KN/Prabhupada 0038 - ಜ್ಞಾನವನ್ನು ವೇದಗಳಿಂದ ಪಡೆಯುತ್ತೇವೆ



Lecture on BG 7.1 -- Hong Kong, January 25, 1975

ಈಗ ಕೃಷ್ಣನಿದ್ದಾನೆ. ನಮ್ಮ ಹತ್ತಿರ ಕೃಷ್ಣನ ಚಿತ್ರಪಠಗಳಿವೆ, ಕೃಷ್ಣನ ದೇವಸ್ಥಾನ... ಹಲವಾರು ಕೃಷ್ಣ. ಅವು ಕಾಲ್ಪನಿಕವಲ್ಲ. ಊಹೆಯು ಅಲ್ಲ. ಮಾಯಾವಾದಿ ತತ್ವಜ್ಞಾನಿ “ಮನಸಲ್ಲಿ ಕಲ್ಫನೆಮಾಡಿಕೊಳ್ಳ ಬಹುದು” ಏಂದು ಯೋಚಿಸುವಂತೆ. ಇಲ್ಲ. ದೇವರನ್ನು ಕಲ್ಪನೆ ಮಾಡಿಕೊಳ್ಳಲಾಗುವುದಿಲ್ಲ. ಇದು ಇನ್ನೊಂದು ಮೂಖ೯ತನ. ದೇವರನ್ನು ಹೇಗೆ ಊಹಿಸಲು ಸಾಧ್ಯ? ಆಗ ದೇವರು ನಿಮ್ಮ ಕಲ್ಪನೆಯ ವಸ್ತುವಿಷಯವಾಗುತ್ತಾನೆ. ಅವನು ವಸ್ತುಅಲ್ಲ. ಅದು ದೇವರಲ್ಲ. ಊಹಿಸಿಕೊಂಡದ್ದು ದೇವರಲ್ಲ. ದೇವರು ನಿಮ್ಮ ಸಮಕ್ಷದಲ್ಲಿದ್ದಾನೆ. ಕೃಷ್ಣ. ಅವನು ಇಲ್ಲಿ, ಈ ಗ್ರಹಕ್ಕೆ ಬರುತ್ತಾನೆ. ತದಾತ್ಮಾನಂ ಸೃಜಾಮ್ಯಹಮ್, ಸಮ್ಭವಾಮಿ ಯುಗೇ ಯುಗೇ ಆದರಿಂದ, ದೇವರನ್ನು ಯಾರು ನೋಡಿರುವರೊ ಅವರಿಂದ ಮಾಹಿತಿ ಪಡಿಯಿರಿ. ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ, ಉಪದೇಕ್ಷ್ಯನ್ತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದಶಿ೯ನಃ (ಭ.ಗೀ 4.34)

ತತ್ತ್ವ - ದಶಿ೯ನಃ. ನೀವು ನೋಡದಿದ್ದಲ್ಲಿ ಬೆರೇಯವರಿಗೆ ಹೇಗೆ ಸತ್ಯದ ಮಾಹಿತಿ ನೀಡಬಲ್ಲಿರಿ? ಆದರಿಂದ ದೇವರನ್ನು ಕಾಣಬಹುದು. ಕೇವಲ ಇತಿಹಾಸದಲ್ಲಲ. ಇತಿಹಾಸದಲ್ಲಿ, ಕೃಷ್ಣನು ಈ ಗ್ರಹದ ಮೇಲೆ ಪ್ರಸ್ತುತನಾಗ್ಗಿದಾಗ, ಆ ಕುರುಕ್ಷೇತ್ರ ಯುದ್ಧದ ಇತಿಹಾಸ... …ಎಲ್ಲಿ ಭಗವಗ್ದೀತೆ ನುಡಿಯಲಾಯಿತೊ… ಅದು ಐತಿಹಾಸಿಕ ಸತ್ಯ. ಹೀಗೆ ನಾವು ಭಗವಾನ್ ಶ್ರೀಕೃಷ್ಣನ್ನನ್ನು ಇತಿಹಾಸದಲ್ಲೂ ಮತ್ತು ಶಾಸ್ತ್ರದಲ್ಲೂ ಕಾಣಬಹುದು. ಶಾಸ್ತ್ರ – ಚಕ್ಷುಷಾ ಪ್ರಸ್ತುತ ಶ್ರೀಕೃಷ್ಣನು ದೈಹಿಕವಾಗಿ ಇಲ್ಲಿ ಇಲ್ಲದಿದರೂ, ಶಾಸ್ತ್ರದ ಮೂಲಕ ಕೃಷ್ಣನು ಏನೆಂದು ಅಥ೯ಮಾಡಿಕೊಳ್ಳಬಹುದು. ಆದರಿಂದ ಶಾಸ್ತ್ರ – ಚಕ್ಷುಷಾ. ಶಾಸ್ತ್ರ… ನೀವು ನೇರ ಅನುಭವದಿಂದಾಗಲಿ ಅಥವ ಶಾಸ್ತ್ರದ ಮೂಲಕ… ಶಾಸ್ತ್ರದ ಮೂಲಕ ದೊರಕ್ಕುವ ಅನುಭವ ನೇರ ಅನುಭವಕ್ಕಿಂತ ಉತ್ತಮ. ಆದ್ದರಿಂದ, ನಮ್ಮ ಜ್ಞಾನ…ಯಾರು ವೈದಿಕ ತತ್ವಗಳನ್ನು ಅನುಸರಿಸುತ್ತಿರುವರೊ ಅವರ ಜ್ಞಾನ ವೇದಗಳಿಂದ ಪಡೆಯಲಾಗಿದೆ. ಅವರು ಯಾವ ಜ್ಞಾನವನ್ನು ಸೃಷ್ಠಿಸುವುದಿಲ್ಲ. ಯಾವುದಾದರು ಒಂದು ವಿಷಯ ವೇದದ ಪುರಾವೆಯಿಂದ ಅಥ೯ವಾದರೆ ಅದೆ ಸತ್ಯ. ಹೀಗೆ ಕೃಷ್ಣ ವೇದಗಳ ಮೂಲಕ ಅಥ೯ವಾಗುತ್ತಾನೆ. ವೇದೈಶ್ಚ ಸವೈ೯ರಹಮೇವ ವೇದ್ಯಃ (ಭ.ಗೀ 15.15).ಅದನ್ನು ಭಗವದ್ಗೀತೆಯಲ್ಲಿ ನಮೂದಿಸಲಾಗಿದೆ. ನೀವು ಕೃಷ್ಣನನ್ನು ಊಹಿಸಲಾಗುವುದ್ದಿಲ್ಲ. ಧೂತ೯ನೊಬ್ಬನು “ನಾನು ಊಹಿಸಿಕೊಳ್ಳುತ್ತಿದೇನೆ” ಅಂದರೆ ಅದು ಧೂತ೯ತನ. ನೀವು ಕೃಷ್ಣನನ್ನು ವೇದಗಳ ಮೂಲಕ ನೋಡಬೇಕು. ವೇದೈಶ್ಚ ಸವೈ೯ರಹಮೇವ ವೇದ್ಯಃ (ಭ.ಗೀ 15.15). ಅದುವೆ ವೇದಗಳ ಅಧ್ಯಯನ ಮಾಡುವ ಉದ್ದೇಶ. ಆದ್ದರಿಂದ ಅದನ್ನು ವೇದಾಂತವೆಂದು ಕರೆಯುತ್ತೇವೆ. ಕೃಷ್ಣನ ಜ್ಞಾನವೆ ವೇದಾಂತ.