KN/Prabhupada 0169 - ಕೃಷ್ಣನನ್ನು ನೋಡಲು ಕಷ್ಟವಾದರೂ ಏನಿದೆ



Lecture on BG 4.24 -- August 4, 1976, New Mayapur (French farm)

ಯೋಗೇಶ್ವರ: ನಾವು ನೇರವಾಗಿ ಕೃಷ್ಣನನ್ನು ಪರಮ ಪರುಷನಾಗಿ ಕಾಣುವಷ್ಟು ಇನ್ನೂ ಪ್ರಬುದ್ಧರಾಗದ ಕಾರಣ, ನಾವು ಕೃಷ್ಣನನ್ನು ಹೇಗೆ ಧ್ಯಾನಿಸಬೇಕು, ಎಂದು ಅವನು ಈಗ ಕೇಳುತ್ತಿದ್ದಾನೆ.

ಪ್ರಭುಪಾದ: ಕೃಷ್ಣನು ದೇವಾಲಯದಲ್ಲಿ ನಿನಗೆ ಕಾಣುತ್ತಿಲ್ಲವೇ? (ನಗು) ನಾವು ಅಸ್ಪಷ್ಟವಾದದ್ದನ್ನು ಆರಾಧಿಸುತ್ತಿದ್ದೇವೆಯೇ? ಕೃಷ್ಣನು ತಿಳಿಸಿದಂತೆ ನೀವು ಕೃಷ್ಣನನ್ನು ನೋಡಬೇಕು. ಪ್ರಸ್ತುತ ಸ್ಥಿತಿಯಲ್ಲಿ... ಕೃಷ್ಣನು ರಸೋ'ಹಮ್ ಅಪ್ಸು ಕೌಂತೇಯ' (ಭ.ಗೀ 7.8) ಎಂದು ಹೇಳುತ್ತಾನೆ. "ನಾನು ನೀರಿನ ರುಚಿ", ಎಂದು ಕೃಷ್ಣನು ಹೇಳುತ್ತಾನೆ. ನೀರಿನ ರುಚಿಯಲ್ಲಿ ಕೃಷ್ಣನನ್ನು ನೀವು ನೋಡುತ್ತೀರಿ. ಅದು ನಿಮ್ಮನ್ನು ಪ್ರಬುದ್ಧನಾಗಿಸುತ್ತದೆ. ವಿವಿಧ ಹಂತಗಳ ಪ್ರಕಾರ... "ನಾನು ನೀರಿನ ರುಚಿ", ಎಂದು ಕೃಷ್ಣನು ಹೇಳುತ್ತಾನೆ. ಆದ್ದರಿಂದ, ನೀವು ನೀರು ಕುಡಿಯುವಾಗ ಕೃಷ್ಣನನ್ನು ಏಕೆ ನೋಡುವುದಿಲ್ಲ. “ಓಹ್, ಈ ರುಚಿ ಕೃಷ್ಣನು.” ರಸೋ 'ಹಮ್ ಅಪ್ಸು ಕೌಂತೇಯ ಪ್ರಭಾಸ್ಮಿ ಶಶಿ-ಸೂರ್ಯಯೋಃ. ನೀವು ಸೂರ್ಯನ ಬೆಳಕನ್ನು, ಚಂದ್ರನ ಬೆಳಕನ್ನು ನೋಡುತ್ತೀರಿ. ಕೃಷ್ಣನು ಹೇಳುತ್ತಾನೆ, "ನಾನೇ ಬಿಸಿಲು; ನಾನೇ ಬೆಳದಿಂಗಳು." ಆದ್ದರಿಂದ, ನೀವು ಮುಂಜಾನೆ ಬಿಸಿಲು ನೋಡಿದ ತಕ್ಷಣ, ಕೃಷ್ಣನನ್ನು ನೋಡುತ್ತೀರಿ.

