KN/Prabhupada 0097 - ನಾನು ಕೇವಲ ಅಂಚೆಯ ಜವಾನ



His Divine Grace Srila Bhaktisiddhanta Sarasvati Gosvami Prabhupada's Appearance Day, Lecture -- Los Angeles, February 7, 1969

ಈ ಆಂದೋಲನವನ್ನು ಮುಂದುವರಿಸಲು ನಾವು ಶ್ರಮಿಸಿದರೆ, ನಮಗೆ, ನೀವು ಒಂದೂ ಅನುಯಾಯಿಯನ್ನೂ ಪಡೆಯದಿದ್ದರು ಕೃಷ್ಣ ತೃಪ್ತಿ ಹೊಂದುತ್ತಾನೆ. ನಮ್ಮ ವ್ಯವಹಾರವು ಕೃಷ್ಣನನ್ನು ತೃಪ್ತಿಪಡಿಸುವುದು. ಅದುವೇ ಭಕ್ತಿ. ಹೃಷೀಕೇನ ಹೃಷೀಕೇಶ-ಸೇವನಂ ಭಕ್ತಿರ್ ಉಚ್ಯತೇ (ಚೈ.ಚ ಮಧ್ಯ 19.170). ಭಕ್ತಿ ಎಂದರೆ ಕೃಷ್ಣನ ತೃಪ್ತಿಗಾಗಿ ಒಬ್ಬನು ತನ್ನ ಎಲ್ಲಾ ಇಂದ್ರಿಯಗಳನ್ನು ತೊಡಗಿಸಿಕೊಳ್ಳಬೇಕು. ಭೌತಿಕ ಜೀವನ ಎಂದರೆ ಅವನ ಸ್ವಂತ ತೃಪ್ತಿ: "ನನಗೆ ಇದು ಇಷ್ಟ. ನಾನು ಏನನ್ನಾದರೂ ಮಾಡಲು ಬಯಸುತ್ತೇನೆ. ನಾನು ಏನನ್ನಾದರೂ ಹಾಡಲು, ಅಥವಾ ಏನನ್ನಾದರೂ ಜಪಿಸಲು, ಏನನ್ನಾದರೂ ತಿನ್ನಲು, ಅಥವಾ ಏನನ್ನಾದರೂ ಸ್ಪರ್ಶಿಸಲು, ಅಥವಾ ಏನನ್ನಾದರೂ ಸವಿಯಲು ಬಯಸುತ್ತೇನೆ.” ಇದು ಏನಾದರೂ ... ಅಂದರೆ ಇಂದ್ರಿಯಗಳನ್ನು ಬಳಸುವುದು. ಅದು ಭೌತಿಕ ಜೀವನ. "ನಾನು ಇಂತಹ ಮೃದುವಾದ ಚರ್ಮವನ್ನು ಸ್ಪರ್ಶಿಸಲು ಬಯಸುತ್ತೇನೆ. ನಾನು ಅಂತಹ ರುಚಿಯನ್ನು ಬಯಸುತ್ತೇನೆ, ಒಳ್ಳೆಯ ಆಹಾರ. ನಾನು ಈ ರೀತಿಯ ಸುಗಂಧವನ್ನು ಬಯಸುತ್ತೇನೆ. ನಾನು ಈ ರೀತಿ ನಡೆಯಲು ಬಯಸುತ್ತೇನೆ." ಅವೆಲ್ಲವು - ನಡೆಯೋದು, ರುಚಿ, ಸ್ಪರ್ಶ, ಅಥವಾ ಏನೇ ಇರಲಿ ಕೃಷ್ಣನಿಗಾಗಿ ಬಳಸಿಕೊಳ್ಳಬೇಕು. ಅಷ್ಟೇ. ಬೇರೆ ಯಾವುದನ್ನಾದರೂ ಮುಟ್ಟುವ ಬದಲು, ನಾವು ಭಕ್ತನ ಪವಿತ್ರ ಕಮಲದ ಪಾದಗಳನ್ನು ಮುಟ್ಟಿದರೆ, ಆ ಸ್ಪರ್ಶವು ಉಪಯುಕ್ತವಾಗುತ್ತದೆ. ಅನುಪಯುಕ್ತವಾದ ಆಹಾರ ತಿನ್ನುವ ಬದಲು, ನಾವು ಕೃಷ್ಣ ಪ್ರಸಾದವನ್ನು ಸೇವಿಸಿದರೆ, ಅದು ಒಳ್ಳೆಯದು. ಬೇರೆ ಯಾವುದನ್ನಾದರೂ ವಾಸನೆ ನೋಡುವ ಬದಲು ಕೃಷ್ಣನಿಗೆ ಅರ್ಪಿಸಿದ ಹೂವುಗಳ ವಾಸನೆ ನೋಡಿದರೆ... ಆದ್ದರಿಂದ ಯಾವುದನ್ನೂ ನಿಲ್ಲಿಸಲಾಗಿಲ್ಲ. ನಿವು ಮೈಥುನದಲ್ಲಿ ತೊಡಗಲು ಬಯಸಿದರೆ, ಸರಿ, ನೀವು ಕೃಷ್ಣ ಪ್ರಜ್ಞಾವಂತ ಮಕ್ಕಳಿಗೆ ಜನ್ಮ ಕೊಡಲು ಬಳಸಬಹುದು. ಯಾವುದನ್ನೂ ನಿಲ್ಲಿಸಲಾಗಿಲ್ಲ. ಕೇವಲ ಅದನ್ನು ಶುದ್ಧೀಕರಿಸಲಾಗುತ್ತದೆ. ಅಷ್ಟೇ. ಇದು ಇಡೀ ಕಾರ್ಯಕ್ರಮ. "ಇದನ್ನು ನಿಲ್ಲಿಸಿ", ಎಂಬ ಪ್ರಶ್ನೆಯೇ ಇಲ್ಲ. ನಿಲ್ಲಿಸಲಾಗದು. ಅದನ್ನು ಹೇಗೆ ನಿಲ್ಲಿಸುವುದು? ನಾನು ಮನುಷ್ಯ ಎಂದು ಭಾವಿಸೋಣ. "ಓಹ್, ನೀವು ತಿನ್ನಬಾರದು", ಎಂದು ಯಾರಾದರೂ ಹೇಳಿದರೆ ಅದು ಸಾಧ್ಯವೇ? ನಾನು ತಿನ್ನಲೇಬೇಕು. ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪ್ರಶ್ನೆ ಅದನ್ನು ಶುದ್ಧೀಕರಿಸುವುದರ ಬಗ್ಗೆ. ಆದ್ದರಿಂದ ... ಮತ್ತು ಇತರ ತತ್ವವೆಂದರೆ, ನಾನು ಹೇಳುವುದೇನೆಂದರೆ, ದಬಾಯಿಸುವುದು, ಅದನ್ನು ಅನೂರ್ಜಿತಗೊಳಿಸಿ, ಅವರು ಹೇಳುವಂತೆಯೇ, "ಕೇವಲ ಕಾಮರಹಿತನಾಗು". ಅವರು ಪ್ರತಿಪಾದಿಸುತ್ತಾರೆ. ನಾನು ಹೇಗೆ ಆಶಾರಹಿತನಾಗ ಬಲ್ಲೆ? ಆಸೆ ಇರಬೇಕು. ಆದರೆ ನಾನು ಕೃಷ್ಣನಿಗಾಗಿ ಆಸೆಪಡುತ್ತೇನೆ.

