KN/Prabhupada 0147 - ಸಾಮಾನ್ಯ ಅನ್ನವು ಪರಮ ಅನ್ನವಲ್ಲ

Revision as of 08:10, 13 January 2022 by Vanibot (talk | contribs) (Vanibot #0005: NavigationArranger - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)


Lecture on BG 7.1 -- Hong Kong, January 25, 1975

ಭಕ್ತರಿಗೆ ದೇವರಿದ್ದಾನೆ ಮತ್ತು ಅವನು ಭಗವಾನ್ ಎಂದು ತಿಳಿದಿದೆ. ದೇವರನ್ನು ಭಗವಾನ್ ಎಂದು ಕರೆಯಲಾಗುತ್ತದೆ. ಆದ್ದರಿಂದ, ಇಲ್ಲಿ ಹೇಳಲಾಗಿದೆಯಾದರೂ... ಭಗವದ್ಗೀತೆಯು ಕೃಷ್ಣನಿಂದ ಹೇಳಲ್ಪಟ್ಟಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಭಗವದ್ಗೀತೆಯಲ್ಲಿ ಕೆಲವು ಸ್ಥಳಗಳಲ್ಲಿ 'ಭಗವಾನ್ ಉವಾಚ' ಎಂದು ವಿವರಿಸಲಾಗಿದೆ. ಭಗವಾನ್ ಮತ್ತು ಕೃಷ್ಣ - ಒಂದೇ ವ್ಯಕ್ತಿ. ಕೃಷ್ಣಸ್ ತು ಭಗವಾನ್ ಸ್ವಯಂ (ಶ್ರೀ.ಭಾ 1.3.28). ಭಗವಾನ್… ಭಗವಾನ್ ಪದಕ್ಕೆ ಒಂದು ವ್ಯಾಖ್ಯಾನವಿದೆ:

ಐಶ್ವರ್ಯಸ್ಯ ಸಮಗ್ರಸ್ಯ
ವೀರ್ಯಸ್ಯ ಯಶಸಃ ಶ್ರಿಯಃ
ಜ್ಞಾನ-ವೈರಾಗ್ಯಯೋಶ್ ಚೈವ
ಷಣ್ಣಾಂ ಭಗ ಇತಿಂಗನಾ
(ವಿಷ್ಣು ಪುರಾಣ 6.5.47)

ಭಗ, ನಮಗೆ ಭಾಗ್ಯವಾನ್, ಭಾಗ್ಯ ಎಂಬ ಪದದ ಅರ್ಥ ತಿಳಿದಿದೆ. ಭಾಗ್ಯ, ಭಾಗ್ಯವಾನ್, ಈ ಪದವು ʼಭಗʼದಿಂದ ಬಂದಿದೆ. ಭಗ ಎಂದರೆ ಐಶ್ವರ್ಯ. ಐಶ್ವರ್ಯ ಎಂದರೆ ಸಂಪತ್ತು. ಒಬ್ಬ ಮನುಷ್ಯ ಹೇಗೆ ಐಶ್ವರ್ಯವಂತನಾಗಬಹುದು? ಧನವಿದ್ದರೆ, ಬುದ್ಧಿಯಿದ್ದರೆ, ಸೌಂದರ್ಯವಿದ್ದರೆ, ಕೀರ್ತಿವಂತನಾಗಿದ್ದರೆ, ಜ್ಞಾನವಂತನಾಗಿದ್ದರೆ, ವೈರಾಗ್ಯವಂತನಾಗಿದ್ದರೆ - ಇದು ಭಗವಂತನ ಅರ್ಥ.

