KN/710317 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಂಬೆ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಮೊದಲನೆಯದಾಗಿ, ನಾವು ಪ್ರತಿ ಹೆಜ್ಜೆಯಲ್ಲೂ ಬಳಲುತ್ತಿದ್ದೇವೆ ಎಂದು ನಮಗೆ ಅರಿವಿಲ್ಲ. ನೀವು ಈ ಫ್ಯಾನ್ ಅನ್ನು ಏಕೆ ಬಳಸುತ್ತಿದ್ದೀರಿ? ಏಕೆಂದರೆ ನೀವು ಬಳಲುತ್ತಿದ್ದೀರಿ. ಏಕೆಂದರೆ ನೀವು ಅತಿಯಾದ ಶಾಖವನ್ನು ಸಹಿಸಲಾಗದೆ ಬಳಲುತ್ತಿದ್ದೀರಿ. ಅದೇ ರೀತಿ, ಚಳಿಗಾಲದಲ್ಲಿ ಈ ಗಾಳಿಯು ಮತ್ತೊಂದು ರೀತಿಯ ಸಂಕಟ. ಆಗ ಗಾಳಿ ಬರದಂತೆ ಬಾಗಿಲುಗಳನ್ನು ಬಿಗಿಯಾಗಿ ಮುಚ್ಚುತ್ತೇವೆ. ಈಗ ಗಾಳಿಯು ನಮ್ಮ ಸಂಕಟವನ್ನು ಪರಿಹರಿಸುತ್ತಿದೆ ಆದರೆ ಇನ್ನೊಂದು ಋತುವಿನಲ್ಲಿ ಅದೇ ಗಾಳಿಯು ನಮಗೆ ಸಂಕಟವಾಗುತ್ತದೆ. ಆದ್ದರಿಂದ, ಗಾಳಿಯು ದುಃಖಕ್ಕೆ ಕಾರಣ ಆದರೆ ಅದುವೇ ಸುಖಃಕ್ಕೂ ಮೇಲ್ನೋಟಕ್ಕೆ ಕಾರಣವಾಗಿದೆ. ವಾಸ್ತವವಾಗಿ ನಾವು ಸುಮ್ಮನೆ ನರಳುತ್ತಿದ್ದೇವೆ. ಇದು ನಮಗೆ ಗೊತ್ತಿಲ್ಲ. ಆದರೆ ಈ ಸ್ಥಳವು 'ದುಃಖಾಲಯಮ್ ಆಶಾಶ್ವತಮ್' (ಭ.ಗೀ 8.15) ಎಂದು ಭಗವಾನ್ ಕೃಷ್ಣನಿಂದ ನಮಗೆ ಮಾಹಿತಿ ಸಿಗುತ್ತದೆ. ಇದು ದುಃಖಗಳ ತವರು. ಇಲ್ಲಿ ನೀವು ಯಾವುದೇ ಸಂತೋಷವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅದು ನಮ್ಮ ಮೂರ್ಖತನ."
710317 - ಉಪನ್ಯಾಸ TLC - ಬಾಂಬೆ