KN/Prabhupada 0215 - ನೀವು ಪುಸ್ತಕಗಳನ್ನು ಓದಬೇಕು. ಆಗ ನಿಮಗೆ ಅರ್ಥವಾಗುತ್ತದೆ.



Interview with Newsweek -- July 14, 1976, New York

ಸಂದರ್ಶಕಿ: ನಿಮ್ಮ ಬಾಲ್ಯದ ಬಗ್ಗೆ ಸ್ವಲ್ಪ ಹೇಳಬಲ್ಲಿರಾ? ನಿಮ್ಮ ಚಟುವಟಿಕೆಗಳೇನು…

ಪ್ರಭುಪಾದ: ನಾನು ನಿಮಗೆ ಏಕೆ ಹೇಳಬೇಕು?

ಸಂದರ್ಶಕಿ: ಕ್ಷಮಿಸಿ?

ಪ್ರಭುಪಾದ: ನಾನು ನಿಮಗೆ ಏಕೆ ಹೇಳಬೇಕು?

ಸಂದರ್ಶಕಿ: ನೀವು ಬಯಸಿದರೆ.

ಪ್ರಭುಪಾದ: ನಾನು ಏಕೆ ಬಯಸಬೇಕು?

ಸಂದರ್ಶಕಿ: ವರದಿಗಾರರು ಈ ಪ್ರಶ್ನೆಗಳನ್ನು ಕೇಳಬೇಕು. ಇಲ್ಲದಿದ್ದರೆ, ನನ್ನ ಕೆಲಸವು ನಡೆಯುವುದಿಲ್ಲ.

ಹರಿ-ಶೌರಿ: ನೀವು ಇದಕ್ಕೆ ಸಂಬಂಧಿಸಿದ ಏನನ್ನಾದರೂ ಕೇಳುತ್ತೀರಿ ಎಂದು ಪ್ರಭುಪಾದರು ಆಶಿಸುತ್ತಿದ್ದಾರೆ...

ರಾಮೇಶ್ವರ: ಜನರು ನಿಮ್ಮ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದಾರೆ, ಶ್ರೀಲ ಪ್ರಭುಪಾದ. ಮತ್ತು ಅವರು ನಿಮ್ಮಲ್ಲಿ ಆಸಕ್ತಿ ಹೊಂದಿದ್ದರೆ, ಅವರು ಸ್ವಯಂಪ್ರೇರಿತರಾಗಿ ನಿಮ್ಮ ಪುಸ್ತಕಗಳಲ್ಲಿಯೂ ಆಸಕ್ತಿ ತೋರುತ್ತಾರೆ. ನಾವು ಮಾರಾಟ ಮಾಡುತ್ತಿರುವ ಈ ಎಲ್ಲಾ ಪುಸ್ತಕಗಳ ಲೇಖಕನ ಬಗ್ಗೆ ತಿಳಿದುಕೊಳ್ಳಲು ಅವರು ತುಂಬಾ ಉತ್ಸುಕರಾಗಿದ್ದಾರೆ.

ಪ್ರಭುಪಾದ: ಆದರೆ ಈ ಪುಸ್ತಕಗಳು, ಪುಸ್ತಕಗಳು... ನಾವು ಪುಸ್ತಕಗಳ ಬಗ್ಗೆ ಮಾತನಾಡೋಣ. ಅದು ಲೇಖಕರು ಹಿಂದೆ ಏನು ಮಾಡುತ್ತಿದ್ದರು ಎಂಬುದರ ಮೇಲೆ ಅವಲಂಬಿತವಾಗಿದೆಯೇ?

ಸಂದರ್ಶಕಿ: ನನಗೆ ತಿಳಿದ ಮಟ್ಟಿಗೆ ನೀವು ಅನೇಕ ಪುಸ್ತಕಗಳ ಅನುವಾದಕರು.

ಪ್ರಭುಪಾದ: ಹೌದು. ಆ ಅನುವಾದ, ಪುಸ್ತಕ, ನಾನು ಹೇಗೆ ಅನುವಾದಿಸಿದೆ ಎಂಬುದರ ಬಗ್ಗೆ ಮಾತನಾಡುತ್ತದೆ.

ಸಂದರ್ಶಕಿ: ಉಮ್ ಹ್ಮ್. ನಾನು ಯೋಚಿಸುತ್ತಿದ್ದೆ…

ಪ್ರಭುಪಾದ: ನೀವು ಪುಸ್ತಕಗಳನ್ನು ಓದಿರಿ. ಆಗ ನೀವು ಅರ್ಥಮಾಡಿಕೊಳ್ಳುವಿರಿ. ನನ್ನನ್ನು ಕೇಳುವ ಬದಲು, ನೀವು ಪುಸ್ತಕಗಳನ್ನು ಓದುವುದು ಉತ್ತಮ. ಅದೇ ನಿಜವಾದ ತಿಳುವಳಿಕೆ.

ಸಂದರ್ಶಕಿ: ಅವರು ವೈಯಕ್ತಿಕವಾಗಿ ಹೇಗೆ ಆಸಕ್ತರಾದರು ಅಥವಾ ತಮ್ಮನ್ನು ತೊಡಗಿಸಿಕೊಂಡರು, ಮತ್ತು ಅವರ ಪ್ರಜ್ಞೆಗೆ ಅವರ ಮಾರ್ಗ ಯಾವುದು ಎಂದು ನಾನು ಯೋಚಿಸುತ್ತಿದ್ದೆ.

