ಬ ತಾಯಿ ಹಾಲು ನೀಡುತ್ತಾಳೆ.

ಆದ್ದರಿಂದ, ಪ್ರತಿಯೊಬ್ಬರೂ ತಾಯಿ ಹಸುವಿಗೆ ಋಣಿಯಾಗಿರಬೇಕು, ಏಕೆಂದರೆ ಅವಳು ಹಾಲು ನೀಡುತ್ತಾಳೆ. ನಮ್ಮ ಶಾಸ್ತ್ರದ ಪ್ರಕಾರ ಏಳು ತಾಯಂದಿರಿದ್ದಾರೆ. ಆದೌ ಮಾತಾ, ನಿಜವಾದ ತಾಯಿ, ಯಾರ ದೇಹದಿಂದ ನಾನು ಜನ್ಮಿಸಿದೆನೋ ಅವಳು. ಅದೌ ಮಾತಾ, ಅವಳು ತಾಯಿ. ಗುರು-ಪತ್ನಿ, ಶಿಕ್ಷಕನ ಹೆಂಡತಿ. ಆಕೆಯೂ ತಾಯಿಯೇ. ಅದೌ ಮಾತಾ, ಗುರು-ಪತ್ನಿ, ಬ್ರಾಹ್ಮಣಿ. ಬ್ರಾಹ್ಮಣನ ಹೆಂಡತಿ, ಅವಳು ಕೂಡ ತಾಯಿಯೂ. ಅದೌ ಮಾತಾ ಗುರು-ಪತ್ನಿ ಬ್ರಾಹ್ಮಣಿ ರಾಜ-ಪತ್ನಿಕಾ, ರಾಣಿಯು ಕೂಡ ತಾಯಿಯೇ. ಎಷ್ಟು? ಅದೌ ಮಾತಾ ಗುರು-ಪತ್ನಿ ಬ್ರಾಹ್ಮಣಿ ರಾಜ-ಪತ್ನಿಕಾ, ನಂತರ ಧೇನು. ಧೇನು ಎಂದರೆ ಹಸು. ಆಕೆಯೂ ತಾಯಿಯೇ. ಮತ್ತು ಧಾತ್ರಿ. ಧಾತ್ರಿ ಎಂದರೆ ದಾದಿ. ಧೇನು ಧಾತ್ರಿ ತಥಾ ಪೃಥ್ವಿ, ಭೂಮಿ ಕೂಡ. ಭೂಮಿಯೂ ತಾಯಿಯೇ. ಅವರು ಹುಟ್ಟಿದ ಮಾತೃಭೂಮಿಯನ್ನು ಜನರು ಸಂರಕ್ಷಿಸಿಕೊಳ್ಳುತ್ತಿದ್ದಾರೆ. ಅದು ಒಳ್ಳೆಯದು. ಆದರೆ ಅದರೊಂದಿಗೆ ಅವರು ತಾಯಿ ಹಸುವಿನ ಆರೈಕೆ ಕೂಡ ಮಾಡಬೇಕು. ಆದರೆ ಅವರು ತಾಯಿಯನ್ನು ನೋಡಿಕೊಳ್ಳುತ್ತಿಲ್ಲ. ಆದ್ದರಿಂದ, ಅವರು ಪಾಪಿಗಳು. ಅವರು ನರಳಬೇಕು. ಯುದ್ಧ, ಪಿಡುಗು, ಕ್ಷಾಮ ಬರಬೇಕು. ಮನುಷ್ಯರು ಪಾಪಿಗಳಾದ ತಕ್ಷಣ ಪ್ರಕೃತಿಯ ಶಿಕ್ಷೆಗೆ ಗುರಿಯಾಗುತ್ತಾರೆ. ನೀವು ಅದನ್ನು ತಪ್ಪಿಸಲು ಸಾಧ್ಯವಿಲ್ಲ.

ಆದ್ದರಿಂದ, ಕೃಷ್ಣ ಪ್ರಜ್ಞೆಯ ಆಂದೋಲನವು ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ. ಪಾಪಿಗಳಾಗಬಾರದು ಎಂದು ಜನರಿಗೆ ಕಲಿಸುತ್ತದೆ. ಏಕೆಂದರೆ ಪಾಪಿಗಳು ಕೃಷ್ಣ ಪ್ರಜ್ಞಾವಂತರಾಗಲು ಸಾಧ್ಯವಿಲ್ಲ. ಕೃಷ್ಣ ಪ್ರಜ್ಞಾವಂತನಾಗಬೇಕೆಂದರೆ ಅವನು ತನ್ನ ಪಾಪಕಾರ್ಯಗಳನ್ನು ತ್ಯಜಿಸಬೇಕು ಎಂದರ್ಥ.