KN/681002 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಟೈಪ್‌ರೈಟಿಂಗ್ ಯಂತ್ರದ ಸಣ್ಣ ಒಂದು ತಿರುಪು, ಅದು ಕಾಣೆಯಾದಾಗ, ನಿಮ್ಮ ಯಂತ್ರವು ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ. ನೀವು ರಿಪೇರಿ ಮಾಡುವ ಅಂಗಡಿಯೊಂದಕ್ಕೆ ಹೋ್ದರೆ, ಅವನು ಹತ್ತು ಡಾಲರ್ ಶುಲ್ಕ ವಿಧಿಸುತ್ತಾನೆ; ನೀವು ತಕ್ಷಣ ಪಾವತಿಸುತ್ತೀರಿ. ಅದೊಂದು ಚಿಕ್ಕ ಸ್ಕ್ರೂ ಯಂತ್ರದಿಂದ ಬೇರ್ಪಡೆಯಾದಾಗ, ಅದಕ್ಕೆ ಒಂದು ಬಿಡಿಗಾಸಿನ ಮೌಲ್ಯವೂ ಕೂಡ ಇರುವುದಿಲ್ಲ. ಅದೇ ರೀತಿಯಲ್ಲಿ, ನಾವೆಲ್ಲರೂ ಪರಮ ಪುರುಷನ ಒಂದು ಅವಿಭಾಜ್ಯ ಭಾಗವಾಗಿದ್ದೇವೆ. ನಾವು ಪರಮ ಪುರುಷನೊಂದಿಗೆ ಸುಪ್ರೀಂನೊಂದಿಗೆ ಕೆಲಸ ಮಾಡಿದರೆ, ಅಂದರೆ ನಾವು ಕೃಷ್ಣ ಪ್ರಜ್ಞೆಯಲ್ಲಿ ಅಥವಾ ದೇವರ ಪ್ರಜ್ಞೆಯಲ್ಲಿ ಕೆಲಸ ಮಾಡಿದರೆ, 'ನಾನು ಅವಿಭಾಜ್ಯ... 'ಈ ಬೆರಳು ನನ್ನ ದೇಹದ ಪ್ರಜ್ಞೆಯಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವಂತೆಯೇ, ಸ್ವಲ್ಪ ನೋವು ಆದಾಗಲೆಲ್ಲಾ ನನಗೆ ಅನುಭವವಾಗುತ್ತದೆ. ಅದೇ ರೀತಿ, ನೀವು ಕೃಷ್ಣ ಪ್ರಜ್ಞೆಯಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ, ನೀವು ನಿಮ್ಮ ಸಹಜ ಸ್ಥಿತಿಯಲ್ಲಿ ವಾಸಿಸುತ್ತೀರಿ, ನಿಮ್ಮ ಜೀವನವು ಯಶಸ್ವಿಯಾಗಿದೆ ಮತ್ತು ನೀವು ಕೃಷ್ಣ ಪ್ರಜ್ಞೆಯಿಂದ ಬೇರ್ಪಟ್ಟ ತಕ್ಷಣ, ಇಡೀ ತೊಂದರೆ ಇದೆ. ಇಡೀ ತೊಂದರೆ ಇದೆ. ಆದ್ದರಿಂದ, ಈ ತರಗತಿಯಲ್ಲಿ ನಾವು ಪ್ರತಿದಿನ ಉಲ್ಲೇಖಿಸುವ ಅನೇಕ ಉದಾಹರಣೆಗಳಿವೆ. ಆದ್ದರಿಂದ ಸಂತೋಷವಾಗಿರಲು ಮತ್ತು ನಮ್ಮ ಸಾಮಾನ್ಯ ಸ್ಥಿತಿಯಲ್ಲಿರಲು ಬಯಸುತ್ತೇವೆ ಎಂದರೆ ನಾವು ಈ ಕೃಷ್ಣ ಪ್ರಜ್ಞೆಯನ್ನು ಒಪ್ಪಿಕೊಳ್ಳಬೇಕು."

681002 - ಉಪನ್ಯಾಸ - ಸಿಯಾಟಲ್