ರಾಮೇಶ್ವರ: ಸರಿ. ಅವರು ನಿಮ್ಮ ಗುರು ಮಹಾರಾಜರೊಂದಿಗಿನ ನಿಮ್ಮ ಸಂಬಂಧದ ಬಗ್ಗೆ, ಕೃಷ್ಣ ಪ್ರಜ್ಞೆ ಆಂದೋಲನವನ್ನು ಪ್ರಾರಂಭಿಸಲು ಮತ್ತು ಹಲವು ಪುಸ್ತಕಗಳನ್ನು ಬರೆಯಲು ನೀವು ಹೇಗೆ ಪ್ರೇರಿತರಾದಿರಿ ಎಂದು ಕೇಳುತ್ತಿದ್ದಾರೆ.

ಪ್ರಭುಪಾದ: ಇವುಗಳಿಗೆ ನೀನು ಉತ್ತರಿಸು. ಇವು ಸಾರ್ವಜನಿಕರಿಗೆ ಬಹಳ ಮುಖ್ಯವಾದ ವಿಷಯಗಳಲ್ಲ.

ರಾಮೇಶ್ವರ: ಚಳುವಳಿಯ ಮೂಲ ವ್ಯಕ್ತಿಯ ಬಗ್ಗೆ ಸಾರ್ವಜನಿಕರು ಯಾವಾಗಲೂ ತಿಳಿದುಕೊಳ್ಳಲು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ.

ಅತಿಥಿ: ಹೌದು, ಇದು ಸಹಾಯ ಮಾಡುತ್ತದೆ. ಜನರು ಆಸಕ್ತರಾಗಿದ್ದಾರೆ. ಜನರು ನಿಮ್ಮಂತಹ ವ್ಯಕ್ತಿಯ ಅಭಿವೃದ್ಧಿಯಲ್ಲಿ ಆಸಕ್ತರು, ಏಕೆಂದರೆ ಅವರು ಅದರೊಂದಿಗೆ ತಮನ್ನು ಹೊಂದಿಸಿಕೊಳ್ಳುತ್ತಾರೆ. ಮತ್ತು ಆ ರೀತಿಯಲ್ಲಿ ಅವರು ನಿಮ್ಮ ಲೇಖನಗಳನ್ನು ಓದಲು ನಿರ್ಧರಿಸುತ್ತಾರೆ.

ಪ್ರಭುಪಾದ: ಮೊದಲನೆಯದಾಗಿ, ನೀವು ನಮ್ಮ ಪುಸ್ತಕದಲ್ಲಿ ಆಸಕ್ತಿ ಹೊಂದಿದ್ದರೆ, ನೀವು ನಮ್ಮ ಪುಸ್ತಕಗಳನ್ನು ಓದಿರಿ. ನಿಮಗೆ ಅರ್ಥವಾಗುತ್ತದೆ.

ಸಂದರ್ಶಕಿ: ನಿಮ್ಮನ್ನು ಅರ್ಥಮಾಡಿಕೊಳ್ಳುವುದೆ?

ಪ್ರಭುಪಾದ: ಹೌದು.

ಸಂದರ್ಶಕಿ: ನೀವು ಹೇಳುತ್ತಿರುವುದು ಆ ಅರ್ಥದಲ್ಲಿಯೇ?

ಪ್ರಭುಪಾದ: ಹೌದು.

ಸಂದರ್ಶಕಿ: ಅವರು ಹೇಳುತ್ತಿರುವುದು ಆ ಅರ್ಥದಲ್ಲಿಯೇ?

ಪ್ರಭುಪಾದ: ಒಬ್ಬ ಮನುಷ್ಯ ಮಾತನಾಡುವಾಗ ಅವನ ಬಗ್ಗೆ ತಿಳಿಯುತ್ತದೆ. ಅವನು ಮಾತನಾಡುವಾಗ. ತಾವಕ್ ಚ ಶೋಭತೇ ಮೂರ್ಖೋ ಯಾವತ್ ಕಿಂಚಿನ್ ನ ಭಾಷತೇ: "ಒಬ್ಬ ಮೂರ್ಖ ಮಾತನಾಡದವರೆಗೆ ಸುಂದರವಾಗಿರುತ್ತಾನೆ." ಅವನು ಮಾತನಾಡುವಾಗ ಅವನು ಏನೆಂದು ನೀವು ಅರ್ಥಮಾಡಿಕೊಳ್ಳಬಹುದು. ಆದ್ದರಿಂದ, ನನ್ನ ಮಾತು ಪುಸ್ತಕಗಳಲ್ಲಿದೆ. ನೀವು ಬುದ್ಧಿವಂತರಾಗಿದ್ದರೆ ಅರ್ಥಮಾಡಿಕೊಳ್ಳಬಹುದು. ನೀವು ಕೇಳಬೇಕಾಗಿಲ್ಲ. ಮಾತನಾಡುವುದು... ನ್ಯಾಯಾಲಯದಲ್ಲಿ ಒಬ್ಬ ದೊಡ್ಡ ವಕೀಲ ಮಾತನಾಡುವಾಗ ಅವನ ಬಗ್ಗೆ ತಿಳಿದಿಯುತ್ತದೆ. ಇಲ್ಲದಿದ್ದರೆ, ಎಲ್ಲರೂ ಒಳ್ಳೆಯ ವಕೀಲರೇ. ಆದರೆ ಅವರು ನ್ಯಾಯಾಲಯದಲ್ಲಿ ಮಾತನಾಡಿದಾಗ ಅವರು ಒಳ್ಳೆಯ ವಕೀಲರೋ ಅಲ್ಲವೋ ಎಂಬುದು ತಿಳಿಯುತ್ತದೆ. ಆದ್ದರಿಂದ ನೀವು ಆಲಿಸಬೇಕು. ನೀವು ಓದಬೇಕು. ಆಗ ನಿಮಗೆ ಅರ್ಥವಾಗುತ್ತದೆ. ನಿಜವಾದ ತಿಳುವಳಿಕೆ ಅಲ್ಲಿದೆ.