ನೀವು ರಾತ್ರಿ ಬೆಳದಿಂಗಳನ್ನು ನೋಡಿದ ತಕ್ಷಣ, ಕೃಷ್ಣನನ್ನು ನೋಡುತ್ತೀರಿ. ‘ಪ್ರಣವಃ ಸರ್ವ ವೇದೇಷು.’ ಯಾವುದಾದರೊಂದು ವೈದಿಕ ಮಂತ್ರವನ್ನು ಪಠಿಸಿದರೆ, ‘ಓಂ ತದ್ ವಿಷ್ಣು ಪರ,’ ಈ ಓಂಕಾರವೂ ಕೃಷ್ಣನೇ. ‘ಪೌರುಸಂ ವಿಷ್ಣು’, ಅಂದರೆ ಯಾರೇ ಏನೇ ಅಸಾಧಾರಣ ಕೆಲಸ ಮಾಡಿದರೂ ಅದು ಕೂಡ ಕೃಷ್ಣನೇ. ಆದ್ದರಿಂದ, ನೀವು ಕೃಷ್ಣನನ್ನು ಈ ರೀತಿಯಲ್ಲಿ ನೋಡಬೇಕು. ಆಗ, ಕ್ರಮೇಣ ನೀವು ಅವನನ್ನು ಕಾಣುತ್ತೀರಿ; ಕೃಷ್ಣನು ತನ್ನನ್ನು ತಾನು ಬಹಿರಂಗಪಡಿಸುತ್ತಾನೆ, ನೀವು ನೋಡುತ್ತೀರಿ. ನೀರಿನ ರುಚಿಯನ್ನು ಕೃಷ್ಣನೆಂದು ಅರಿತುಕೊಳ್ಳುವುದಕ್ಕೂ, ಕೃಷ್ಣನನ್ನು ವೈಯಕ್ತಿಕವಾಗಿ ನೋಡುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇದರಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಆದ್ದರಿಂದ, ನಿಮ್ಮ ಪ್ರಸ್ತುತ ಸ್ಥಾನದ ಪ್ರಕಾರ, ನೀವು ಅದರಲ್ಲಿ ಕೃಷ್ಣನನ್ನು ನೋಡಿರಿ. ನಂತರ ನೀವು ಕ್ರಮೇಣ ಅವನನ್ನು ಕಾಣುತ್ತೀರಿ. ನೀವು ತಕ್ಷಣ ಕೃಷ್ಣನ ರಾಸಲೀಲೆಯನ್ನು ನೋಡಲು ಬಯಸಿದರೆ ಅದು ಸಾಧ್ಯವಿಲ್ಲ. ನೀವು (ಮೌನ) ಕೃಷ್ಣನನ್ನು ನೋಡಬೇಕು. ಶಾಖವಿದೆ ಎಂದರೆ ಬೆಂಕಿ ಇದೆ ಎಂದು ತಿಳಿದುಕೊಳ್ಳಬೇಕು. ನೀವು ನೇರವಾಗಿ ಬೆಂಕಿಯನ್ನು ನೋಡದಿದ್ದರೂ, ಹೊಗೆ ಇದ್ದರೆ, ಬೆಂಕಿ ಇದೆ ಎಂದು ತಿಳಿದುಕೊಳ್ಳಬೇಕು. ಆದರೆ ನಾವು ಅರ್ಥಮಾಡಿಕೊಳ್ಳಬಹುದು. ಹೊಗೆ ಇದೆ, ಆದ್ದರಿಂದ ಬೆಂಕಿ ಇರಬೇಕು. ಆರಂಭದಲ್ಲಿ, ಈ ರೀತಿಯಾಗಿ ನೀವು ಕೃಷ್ಣನನ್ನು ಅರಿತುಕೊಳ್ಳಬೇಕು. ಇದನ್ನು ಏಳನೇ ಅಧ್ಯಾಯದಲ್ಲಿ ಹೇಳಲಾಗಿದೆ. ಹುಡುಕು.

ರಸೋ‘ಹಮ್ ಅಪ್ಸು ಕೌಂತೇಯ,
ಪ್ರಭಾಸ್ಮಿ ಶಾಶಿ-ಶೂರ್ಯಯೋಃ
ಪ್ರಣವಃ ಸರ್ವ ವೇದೇಷು
ಶಬ್ಧಃ ಖೇ ಪೌರುಷಂ ನೃಸು
(ಭ.ಗೀ 7.8)

ಜಯತೀರ್ಥ: ಓ ಕುಂತಿಯ ಮಗನಾದ ಅರ್ಜುನನೇ, ನಾನು ನೀರಿನ ರುಚಿ, ಸೂರ್ಯ ಮತ್ತು ಚಂದ್ರರ ಬೆಳಕು, ವೈದಿಕ ಮಂತ್ರಗಳಲ್ಲಿ ಓಂಕಾರ; ನಾನು ಆಕಾಶದಲ್ಲಿ ಶಬ್ದ, ಮತ್ತು ಮನುಷ್ಯನಲ್ಲಿ ಸಾಮರ್ಥ್ಯ.

