KN/Prabhupada 1061 - ಭಗವದ್ಗೀತೆಯ ವಸ್ತು 5 ಮೂಲ ಸತ್ಯಗಳು



660219-20 - Lecture BG Introduction - New York

ಯದಾ ಯದಾ ಹಿ ಧರ್ಮಸ್ಯ ಗ್ಲಾನೀರ್ ಭವತಿ ಶ್ರೀ ಕೃಷ್ಣ ಜೀವನದ ನಿಜವಾದ ಉದ್ದೇಶವನ್ನು ಸ್ಥಾಪಿಸಲು ಬರುತ್ತಾನೆ. ಯಾವಾಗ ಮನುಷ್ಯನು ತನ್ನ ಮನುಷ್ಯ ಜೀವನದ ನಿಜವಾದ ಗುರಿಯನ್ನು ಮರೆಯುತ್ತಾನೋ ಆಗ ಅದು ಧರ್ಮಸ್ಯ ಗ್ಲಾನಿ (ಮಾನವ ವೃತ್ತಿಯ ಅಡಚಣೆ) ಎನಿಸುತ್ತದೆ, ಇಂತಹ ಪರಿಸ್ಥಿತಿಗಳಲ್ಲಿ, ಜಾಗೃತರಾಗುವ ಅಸಂಖ್ಯಾತ ಮನುಷ್ಯರಲ್ಲಿ ತನ್ನ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮನೋಧರ್ಮದವನು ಒಬ್ಬನಿರಬಹುದು. ಭಗವದ್ಗೀತೆ ಹೇಳಿರುವುದು ಅವನಿಗಾಗಿ. ನಮ್ಮನ್ನೆಲ್ಲಾ ಅಜ್ಞಾನದ ಸಿಂಹಿಣಿ ನುಂಗಿಹಾಕಿದ್ದಾಳೆ, ಭಗವಂತ ಜೀವಿಗಳಲ್ಲಿ ಅಪಾರ ಕರುಣೆ ತೋರಿ, ಮನುಷ್ಯರ ಮೇಲೆ ವಿಶೇಷ ಕರುಣೆ ತೋರಿ ಅವನ ಗೆಳೆಯ ಅರ್ಜುನನನ್ನು ವಿದ್ಯಾರ್ಥಿಯನ್ನಾಗಿ ಮಾಡಿಕೊಂಡು ಭಗವದ್ಗೀತೆಯನ್ನು ಭೋದಿಸಿದನು. ಶ್ರೀ ಕೃಷ್ಣನ ಸಂಗಾತಿಯಾಗಿ ಅರ್ಜುನನು ಎಲ್ಲಾ ಅಜ್ಞಾನವನ್ನು ಮೀರಿದ್ದನು. ಆದರೂ ಕುರಕುಕ್ಷೇತ್ರ ರಣಭೂಮಿಯಲಿ ಅರ್ಜುನನನ್ನು ಅಜ್ಞಾನದಲ್ಲಿ ಇರಿಸಲಾಯಿತು. ಏಕೆಂದರೆ ಮುಂದಿನ ಪೀಳಿಗೆಗಳ ಮನುಷ್ಯರ ಒಳಿತಿಗಾಗಿ ಮತ್ತು ಅವರ ಬದುಕಿನ ಯೋಜನೆಯನ್ನು ರೂಪಿಸಿಕೊಳ್ಳಲಿಕ್ಕಾಗಿ ಶ್ರೀ ಕೃಷ್ಣನು ಬದುಕಿನ ಸಮಸ್ಯೆಗಳನ್ನು ಕುರಿತು ವಿವರಿಸಲೆಂದು ಅರ್ಜುನನು ಅವನನ್ನು ಪ್ರಶ್ನಿಸುವುದೇ ಇದರ ಉದ್ದೇಶವಾಗಿತ್ತು. ಆದ್ದರಿಂದ ಭಗವದ್ಗೀತೆಯ ವಸ್ತು 5 ಮೂಲ ಸತ್ಯಗಳು. ಮೊದಲನೆಯದಾಗಿ ದೇವರು ಎಂದರೇನು? ಇದು ಭಗವದ್ ವಿಜ್ಞಾನದ ಪ್ರಾಥಮಿಕ ಅಧ್ಯಯನ. ಭಗವದ್ ವಿಜ್ಞಾನವನ್ನು ಇಲ್ಲಿ ವಿವರಿಸಿದ್ದಾರೆ. ನಂತರ ಜೀವಿಗಳ ಸಹಜ ಸ್ವರೂಪ. ಈಶ್ವರ ಮತ್ತು ಜೀವ. ಪರಮ ಪುರುಷನನ್ನು ಈಶ್ವರ ಎನ್ನುತ್ತಾರೆ. ಈಶ್ವರ ಎಂದರೆ ನಿಯಂತ್ರಕ. ಮತ್ತು ಜೀವಿಗಳು ನಿಯಂತ್ರಕರಲ್ಲ, ನಿಯಂತ್ರಿಸಲ್ಪಡುವವರು. ಕೃತಕವಾಗಿ ನಾನು ನಿಯಂತ್ರಿಸಲ್ಪಡುವುದಿಲ್ಲ, ನಾನು ಸ್ವತಂತ್ರ ಎನ್ನಬಹುದು, ಆದರೆ ಅದು ವಿವೇಕವಿರುವ ಮನುಷ್ಯನು ಹೇಳುವ ಮಾತಲ್ಲ. ಜೀವಿಯು ಪ್ರತಿ ವಿಷಯದಲ್ಲೂ ನಿಯಂತ್ರಿಸಲ್ಪಡುತ್ತಾನೆ. ಕನಿಷ್ಠವಾಗಿ, ಅವನ ಬದ್ಧ ಸ್ಥಿತಿಯಲ್ಲಿ ನಿಯಂತ್ರಿಸಲ್ಪಡುತ್ತಾನೆ. ಭಗವದ್ಗೀತೆಯಲ್ಲಿ ಪರಮ ನಿಯಂತ್ರಕ (ಈಶ್ವರ) ಹಾಗೂ ನಿಯಂತ್ರಿಸಲ್ಪಡುವ ಜೀವಿಗಳ ವಿಷಯವಿದೆ. ಮತ್ತು ಪ್ರಕೃತಿ, ಭೌತಿಕ ಪ್ರಕೃತಿ. ನಂತರ ಕಾಲ, ಇಡೀ ವಿಶ್ವದ ಅಸ್ತಿತ್ವದ ಅಥವಾ ಈ ಐಹಿಕ ನಿಸರ್ಗದ ಕಾಲಾವಧಿ. ಮತ್ತು ಶಾಶ್ವತದ ಕಾಲ. ಕೊನೆಯದಾಗಿ ಕರ್ಮ, ಕರ್ಮ ಎಂದರೆ ಚಟುವಟಿಕೆ. ಇಡೀ ವಿಶ್ವವು ಬೇರೆ ಬೇರೆ ಚಟುವಟಿಕೆಗಳಿಂದ ತುಂಬಿ ಹೋಗಿದೆ. ಜೀವಿಗಳೆಲ್ಲ ಚಟುವಟಿಕೆ (ಕರ್ಮ ಅಥವಾ ಕಾರ್ಯ) ಗಳಲ್ಲಿ ಮಗ್ನರಾಗಿದ್ದಾರೆ. ನಾವು ಭಗವದ್ಗೀತೆಯಿಂದ ಈಶ್ವರ (ದೇವರು) ಎಂದರೇನು, ಜೀವಿಗಳು ಎಂದರೇನು? ವಿಶ್ವ ಸೃಷ್ಟಿ ಎಂದರೇನು? ಹೇಗೆ ಕಾಲದಿಂದ ಎಲ್ಲಾ ನಿಯಂತೃತವಾಗುತ್ತಿದೆ ಹಾಗೂ ಕರ್ಮಗಳೆಂದರೇನು ಎಂದು ಅಧ್ಯಯಿಸುತ್ತೇವೆ. ಈಗ ಈ 5 ವಿಷಯ ವಸ್ತುಗಳಲ್ಲಿ, ಪರಮ ಪುರುಷ, ಈಶ್ವರ, ಕೃಷ್ಣ, ಬ್ರಹ್ಮ, ಪರಮಾತ್ಮ, ನಾವು ಹೇಗಾದರೂ ಕರೆಯಬಹುದು, ಆದರೆ ಪರಮ ನಿಯಂತ್ರಕನಿದ್ದಾನೆ. ಈ ಪರಮ ನಿಯಂತ್ರಕನು ಎಲ್ಲರಿಗಿಂತ ಸರ್ವೋತ್ತಮನು. ಜೀವಿಗಳು ಗುಣಾತ್ಮಕವಾಗಿ ಪರಮ ನಿಯಂತ್ರಕನಂತಿದ್ದಾರೆ. ಪರಮ ನಿಯಂತ್ರಕ, ಭಗವಂತನಿಗೆ ಐಹಿಕ ನಿಸರ್ಗದ ಎಲ್ಲಾ ಕ್ರಿಯೆಗಳ ಮೇಲೆ ನಿಯಂತ್ರಣವಿದೆ. ಪ್ರಕೃತಿಯು ಸ್ವತಂತ್ರವಲ್ಲ ಎಂಬುದನ್ನು ಭಗವದ್ಗೀತೆಯ ನಂತರ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಪ್ರಕೃತಿ ಭಗವಂತನ ನಿರ್ದೇಶನದ ಹಾಗೆ ನಡೆಯುತ್ತಾಳೆ. ಮಯಾಧ್ಯಕ್ಷೇಣ ಪ್ರಕೃತಿ ಸೂಯತೇ ಸ ಚರಾಚರಂ (ಭ ಗೀತೆ 9.10) ಈ ಐಹಿಕ ನಿಸರ್ಗವು (ಮಯಾಧ್ಯಕ್ಷೇಣ) ನನ್ನ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.