KN/Prabhupada 0219 - ನಾವು ಯಜಮಾನನಾಗುವ ಈ ಅಸಂಬದ್ಧ ಕಲ್ಪನೆಯನ್ನು ತ್ಯಜಿಸಬೇಕು



Lecture on SB 7.9.24 -- Mayapur, March 2, 1976

ನಿಮ್ಮ ದೇಶದಲ್ಲಿ ಶೇ. 80 ರಿಂದ 90 ರಷ್ಟು ಜನರು ಮಲೇರಿಯಾ ಮತ್ತು ಸಿಫಿಲಿಸ್‌ನಿಂದ ಬಳಲುತ್ತಿದ್ದಾರೆ. ವ್ಯತ್ಯಾಸವೇನು? ಒಬ್ಬ ವೈದ್ಯನಾಗಿ, 'ಈ ರೋಗ ಆ ರೋಗಕ್ಕಿಂತ ಉತ್ತಮ', ಎಂದು ನೀವೇಕೆ ವಿಶೇಷಿಸು ಬೇಕು? ರೋಗವು ರೋಗವೇ." ಅದೇ ಸತ್ಯ. "ನಾವು ಮಲೇರಿಯಾದಿಂದ ಬಳಲುತ್ತಿದ್ದೇವೆ. ಸಿಫಿಲಿಸ್‌ನಿಂದ ಬಳಲುವುದಕ್ಕಿಂತ ಇದು ಉತ್ತಮ", ಎಂದು ಹೇಳುತ್ತೀರಿ, ಇಲ್ಲ. ರೋಗವು ರೋಗವೇ. ಅದೇ ರೀತಿ, ಬ್ರಹ್ಮನಾಗಲಿ ಅಥವಾ ಇರುವೆಯಾಗಲಿ, ರೋಗವು ಒಂದೇ — “ಯಜಮಾನನಾಗುವುದು ಹೇಗೆ”. ಇದೇ ರೋಗ. ಆದ್ದರಿಂದ, ಈ ರೋಗವನ್ನು ಗುಣಪಡಿಸಲು ಕೃಷ್ಣನು ಸ್ಪಷ್ಟವಾಗಿ ಹೇಳಲು ಬರುತ್ತಾನೆ, "ದುಷ್ಟ, ನೀನು ಯಜಮಾನನಲ್ಲ; ನೀನು ಸೇವಕ. ನನಗೆ ಶರಣಾಗು." ಇದು ರೋಗದ ಪರಿಹಾರ. "ಇನ್ನಿಲ್ಲ. ಆರ ನಾರೇ ಬಪ (?), ಯಜಮಾನನಾಗಲು ಪ್ರಯತ್ನಿಸುವುದಿಲ್ಲ", ಎಂದು ಒಬ್ಬರು ಒಪ್ಪಿದರೆ ಅದೇ ರೋಗ ಪರಿಹಾರ.

ಆದ್ದರಿಂದ, ಚೈತನ್ಯ ಮಹಾಪ್ರಭು ಹೇಳಿದರು… ಪ್ರಹ್ಲಾದ ಮಹಾರಾಜ ಹೇಳಿದಂತೆ, ನಿಜ ಭೃತ್ಯ-ಪಾರ್ಶ್ವಂ (SB 7.9.24), "ನಿಮ್ಮ ಸೇವಕನ ಸೇವಕನಾಗಿ ನನ್ನನ್ನು ತೊಡಗಿಸಿಕೊಳ್ಳಿ." ಚೈತನ್ಯ ಮಹಾಪ್ರಭು ಅದೇ ಮಾತನ್ನು ಹೇಳಿದರು: ಗೋಪಿ-ಭರ್ತುರ್ ಪದ-ಕಮಲಯೋರ್ ದಾಸ-ದಾಸ-ಅನುದಾಸಃ (ಚೈ.