KN/Prabhupada 0006 - ಎಲ್ಲರೂ ದೇವರೇ - ಮೂರ್ಖರ ಸ್ವರ್ಗ



Lecture on SB 1.15.49 -- Los Angeles, December 26, 1973

ಪ್ರತಿಯೊಬ್ಬರು ಗರ್ವ ಪಡುತ್ತರೆ, " ನನಗೆ ಗೊತ್ತು, ನನಗೆ ಎಲ್ಲವೂ ತಿಳಿದಿದೆ ಆದ್ದರಿಂದ ಗುರುಗಳ ಬಳಿಗೆ ಹೋಗುವ ಅವಶ್ಯಕತೆ ಇಲ್ಲ ಇದು ಗುರುಗಳ ಸಮೀಪಿಸವ ವಿಧಾನ, ಆಧ್ಯಾತ್ಮಿಕ ಮಾಸ್ಟರ್ : ಶರಣು, ಅದು " ನನಗೆ ಅನೇಕ ಅನುಪಯುಕ್ತ ವಿಷಯಗಳು ತಿಳಿದಿವೆ. ಈಗ ನನಗೆ ದಯವಿಟ್ಟು ಕಲಿಸಿಕೊಡಿ. ಇದ್ದನೇ ಶರಣಾಗತಿ ಎನ್ನುತ್ತಾರೆ. ಹೇಗೆ ಅರ್ಜುನ ಹೇಳಿದನೊ, ಅದೇ ರೀತಿ ಶಿಷ್ಯಸ್ತೇ ಹಂ ಶಾಧಿ ಮಾಂ ಪ್ರಪನ್ನಮ್ (ಭ ಗೀ ೨.೭) ಅರ್ಜುನ ಮತ್ತು ಕೃಷ್ಣನ ನಡುವೆ ಚರ್ಚೆ ನಡೆದಾಗ, ಮತ್ತು ಯಾವಾಗ ಆ ವಿಷಯದ ಪರಿಹಾರ ಸಿಗಲಿಲ್ಲ, ಆಗ ಅರ್ಜುನ ಕೃಷ್ಣನಿಗೆ ಶರಣಾದ, ನನ್ನ ಪೀತಿಯ ಕೃಷ್ಣನೆ, ಈಗ ನಾವು ಸ್ನೇಹಿತರ ರೀತಿ ಮಾತನಾಡುತ್ತಿದ್ದೆವೆ, ಇನ್ನು ಮುಂದೆ ಈ ರೀತಿ ಸ್ನೇಹಬರಿತ ಮಾತುಗಳಿಲ್ಲ ನಾನು ನಿಮ್ಮನು ನನ್ನ ಆಧ್ಯಾತ್ಮಿಕ ಗುರುಗಳು ಎಂದು ಸ್ವೀಕರಿಸುತ್ತೇನೆ ದಯವಿಟ್ಟು ನನಗೆ ನನ್ನ ಕರ್ತವ್ಯ ಏನೆಂದು ಕಲಿಸು" ಅದೇ ಭಗವದ್ಗೀತ ಅದ್ದನು ನಾವು ಕಲಿಯಬೇಕು. ತದ್-ವಿಜ್ಞಾನಾರ್ತಮ್ ಸ ಗುರುಮ್ ಏವ ಅಭಿಗಚ್ಚೇತ್ (ಮ ಉ ೧.೨.೧೨) ಇದು ವೈದಿಕ ತಡೆಯಾಜ್ಞೆ, ಏನು ಜೀವನದ ಮೌಲ್ಯ ಎಂದು? ಹೇಗೆ ಬದಲಾಗುತ್ತಿದೆ? ಹೇಗೆ ನಾವು ಒಂದು ದೇಹದಿಂದ ಇನೊಂದು ದೇಹಕ್ಕೆ ವಲಸೆ ಹೋಗುತ್ತೆವೆ? ನಾನು ಏನು? ನಾನು ಈ ದೇಹವೊ ಅಥವ ಅದರಾಚೆ ಬೇರೆನೋ? ಈ ವಿಷಯಗಳನ್ನು ವಿಚಾರಣೆ ಮಾಡಬೇಕು ಇದೇ ಮಾನವ ಜನ್ಮ. ಅಥತೊ ಬ್ರಹ್ಮ ಜಿಜ್ಞಾಸ ಇದರ ವಿಚಾರಣೆ ಮಾಡಬೇಕು. ಅದ್ದರಿಂದ ಈ ಕಲಿ-ಯುಗದಲ್ಲಿ, ಯಾವುದೇ ಜ್ಞಾನವಿಲ್ಲದೆ, ಯಾವುದೇ ವಿಚಾರಣೆ ಮಾಡದೆ, ಯಾವುದೇ ಗುರುವೆಲ್ಲದೆ, ಯಾವುದೇ ಪುಸ್ತಕವಿಲ್ಲದೆ, ಎಲ್ಲರು ದೇವರೆ, ಅಷ್ಟೇ. ಇದು ನಡೆಯುತ್ತಿದೆ, ಮೂರ್ಖರ ಸ್ವರ್ಗ ಇದು ಸಹಾಯ ಮಾಡುವುದ್ದಿಲ್ಲ ಇಲ್ಲಿ, ವಿದುರನ ಬಗ್ಗೆ... ಅವರು ಸಹ..... (ಶ್ರೀ ಭ ೧.೧೫.೪೯) ವಿದುರೊ 'ಪಿ ಪರಿತ್ಯಜ್ಯ ಪ್ರಭಾಸೆ ದೇಹಮ್ ಆತ್ಮನಃ ಕೃಷ್ಣಾವೇಶೆನ ತಕ್-ಚಿತ್ತಃ ಪಿತೄಭಿಃ ಸ್ವ-ಕ್ಷಯಂ ಯಯೌ ಅವರು.... ನಾನು ವಿದುರನ ಬಗ್ಗೆ ಮಾತಡುತ್ತಿದ್ದೇನೆ ವಿದುರನು ಯಮರಾಜ ಆದ್ದರಿಂದ ಒಬ್ಬ ಸಂತನನ್ನು ಯಮರಾಜನ ಮುಂದೆ ಶಿಕ್ಷೆ ನೀಡಲು ಕರೆತಂದರು. ಆಗ ಆ ಸಂತವ್ಯಕ್ತಿ ಯಮರಾಜನಿಂದ ವಿಚಾರಣೆ ಮಾಡಿದಾಗ, ಎಂದು "ನಾನು ... ನಾನು ನನ್ನ ಜೀವನದಲ್ಲಿ ಯಾವುದೇ ಪಾಪ ಮಾಡಿರುವ ನೆನಪು ನನಗೆ ಇಲ್ಲ. ನನ್ನನು ಏಕೆ ತೀರ್ಮಾನ ಮಾಡಲು ಇಲ್ಲಿಗೆ ಕರೆತಂದ್ದಿದ್ದೀರಾ ? ಆಗ ಯಮರಾಜ ಹೇಳಿದನು " ನಿನಗೆ ಅದು ನೆನಪು ಇಲ್ಲ. ನಿನ್ನ ಬಾಲ್ಯದ ನೀನು ಒಂದು ಇರುವೆಗೆ ಸೂಜಿಯಿಂದ ಗುದನಾಳದ ಮೂಲಕ ಚುಚ್ಚಿದೆ ಮತ್ತು ಆದರಿಂದ ಅದು ಸತ್ತು ಹೋಯಿತು. ಆದ್ದರಿಂದ ನಿನ್ನನ್ನು ಶಿಕ್ಷಿಸ ಬೇಕು." ಹೇಗಿದೆ ನೋಡು ಬಾಲ್ಯದಲ್ಲಿ, ಅಜ್ಞಾನದಿಂದ, ಅವನು ಕೆಲವು ಪಾಪಕೃತ್ಯ ಮಾಡಿದರಿಂದ, ಅವನನ್ನು ಶಿಕ್ಷಿಸ ಬೇಕು ಮತ್ತು ನಾವು ಸ್ವಸಮ್ಮತಿಯಿಂದ, ಧರ್ಮ ತತ್ವ ವಿರುಧವಾಗಿ , " ನಾವು ಸಾಯಿಸುವುದಿಲ್ಲ," ಎಂದು ನಾವು ಅನೇಕ ಸಾವಿರಾರು ಕಸಾಯಿಖಾನೆಗಳ್ಳನ್ನು ತೆರೆದಿದ್ದೆವೆ, ಪ್ರಾಣಿಗಳಿಗೆ ಆತ್ಮ ಇಲ್ಲ ಎಂದು ಅಸಂಬದ್ಧ ಸಿದ್ಧಾಂತ ನೀಡುತ್ತೆವೆ. ಈ ಮೋಜನ್ನು ನೋಡಿ. ಮತ್ತು ಇದು ನಡೆಯುತ್ತಲೆ ಇರುತ್ತದೆ ಮತ್ತು ನಾವು ಶಾಂತಿಯನ್ನು ಬಯಸುತ್ತೆವೆ.