ಆದ್ದರಿಂದ ಇದು ತುಂಬಾ ಒಳ್ಳೆಯ ಪ್ರಕ್ರಿಯೆ. ಮತ್ತು ಇತರರು ಅದನ್ನು ತುಂಬಾ ಗಂಭೀರವಾಗಿ ಪರಿಗಣಿಸದಿದ್ದರು, ಅಥವಾ ಅವರು ನಮ್ಮ ತತ್ವವನ್ನು ಸ್ವೀಕರಿಸದಿದ್ದರು, ನೀವು ಅದಕ್ಕಾಗಿ ಪ್ರಯತ್ನಿಸಿದರೆ ಸಾಕು, ಅಷ್ಟೇ ನಿಮ್ಮ ವ್ಯವಹಾರ. ಕೃಷ್ಣ ತೃಪ್ತಿಗೊಳ್ಳುತ್ತಾನೆ. ನಮ್ಮ ಆಚಾರ್ಯರು ತೃಪ್ತರಾಗುತ್ತಾರೆ, ಗುರು ಮಹಾರಾಜರು ತೃಪ್ತರಾಗುತ್ತಾರೆ. ಮತ್ತು ಯಸ್ಯ ಪ್ರಸಾದ್ ಭಗವತ್... ಅವರು ತೃಪ್ತರಾಗಿದ್ದರೆ, ನಿಮ್ಮ ವ್ಯವಹಾರವು ಪೂರ್ಣಗೊಂಡಿದೆ. ಇತರರು ತೃಪ್ತರಾಗಿದ್ದಾರೊ ಇಲ್ಲವೊ ಬೇಕಿಲ್ಲ. ನಿಮ್ಮ ಜಪದಿಂದ ಕೆಲವು ಸಾರ್ವಜನಿಕರು ತೃಪ್ತರಾಗಿದ್ದಾರೆ-ಇಲ್ಲ, ನಮಗೆ ಅದರಲ್ಲಿ ಆಸಕ್ತಿಯಿಲ್ಲ. ಅವನು ತೃಪ್ತಿ ಹೊಂದಿರಬಹುದು ಅಥವಾ ತೃಪ್ತಿ ಹೊಂದಿಲ್ಲದಿರಬಹುದು. ಆದರೆ ನಾನು ಸರಿಯಾದ ರೀತಿಯಲ್ಲಿ ಜಪಿಸಿದರೆ, ನನ್ನ ಪೂರ್ವವರ್ತಿಗಳಾದ ಆಚಾರ್ಯರು ತೃಪ್ತರಾಗುತ್ತಾರೆ. ನನ್ನ ವ್ಯವಹಾರ, ಅದು ಪೂರ್ಣಕೊಂಡಿದೆ… ನನ್ನ ಸ್ವಂತ ರೀತಿಯಲ್ಲಿ ನಾನು ಆವಿಷ್ಕರಿಸದಿದ್ದರೆ. ಹಾಗಾಗಿ ನನಗೆ ಸಹಾಯ ಮಾಡಲು ಕೃಷ್ಣ ತುಂಬಾ ಒಳ್ಳೆಯ ಹುಡುಗ-ಹುಡುಗಿಯರನ್ನು ಕಳುಹಿಸಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಈ ಶುಭ ದಿನದಂದು ಧನ್ಯರಾಗಿರಿ. ಮತ್ತು ನನ್ನದು ಏನೂ ಇಲ್ಲ. ನಾನು ಕೇವಲ ಅಂಚೆ ಜವಾನ. ನನ್ನ ಗುರು ಮಹಾರಾಜರಿಂದ ನಾನು ಕೇಳಿದ್ದನ್ನು ನಾನು ನಿಮಗೆ ತಲುಪಿಸುತ್ತಿದ್ದೇನೆ. ನೀವೂ ಸಹ ಅದೇ ರೀತಿ ವರ್ತಿಸುತ್ತೀರಿ, ಸಂತೋಷವಾಗಿರುತ್ತೀರಿ, ಮತ್ತು ಜಗತ್ತು ಸಂತೋಷವಾಗುತ್ತದೆ, ಮತ್ತು ಕೃಷ್ಣನು ಸಂತೋಷವಾಗುತ್ತಾನೆ, ಮತ್ತು ಎಲ್ಲವೂ...