KN/Prabhupada 0037 - ಯಾರು ಕೃಷ್ಣನನ್ನು ಬಲ್ಲವರೋ ಅವರು ಗುರು



Lecture on BG 7.1 -- Hong Kong, January 25, 1975

ನಾವು ಭಗವಂತನ ಶಕ್ತಿಯನ್ನು ಹೇಗೆ ಅರ್ಥ ಮಾಡಿಕೊಳ್ಳಬಹುದು? ಆತನ ಸೃಜನಶೀಲ ಶಕ್ತಿಯನ್ನು ಹೇಗೆ ಅರ್ಥ ಮಾಡಿಕೊಳ್ಳಬಹುದು? ಭಗವಂತನ ಶಕ್ತಿಯೇನು? ಅವನು ಹೇಗೆ ಕೆಲಸ ಮಾಡುತಿದ್ದಾನೆ? - ಇದು ಕೂಡ ಒಂದು ದೊಡ್ಡ ವಿಜ್ಞಾನವಾಗಿದೆ. ಇದೇ ಕೃಷ್ಣ ವಿಜ್ಞಾನ. ಕೃಷ್ಣ ತತ್ವ ಜ್ಞಾನ. ಯೈ ಕೃಷ್ಣ ತತ್ವ ವೇತ್ತ, ಸೈ ಗುರು ಹಯ (ಚೈ. ಚ. ಮಧ್ಯ 8.128) ಚೈತನ್ಯ ಮಹಾಪ್ರಭುಗಳು, ಗುರು ಎಂದರೆ ಯಾರು ಎಂದು ತಿಳಿಸಿದ್ದಾರೆ. ಗುರು ಎಂದರೆ, ಯೈ ಕೃಷ್ಣ ತತ್ವ ವೇತ್ತ, ಸೈ ಗುರು ಹಯ. "ಯಾರು ಕೃಷ್ಣನನ್ನುತಿಳಿದಿದ್ದಾರೋ, ಅವರೇ ಗುರು". ಗುರುಗಳನ್ನು ನಾವೇ ಸೃಷ್ಟಿಸಲು ಸಾಧ್ಯವಿಲ್ಲ. ಯಾರೇ ಅದರೂ ಕೃಷ್ಣನನ್ನು ಸಾಧ್ಯವಾದ ಮಟ್ಟಿಗೆ ತಿಳಿದಿದ್ದರೆ... ನಮಗೆ ತಿಳಿಯಲು ಸಾಧ್ಯವಿಲ್ಲ. ಕೃಷ್ಣನನ್ನು ಶತ ಪ್ರತಿಶತ ತಿಳಿಯಲು ನಮ್ಮಿಂದ ಸಾಧ್ಯವಿಲ್ಲ. ಕೃಷ್ಣನಲ್ಲಿ ಬಹಳಷ್ಟು ವಿಧದ ಶಕ್ತಿಗಳಿವೆ. ಪರಾಸ್ಯ ಶಕ್ತಿರ್ ವಿವಿಧೈವ ಶ್ರೂಯತೆ (ಚೈ. ಚ. ಮಧ್ಯ 13.65, ಭಾವಾರ್ಥ) ಒಂದು ಶಕ್ತಿಯು ಒಂದು ರೀತಿಯಲ್ಲಿ ಕೆಲಸ ಮಾಡುತ್ತದೆ, ಇನ್ನೊಂದು ಶಕ್ತಿಯು ಇನ್ನೊಂದು ರೀತಿಯಲ್ಲಿ ಕೆಲಸ ಮಾಡುತ್ತದೆ. ಆದರೆ ಅವುಗಳೆಲ್ಲಾ ಕೃಷ್ಣನ ಶಕ್ತಿಗಳು. ಪರಾಸ್ಯ ಶಕ್ತಿರ್ ವಿವಿಧೈವ ಶ್ರೂಯತೆ. ಮಯಾಧ್ಯಕ್ಷೇಣ ಪ್ರಕೃತಿ ಸೂಯತೆ ಸ ಚರಾಚರಂ (ಭಗವದ್ಗೀತಾ 9.10). ಪ್ರಕೃತಿ ... ಈ ಹೂವು ಪ್ರಕೃತಿಯಿಂದ ಬಂದಿದೆ, ಹೂವು ಮಾತ್ರವಲ್ಲ, ಬಹಳಷ್ಟು ವಸ್ತುಗಳು ಬೀಜದ ಮೂಲಕ ಬರುತ್ತಿದೆ. ಗುಲಾಬಿ ಬೀಜದಿಂದ ಗುಲಾಬಿ ಗಿಡ ಬೆಳೆಯುತ್ತದೆ. ಬಿಲ್ವ ಬೀಜದಿಂದ ಬಿಲ್ವ ಮರವು ಬೆಳೆಯುತ್ತದೆ. ಇದು ಹೇಗೆ ಸಾಧ್ಯ? ಅದೇ ಮಣ್ಣು, ಅದೇ ನೀರು, ಮತ್ತು ಬೀಜ ಕೂಡ ನೋಡಲು ಒಂದೇ ರೀತಿ ಕಾಣುತ್ತದೆ. ಆದರೆ ಗಿಡಗಳು ಬೇರೆ ರೀತಿ ಇರುತ್ತವೆ. ಇದು ಹೇಗೆ ಸಾಧ್ಯ? ಇದೇ ಪರಾಸ್ಯ ಶಕ್ತಿರ್ ವಿವಿಧೈವ ಶ್ರೂಯತೆ, ಸ್ವಭಾವಿಕೀ ಜ್ಞಾನ. ಸಾಮಾನ್ಯ ಮನುಷ್ಯ ಅಥವಾ ವಿಜ್ಞಾನಿ "ಇದನ್ನು ಪ್ರಕೃತಿ ಉತ್ಪಾದಿಸುತ್ತಿದೆ" ಎಂದು ಹೇಳಬಹುದು. ಆದರೆ ಅವರಿಗೆ ಪ್ರಕೃತಿ ಎಂದರೆ ಏನು, ಅದರ ಚಟುವಟಿಕೆಗಳನ್ನು ಯಾರು ನಿಯಂತ್ರಿಸುತ್ತಾರೆ ಎಂದು ತಿಳಿದಿಲ್ಲ. ಭೌತಿಕ ಪ್ರಕೃತಿ, ಅದು ಹೇಗೆ ಕೆಲಸ ಮಾಡುತ್ತಿದೆ.

ಅದನ್ನು ಭಗವದ್ಗೀತೆಯಲ್ಲಿ ಹೇಳಿದ್ದಾರೆ, ಮಯಾಧ್ಯಕ್ಷೇಣ (ಭಗವದ್ಗೀತಾ 9.10) ಕೃಷ್ಣನು ಹೇಳುತ್ತಾನೆ, "ನನ್ನ ಮೇಲ್ವಿಚಾರಣೆಯಲ್ಲಿ ಪ್ರಕೃತಿಯು ಕೆಲಸ ಮಾಡುತ್ತಿದೆ." ಅದೇ ಸತ್ಯ. ಪ್ರಕೃತಿ, ಭೌತಿಕ ವಸ್ತು... ವಸ್ತುಗಳು ಸ್ವಯಂಚಾಲಿತವಾಗಿ ಒಂದುಗೂಡುವುದಿಲ್ಲ. ಈ ಗಗನಚುಂಬಿ ಕಟ್ಟಡಗಳು, ಅವುಗಳನ್ನು ಭೌತಿಕ ವಸ್ತುಗಳಿಂದ ರಚಿಸಲಾಗಿದೆ. ಆದರೆ ಈ ಭೌತಿಕ ವಸ್ತುಗಳು ತಾವಾಗಿಯೇ ಕಟ್ಟಡಗಳಾಗಿ ಪರಿವರ್ತಿತವಾಗಿಲ್ಲ. ಅದು ಸಾಧ್ಯವಿಲ್ಲ. ಅಲ್ಲಿ ಒಂದು ಸಣ್ಣ ಜೀವಾತ್ಮ ಇದೆ. ಇಂಜಿನಿಯರ್ ಅಥವಾ ವಾಸ್ತುಶಿಲ್ಪಿ. ಆತನು ಭೌತಿಕ ಪ್ರಕೃತಿಯನ್ನು ಉಪಯೋಗಿಸಿ ಕಟ್ಟಡ ನಿರ್ಮಾಣ ಮಾಡುತ್ತಾನೆ. ಇದು ನಮ್ಮ ಅನುಭವ. ಆದ್ದರಿಂದ ಭೌತಿಕ ಪ್ರಕೃತಿಯು ತಾನಾಗಿಯೇ ಕೆಲಸ ಮಾಡುತ್ತಿದೆ ಎಂದು ಹೇಳಲು ಹೇಗೆ ಸಾಧ್ಯ? ಭೌತಿಕ ಪ್ರಕೃತಿಯು ತಾನಾಗಿಯೇ ಕೆಲಸ ಮಾಡಲು ಸಾಧ್ಯವಿಲ್ಲ. ಇದಕ್ಕೆ ಹೆಚ್ಚಿನ ಮೆದುಳು, ಹೆಚ್ಚಿನ ಕುಶಲತೆ ಬೇಕು. ಆದ್ದರಿಂದ ಉನ್ನತ ಕ್ರಮ ಬೇಕಾಗುತ್ತದೆ. ಈ ಭೌತಿಕ ಪ್ರಪಂಚದಲ್ಲಿ ನಾವು ಅತ್ಯುನ್ನತ ಕ್ರಮವನ್ನು ಹೊಂದಿದ್ದೇವೆ, ಸೂರ್ಯ, ಸೂರ್ಯನ ಚಲನೆ, ಶಾಖ ಶಕ್ತಿ, ಸೂರ್ಯನ ಬೆಳಕಿನ ಶಕ್ತಿ. ಆದ್ದರಿಂದ ಅದನ್ನು ಹೇಗೆ ಬಳಸಲಾಗುತ್ತಿದೆ? ಇದನ್ನು ಶಾಸ್ತ್ರದಲ್ಲಿ ಹೇಳಲಾಗಿದೆ: ಯಸ್ಯಾಜ್ಞಯಾ ಭ್ರಮತಿ ಸಂಭ್ರತ-ಕಾಲ-ಚಕ್ರೋ ಗೋವಿಂದಂ ಆದಿ-ಪುರುಷಂ ತಮ್ ಅಹಂ ಭಜಾಮಿ. ಈ ಭೂಮಿಯಂತೆಯೇ ಸೂರ್ಯ ಗ್ರಹವೂ ಒಂದು ಗ್ರಹ. ಈ ಗ್ರಹದಲ್ಲಿ ಬಹಳಷ್ಟು ಅಧ್ಯಕ್ಷರು ಇರುವಂತೆ, ಆದರೆ ಹಿಂದೆ ಒಬ್ಬ ಮಾತ್ರ ಅಧ್ಯಕ್ಷರು ಇದ್ದರು. ಹಾಗೆಯೇ, ಪ್ರತಿಯೊಂದು ಗ್ರಹದಲ್ಲಿಯೂ ಒಬ್ಬ ಅಧ್ಯಕ್ಷ ಇದ್ದಾರೆ. ಸೂರ್ಯ ಗ್ರಹದಲ್ಲಿ, ... ನಾವು ಈ ಜ್ಞಾನವನ್ನು ಭಗವದ್ಗಿತೆಯಿಂದ ಪಡೆಯುತ್ತೇವೆ. ಕೃಷ್ಣನು ಹೇಳುತ್ತಾನೆ" ಇಮಮ್ ವಿವಸ್ವತೆ ಯೋಗಮ್ ಪ್ರೋಕ್ತವಾನ್ ಅಹಮ್ ಅವಯ್ಯಂ (ಭಗವದ್ಗೀತಾ 4.1). ನಾನು ಮೊತ್ತ ಮೊದಲಿಗೆ ಈ ಭಗವದ್ಗೀತಾ ವಿಜ್ಞಾನವನ್ನು ವಿವಸ್ವಾನನಿಗೆ ಬೋಧಿಸಿದೆನು. ವಿವಸ್ವನ್ ಎಂದರೆ ಸೂರ್ಯ ಗ್ರಹದ ಅಧ್ಯಕ್ಷ, ಅವನ ಮಗ ಮನು. ಇದು ಕಾಲ. ಈ ಕಾಲ ನಡೆಯುತ್ತಿದೆ. ಇದು ವೈವಸ್ವತ ಮನುವಿನ ಕಾಲ. ವೈವಸ್ವತ ಎಂದರೆ ವಿವಸ್ವಾನನಿಂದ, ವಿವಸ್ವಾನನ ಮಗ. ಅವನನ್ನು ವೈವಸ್ವತ ಮನು ಎಂದು ಕರೆಯುತ್ತಾರೆ.