ಪ್ರಭುಪಾದ: ಆದ್ದರಿಂದ, ಈ ರೀತಿಯಾಗಿ ಕೃಷ್ಣನನ್ನು ನೋಡಿ. ತೊಂದರೆ ಎಲ್ಲಿದೆ? ಈ ಪ್ರಶ್ನೆಯನ್ನು ಯಾರು ಕೇಳಿದರು? ಕೃಷ್ಣನನ್ನು ನೋಡಲು ಕಷ್ಟವಾದರೂ ಏನಿದೆ? ಏನಾದರೂ ತೊಂದರೆ ಇದೆಯೇ? ಕೃಷ್ಣನನ್ನು ನೋಡಿ. ಮನ್-ಮನಾ ಭವ ಮದ್-ಭಕ್ತೋ, 'ಯಾವಾಗಲೂ ನನ್ನ ಬಗ್ಗೆ ಧ್ಯಾನಿಸಿ', ಎಂದು ಕೃಷ್ಣನು ಹೇಳುತ್ತಾನೆ. ಆದ್ದರಿಂದ, ನೀವು ನೀರು ಕುಡಿದ ತಕ್ಷಣ, ತಕ್ಷಣ ರುಚಿ ನೋಡಿ ಮತ್ತು 'ಆಹ್, ಇಲ್ಲಿ ಕೃಷ್ಣನಿದ್ದಾನೆ; ಮನ್-ಮನಾ ಭವ ಮದ್-ಭಕ್ತೋ. ತೊಂದರೆ ಏನಿದೆ? ಯಾವುದೇ ತೊಂದರೆ ಇಲ್ಲ. ಎಲ್ಲವೂ ಲಭ್ಯವಿದೆ. ತೊಂದರೆ ಏನು?

ಅಭಿನಂದ: ಕೃಷ್ಣನೇ ಭಗವಂತ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕೆ?

ಪ್ರಭುಪಾದ: ಅವನ ಬಗ್ಗೆ ನಿನ್ನ ಅಭಿಪ್ರಾಯವೇನು? (ಎಲ್ಲರೂ ನಗುತ್ತಾರೆ). (ಬಂಗಾಳಿ) ಒಬ್ಬನು ಸಂಪೂರ್ಣ ರಾಮಾಯಣವನ್ನು ಓದಿದ, ಮತ್ತು ಓದಿದ ನಂತರ, ಅವನು ಕೇಳಿದನಂತೆ: 'ಸೀತಾ-ದೇವಿ, ಅವಳು ಯಾರ ತಂದೆ? (ನಗುತ್ತಾ) ಸೀತಾದೇವಿ ಯಾರ ತಂದೆ? (ಜೋರಾಗಿ ನಗುತ್ತಾ). ನಿನ್ನ ಪ್ರಶ್ನೆ ಹಾಗಿದೆ. (ಹೆಚ್ಚು ನಗುತ್ತಾ).

ಅಭಿನಂದ: ಶ್ರೀಲ ಪ್ರಭುಪಾದರೇ, ಕಳೆದ ಬಾರಿ ಮಾಯಾಪುರದಲ್ಲಿ ಕೃಷ್ಣನೇ ಭಗವಂತ ಎಂಬುದನ್ನು ನಾವು ಮರೆಯಬಾರದು ಎಂದು ನೀವು ಹೇಳಿದ್ದೀರಿ. ನೀವು ಅದನ್ನು ಅನೇಕ ಬಾರಿ ಹೇಳಿದ್ದೀರಿ.

ಪ್ರಭುಪಾದ: ಹೌದು, ನೀನೇಕೆ ಮರೆಯುತ್ತಿರುವೆ? (ಭಕ್ತರು ನಗುತ್ತಿದ್ದಾರೆ). ಏನಿದು?

ಭಕ್ತ: ಒಬ್ಬ ಭಕ್ತನು ಭಕ್ತಿ ಸೇವೆಯ ಮಾರ್ಗದಿಂದ ಅದಃಪತನಗೊಂಡರೆ…

ಜಯಂತಕೃತನಿಗೆ ಚರಣಂಬೂಜ: ನೀನು ಈ ಎಲ್ಲ ವಿಷಯಗಳನ್ನು ಭಾಷಾಂತರಿಸಬೇಕು.

ಭಕ್ತ: ಭಾಗವತದಲ್ಲಿ ವರ್ಣಿಸಲಾದ ನರಕಗಳಿಗೆ ಭಕ್ತನು ಎಂದಾದರೂ ಸೇರುತ್ತಾನಯೇ?

ಪ್ರಭುಪಾದ: ಭಕ್ತನು ಎಂದಿಗೂ ಅದಃಪತನಗೊಳ್ಳುವುದಿಲ್ಲ. (ಹೆಚ್ಚು ನಗು)

ಭಕ್ತರು: ಜಯ! ಜಯ ಶ್ರೀಲ ಪ್ರಭುಪಾದ! (ಜೋರಾಗಿ ಹರ್ಷೋದ್ಗಾರ!) (ಅಂತ್ಯ)