KN/670223b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ನನ್ನ ಛಾಯಾಚಿತ್ರವನ್ನು ತೆಗೆದುಕೊಂಡು ನೀವು ಅದನ್ನು ನನ್ನ ಆಸನದಲ್ಲಿ ಇಟ್ಟರೆ ಮತ್ತು ನಾನು ಇಲ್ಲಿಲ್ಲದಿದ್ದರೆ, ಆ ಛಾಯಾಚಿತ್ರವು ನನ್ನಂತೆ ವರ್ತಿಸಲಾಗದು, ಏಕೆಂದರೆ ಅದು ವಸ್ತು. ಆದರೆ ಕೃಷ್ಣ, ಅವನ ಛಾಯಾಚಿತ್ರ, ಅವನ ಪ್ರತಿಮೆ, ಅವನ ಎಲ್ಲವೂ ಅವನ ಹಾಗೆಯೇ ವರ್ತಿಸಬಲ್ಲದು ಏಕೆಂದರೆ ಅವನು ಆಧ್ಯಾತ್ಮಿಕ. ಆದ್ದರಿಂದ ನಾವು ಹರೇ ಕೃಷ್ಣ ಎಂದು ಜಪಿಸಿದ ಕೂಡಲೇ, ,ಕೃಷ್ಣ ತಕ್ಷಣವೇ ಅಲ್ಲಿ ಇದ್ದಾನೆ ಎಂದು ನಾವು ಯಾವಾಗಲೂ ತಿಳಿದುಕೊಳ್ಳಬೇಕು. ತಕ್ಷಣವೇ. ಕೃಷ್ಣ ಈಗಾಗಲೇ ಅಲ್ಲಿದ್ದಾನೆ. ಆದರೆ ಆತ, ಧ್ವನಿ ಕಂಪನದಿಂದ, ಕೃಷ್ಣ ಇದ್ದಾನೆ ಎಂದು ನಾವು ತಿಳಿದುಕೊಳ್ಳಬೇಕು. ಆದ್ದರಿಂದ ಅಂಗಾನಿ ಯಸ್ಯ. ಸಾ ಈಕ್ಷಣ್ಚಕ್ರೇ. ಅವನ ದೃಷ್ಟಿ, ಅವನ ಉಪಸ್ಥಿತಿ, ಅವನ ಚಟುವಟಿಕೆಗಳು, ಅವೆಲ್ಲವೂ ಆಧ್ಯಾತ್ಮಿಕವಾಗಿದೆ. ಭಗವದ್ಗೀತೆಯಲ್ಲಿ, ಜನ್ಮ ಕರ್ಮ ಮೇ ದಿವ್ಯಮ್ ಯೋ ಜಾನಾತಿ ತತ್ವತಃ ( ಭ. ಗೀತಾ ೪.೯ ): ಯಾರು ನನ್ನ ಜನ್ಮದ ದಿವ್ಯ ಸ್ವರೂಪವನ್ನು ತಿಳಿದುಕೊಳ್ಳುತ್ತಾರೋ, ನನ್ನ ಆವಿರ್ಭಾವ , ಕಣ್ಮರೆ ಮತ್ತು ಚಟುವಟಿಕೆಗಳು, "ತ್ಯಕ್ತ್ವಾ ದೇಹಮ್ ಪುನರ್ ಜನ್ಮ ನೈತಿ," ಅವನು ತಕ್ಷಣ ವಿಮೋಚನೆ ಹೊಂದುತ್ತಾನೆ.
670223 - ಉಪನ್ಯಾಸ- ಚೈ.ಚ. ಆದಿ ೦೭.೧೧೩-೧೭ - ಸ್ಯಾನ್ ಫ್ರಾನ್ಸಿಸ್ಕೋ