ಆದ್ದರಿಂದ, ನಾವು "ಭಗವಾನ್" ಎಂದಾಗ, ಈ ಭಗವಾನ್, ಪರಮೇಶ್ವರ... ಈಶ್ವರ-ಪರಮೇಶ್ವರ; ಆತ್ಮ-ಪರಮಾತ್ಮ; ಬ್ರಹ್ಮ-ಪರಬ್ರಹ್ಮ, ಎರಡು ಪದಗಳಿವೆ. ಒಂದು ಸಾಮಾನ್ಯ, ಮತ್ತು ಇನ್ನೊಂದು ಪರಮ, ಸರ್ವೋಚ್ಛ. ನಮ್ಮ ಅಡುಗೆ ಪ್ರಕ್ರಿಯೆಯಂತೆಯೇ. ನಾವು ವಿಧವಿಧವಾದ ಅಕ್ಕಿಯನ್ನು ಬಳಸಬಹುದು. ಅಕ್ಕಿಗೆ ವಿಧವಿಧವಾದ ಹೆಸರುಗಳಿವೆ: ಅನ್ನ, ಪರಮಾನ್ನ, ಪುಷ್ಪಾನ್ನ, ಕಿಚೋರನ್ನ, ಇತ್ಯಾದಿ. ಆದ್ದರಿಂದ, ಪರಮ ಅನ್ನವನ್ನು ಪರಮಾನ್ನ ಎಂದು ಕರೆಯುತ್ತಾರೆ. ಪರಮ ಎಂದರೆ ಸರ್ವಶ್ರೇಷ್ಠ. ಅನ್ನವಿದೆ, ಆದರೆ ಅದು ಪರಮೋಚ್ಚವಾಗಿದೆ. ಸಾಮಾನ್ಯ ಅನ್ನವನ್ನು ಪರಮಾನ್ನ ಎಂದು ಕರೆಯಲಾಗುವುದಿಲ್ಲ. ಇದು ಕೂಡ ಅಕ್ಕಿ. ಮತ್ತು ನೀವು ಕ್ಷೀರ, ಅಂದರೆ ಹಾಲು, ಮತ್ತು ಇತರ ಉತ್ತಮ ಪದಾರ್ಥಗಳೊಂದಿಗೆ ಅನ್ನವನ್ನು ತಯಾರಿಸಿದಾಗ ಅದನ್ನು ಪರಮಾನ್ನ ಎಂದು ಕರೆಯಲಾಗುತ್ತದೆ. ಅಂತೆಯೇ, ಜೀವಾತ್ಮಗಳ ಮತ್ತು ಭಗವಂತನ ಲಕ್ಷಣಗಳು ಕಾರ್ಯತಃ ಒಂದೇ ಆಗಿರುತ್ತವೆ. ಭಗವಾನ್... ನಮಗೆ ಈ ದೇಹ ಸಿಕ್ಕಿದೆ; ಭಗವಾನ್ ಆ ದೇಹವನ್ನು ಹೊಂದಿದ್ದಾನೆ. ಭಗವಾನ್ ಕೂಡ ಜೀವಿ; ನಾವೂ ಸಹ ಜೀವಿಗಳು. ಭಗವಾನ್ ಸೃಜನಾತ್ಮಕ ಶಕ್ತಿಯನ್ನು ಪಡೆದಿದ್ದಾನೆ; ನಮ್ಮಲ್ಲಿಯೂ ಸೃಜನಶೀಲ ಶಕ್ತಿಯಿದೆ. ಆದರೆ ವ್ಯತ್ಯಾಸವೆಂದರೆ ಅವನು ತುಂಬಾ ಶ್ರೇಷ್ಠ. ಏಕೋ ಯೋ ಬಹೂನಾಂ ವಿದಧಾತಿ ಕಾಮಾನ್. ಭಗವಾನ್ ಈ ಸಂಪೂರ್ಣ ಬ್ರಹ್ಮಾಂಡವನ್ನು ಸೃಷ್ಟಿಸುವಾಗ, ಅವನಿಗೆ ಯಾರ ಸಹಾಯವೂ ಅಗತ್ಯವಿಲ್ಲ. ಅವನು ಆಕಾಶವನ್ನು ಸೃಷ್ಟಿಸುತ್ತಾನೆ. ಆಕಾಶದಿಂದ ಶಬ್ದವನ್ನು; ಶಬ್ದದಿಂದ ಗಾಳಿಯನ್ನು; ಗಾಳಿಯಿಂದ ಬೆಂಕಿಯನ್ನು; ಬೆಂಕಿಯಿಂದ ನೀರನ್ನು; ಮತ್ತು ನೀರಿನಿಂದ ಭೂಮಿಯನ್ನು ಸೃಷ್ಟಿಸುತ್ತಾನೆ.