ಚ ಮಧ್ಯ 13.80). ಆದ್ದರಿಂದ, ಈ ಕೃಷ್ಣ ಪ್ರಜ್ಞೆ ಚಳುವಳಿ ಎಂದರೆ ನಾವು ಯಜಮಾನನಾಗುವ ಈ ಅಸಂಬದ್ಧ ಕಲ್ಪನೆಯನ್ನು ತ್ಯಜಿಸಬೇಕು. ಇದೇ ಕೃಷ್ಣ ಪ್ರಜ್ಞೆ. ನಾವು ಸೇವಕನಾಗುವುದು ಹೇಗೆ ಎಂದು ಕಲಿಯಬೇಕು. ಸೇವಕ ಮಾತ್ರವಲ್ಲ, ಸೇವಕನ ಸೇವಕ... ಅದೇ ಚಿಕಿತ್ಸೆ. ಆದ್ದರಿಂದ, ಪ್ರಹ್ಲಾದ ಮಹಾರಾಜ ಹೇಳಿದರು, "ನಾನು ಯಜಮಾನನಾಗುವು ಈ ಎಲ್ಲಾ ಅಸಂಬದ್ಧತೆಯನ್ನು ಅರ್ಥಮಾಡಿಕೊಂಡಿದ್ದೇನೆ. ನನ್ನ ತಂದೆಯೂ ಯಜಮಾನನಾಗಲು ಪ್ರಯತ್ನಿಸಿದರು. ಆದ್ದರಿಂದ, ಈ ಜ್ಞಾನದಿಂದ ಈಗ ನಾನು ಪರಿಪೂರ್ಣನಾಗಿದ್ದೇನೆ. ಯಜಮಾನನಾಗುವುದರಿಂದ ಯಾವುದೇ ಪ್ರಯೋಜನವಿಲ್ಲ. ನೀವು ಅನುಗ್ರಹಿಸಿ ನನಗೊಂದು ವರ ನೀಡಲು ಬಯಸಿದರೆ, ದಯವಿಟ್ಟು ನನ್ನನ್ನು ನಿಮ್ಮ ಸೇವಕನ ಸೇವಕನನ್ನಾಗಿ ಮಾಡಿ." ಇದು ವರ. ಕೃಷ್ಣನ ಸೇವಕನಾಗಲು ಕಲಿತವನು ಪರಿಪೂರ್ಣ. ಆದ್ದರಿಂದ, ಚೈತನ್ಯ ಮಹಾಪ್ರಭು ಹೇಳುತ್ತಾರೆ: ತೃಣಾದ್ ಅಪಿ ಸುನಿಚೇನ ತರೋರ್ ಅಪಿ ಸಹಿಷ್ಣುನಾ. ಒಬ್ಬ ಸೇವಕನು ಸಹಿಸಿಕೊಳ್ಳಬೇಕು. ಸಹಿಸಿಕೊಳ್ಳಿ. ಕೆಲವೊಮ್ಮೆ ಯಜಮಾನನು ಅನೇಕ ವಿಷಯಗಳನ್ನು ಆದೇಶಿಸಿದರೆ ಸೇವಕನು ವ್ಯಾಕುಲನಾಗುತ್ತಾನೆ. ಆದರೂ ಸಹ ಅವನು ಕಾರ್ಯನಿರ್ವಹಿಸಬೇಕು ಮತ್ತು ಸಹಿಸಿಕೊಳ್ಳಬೇಕು. ಅದು ಪರಿಪೂರ್ಣತೆ. ಇಲ್ಲಿ ಭಾರತದಲ್ಲಿ, ಈಗಲು ಸಹ ಒಬ್ಬ ವ್ಯಕ್ತಿಯು ಮದುವೆಯಾಗುವಾಗ ಒಂದು ಪದ್ಧತಿ ಇದೆ. ವರನ ತಾಯಿ ಅವನನ್ನು ಕೇಳುತ್ತಾರೆ, "ನನ್ನ ಪ್ರೀತಿಯ ಮಗನೇ, ನೀನು ಎಲ್ಲಿಗೆ ಹೊರಟಿರುವೆ?" ಅವನು ಉತ್ತರಿಸುತ್ತಾನೆ, "ಅಮ್ಮಾ, ನಾನು ನಿನಗಾಗಿ ಒಬ್ಬ ಸೇವಕಿಯನ್ನು ಕರೆತರುತ್ತೇನೆ." ಇದು ವ್ಯವಸ್ಥೆ. "ಅಮ್ಮಾ, ನಾನು ನಿನಗಾಗಿ ಒಬ್ಬ ಸೇವಕಿಯನ್ನು ಕರೆತರುತ್ತೇನೆ." ಅಂದರೆ, "ನನ್ನ ಹೆಂಡತಿ, ನಿನ್ನ ಸೊಸೆ, ನಿನ್ನ ಸೇವಕಿಯಾಗಿ ಸೇವೆ ಮಾಡುತ್ತಾಳೆ." ಇದು ವೈದಿಕ ನಾಗರಿಕತೆ.

ಕೃಷ್ಣನು ತನ್ನ ಹದಿನಾರು ಸಾವಿರ ಪತ್ನಿಯರೊಂದಿಗೆ ಹಸ್ತಿನಾಪುರಕ್ಕೆ ಹೋದಾಗ ದ್ರೌಪದಿಯು... ಸ್ತ್ರೀಯರ ನಡುವೆ ತಮ್ಮ ಗಂಡಂದಿರ ಬಗ್ಗೆ ಮಾತನಾಡುವುದು ಸಹಜ. ಅದು ಸಹಜ. ಆದ್ದರಿಂದ, ದ್ರೌಪದಿ ಕೃಷ್ಣನ ಪ್ರತಿಯೊಬ್ಬ ಹೆಂಡತಿಯರನ್ನೂ ವಿಚಾರಿಸುತ್ತಿದ್ದಳು. ಅವರೆಲ್ಲರೂ ಅಲ್ಲ. ಅದು ಅಸಾಧ್ಯ, ಹದಿನಾರು ಸಾವಿರ. ಪ್ರಧಾನ ರಾಣಿಯರನ್ನು, ಮೊದಲಿಗೆ… ಅವಳ ಹೇಸರೇನು? ರುಕ್ಮಿಣಿ, ಹೌದು. ಅವರಲ್ಲಿ ಪ್ರತಿಯೊಬ್ಬರೂ ತಮ್ಮ ವಿವಾಹ ಸಮಾರಂಭವನ್ನು ವಿವರಿಸುತ್ತಿದ್ದರು. ರುಕ್ಮಿಣಿ ವಿವರಿಸಿದರು, "ನನ್ನ ತಂದೆ ನನ್ನನ್ನು ಕೃಷ್ಣನಿಗೆ ಒಪ್ಪಿಸಲು ಬಯಸಿದರೂ ಕೂಡ ನನ್ನ ಅಣ್ಣ ಒಪ್ಪಲಿಲ್ಲ. ಅವನು ನನ್ನನ್ನು ಶಿಶುಪಾಲನೊಂದಿಗೆ ಮದುವೆ ಮಾಡಲು ಬಯಸಿದನು. ನನಗೆ ಈ ವಿಷಯ ಇಷ್ಟವಾಗಲಿಲ್ಲ. ನಾನು ಕೃಷ್ಣನಿಗೆ ಒಂದು ಗೋಪ್ಯವಾದ ಪತ್ರವನ್ನು ಬರೆದೆ, ‘ನಾನು ನನ್ನ ಜೀವನವನ್ನು ನಿನಗೆ ಅರ್ಪಿಸಿದ್ದೇನೆ, ಆದರೆ ನನ್ನ ಪರಿಸ್ಥಿತಿ ಹೀಗಿದೆ. ದಯವಿಟ್ಟು ಬಂದು ನನ್ನನ್ನು ಅಪಹರಿಸಿ.’ ಹೀಗೆ ಕೃಷ್ಣನು ನನ್ನನ್ನು ಅಪಹರಿಸಿ ತನ್ನ ಸೇವಕಿಯಾಗಿ ಮಾಡಿಕೊಂಡನು." ರಾಣಿಯ ಮಗಳು, ರಾಜನ ಮಗಳು... ಅವರೆಲ್ಲರೂ ರಾಜಕುಮಾರಿಯರು. ಅವರು ಸಾಮಾನ್ಯ ವ್ಯಕ್ತಿಯ ಮಕ್ಕಳಲ್ಲ. ಆದರೆ ಅವರು ಕೃಷ್ಣನ ಸೇವಕಿಯಾಗಲು ಬಯಸಿದ್ದರು. ಸೇವಕನಾಗುವುದು ಮತ್ತು ಸೇವಕಿಯಾಗುವುದೆ ಉತ್ತಮ ಉದ್ದೇಶ. ಇದು ಮಾನವ ನಾಗರಿಕತೆಯ ಆದರ್ಶ. ಪ್ರತಿಯೊಬ್ಬ ಮಹಿಳೆಯೂ ತನ್ನ ಗಂಡನ ಸೇವಕಿಯಾಗಲು ಪ್ರಯತ್ನಿಸಬೇಕು ಮತ್ತು ಪ್ರತಿಯೊಬ್ಬ ಪುರುಷನೂ ಕೃಷ್ಣನ ನೂರು ಪಟ್ಟು ಸೇವಕನಾಗಲು ಪ್ರಯತ್ನಿಸಬೇಕು. ಇದು ಭಾರತೀಯ ನಾಗರಿಕತೆಯೆ ಹೊರತು, "ಗಂಡ ಮತ್ತು ಹೆಂಡತಿ, ನಮಗೆ ಸಮಾನ ಹಕ್ಕುಗಳಿವೆ", ಎಂಬುದಲ್ಲ. ಯುರೋಪ್ ಮತ್ತು ಅಮೆರಿಕದಲ್ಲಿ ಸಮಾನ ಹಕ್ಕುಗಳ ಚಳುವಳಿ ನಡೆಯುತ್ತಿದೆ. ಅದು ವೈದಿಕ ನಾಗರಿಕತೆಯಲ್ಲ. ವೈದಿಕ ನಾಗರಿಕತೆಯೆಂದರೆ ಗಂಡನು ಕೃಷ್ಣನ ಪ್ರಾಮಾಣಿಕ ಸೇವಕನಾಗಿರಬೇಕು, ಮತ್ತು ಹೆಂಡತಿ ಗಂಡನ ಪ್ರಾಮಾಣಿಕ ಸೇವಕಿಯಾಗಿರಬೇಕು.