KN/Prabhupada 0098 - ಕೃಷ್ಣನ ಸೌಂದರ್ಯದಿಂದ ಆಕರ್ಷಿತರಾಗಿ



The Nectar of Devotion -- Vrndavana, November 11, 1972

ಮದನ-ಮೋಹನ. ಮದನ ಎಂದರೆ ಲೈಂಗಿಕ ಆಕರ್ಷಣೆ. ಮದನ, ಕಾಮದೇವ, ಅಂದರೆ ಲೈಂಗಿಕ ಆಕರ್ಷಣೆ, ಆದರೆ ಕೃಷ್ಣನನ್ನು ಮದನ-ಮೋಹನ ಎಂದು ಕರೆಯಲಾಗುತ್ತದೆ. ಒಬ್ಬನು ಕೃಷ್ಣನಿಗೆ ಆಕರ್ಷಿತನಾದರೆ ಲೈಂಗಿಕ ಆಕರ್ಷಣೆಯನ್ನು ಸಹ ನಿರ್ಲಕ್ಷಿಸಬಹುದು. ಅದೇ ಪರೀಕ್ಷೆ. ಈ ಭೌತಿಕ ಜಗತ್ತನು ಮದನ ಆಕರ್ಷಿಸುತ್ತಿದ್ದಾನೆ. ಪ್ರತಿಯೊಬ್ಬರೂ ಲೈಂಗಿಕ ಜೀವನಕ್ಕೆ ಆಕರ್ಷಿತರಾಗುತ್ತಾರೆ. ಲೈಂಗಿಕ ಜೀವನದ ಮೇಲೆ ಇಡೀ ಭೌತಿಕ ಜಗತ್ತು ಆಧಾರವಾಗಿದೆ. ಇದು ಸತ್ಯ. ಯನ್ ಮೈಥುನಾದಿ-ಗೃಹಮೇಧಿ-ಸುಖಂ ಹಿ ತುಚ್ಚಮ್ (ಶ್ರೀ.ಭಾ 7.9.45). ಇಲ್ಲಿ, ಆ ಸಂತೋಷ, ನಾಮಮಾತ್ರದ ಸಂತೋಷ, ಅದು ಮೈಥುನ, ಮೈಥುನಾದಿ. ಮೈಥುನಾದಿ ಎಂದರೆ ಇಲ್ಲಿ ಸಂತೋಷವು ಮೈಥುನದಿಂದ, ಲೈಂಗಿಕ ಸಂಭೋಗದಿಂದ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ, ಜನರು..., ಒಬ್ಬ ವ್ಯಕ್ತಿ ಮದುವೆಯಾಗುತ್ತಾನೆ. ಲೈಂಗಿಕ ಬಯಕೆಯನ್ನು ಪೂರೈಸುವುದು ಇದರ ಉದ್ದೇಶ. ನಂತರ ಅವನು ಮಕ್ಕಳಿಗೆ ಜನ್ಮ ಕೊಡುತ್ತಾನೆ. ನಂತರ ಮಕ್ಕಳು ದೊಡ್ಡವರಾದ ಮೇಲೆ, ಮಗಳನ್ನು ಇನ್ನೊಬ್ಬ ಹುಡುಗನೊಂದಿಗೆ ಮದುವೆ ಮಾಡಿಸುತ್ತಾರೆ, ಮತ್ತು ಮಗನಿಗೆ ಇನ್ನೊಬ್ಬ ಹುಡುಗಿಯೊಂದಿಗೆ ಮದುವೆ ಮಾಡಿಸುತ್ತಾರೆ. ಅದೇ ಉದ್ದೇಶ: ಮೈಥುನ. ನಂತರ ಮತ್ತೆ, ಮೊಮ್ಮಕ್ಕಳು. ಈ ರೀತಿಯಾಗಿ, ಈ ಭೌತಿಕ ಸಂತೋಷ – ಶ್ರೀಯೈಶ್ವರ್ಯ-ಪ್ರಜೇಪ್ಸವಃ. ಆವತ್ತು ನಾವು ಚರ್ಚಿಸಿದ್ದೇವು. ಶ್ರೀ ಎಂದರೆ ಸೌಂದರ್ಯ, ಐಶ್ವರ್ಯ ಎಂದರೆ ಸಂಪತ್ತು, ಮತ್ತು ಪ್ರಜಾ ಎಂದರೆ ಪೀಳಿಗೆ. ಸಾಮಾನ್ಯವಾಗಿ, ಜನರು, ಅವರು ಇಷ್ಟಪಡುತ್ತಾರೆ - ಒಳ್ಳೆಯ ಕುಟುಂಬ, ಒಳ್ಳೆ ಹಣ ಸಂಗ್ರಹ, ಮತ್ತು ಒಳ್ಳೆಯ ಹೆಂಡತಿ, ಒಳ್ಳೆಯ ಮಗಳು, ಸೊಸೆ. ಒಂದು ಕುಟುಂಬವು ಸುಂದರವಾದ ಮಹಿಳೆಯರು, ಮತ್ತು ಸಂಪತ್ತು, ಮತ್ತು ಶ್ರೇಷ್ಠ..., ಅನೇಕ ಮಕ್ಕಳನ್ನು ಹೊಂದಿದ್ದರೆ, ಅವನು ಯಶಸ್ವಿಯಂದು ಭಾವಿಸಲಾಗುತ್ತದೆ. ಅವನು ಅತ್ಯಂತ ಯಶಸ್ವಿ ವ್ಯಕ್ತಿ ಎಂದು ಭಾವಿಸಲಾಗುತ್ತದೆ. ಆದ್ದರಿಂದ ಶಾಸ್ತ್ರ ಹೇಳುತ್ತದೆ, "ಈ ಯಶಸ್ಸು ಅಂದರೇನು? ಈ ಯಶಸ್ಸು ಮೈಥುನದಿಂದ ಪ್ರಾರಂಭವಾಗಿದೆ. ಅಷ್ಟೆ. ಮತ್ತು ಅವುಗಳನ್ನು ಕಾಪಾಡಿಕೊಳ್ಳುವುದು.” ಆದ್ದರಿಂದ ಯನ್ ಮೈಥುನಾದಿ-ಗೃಹಮೇಧಿ-ಸುಖಂ ಹಿ ತುಚ್ಚಮ್. ಇಲ್ಲಿ ಸಂತೋಷವು ಲೈಂಗಿಕ ಜೀವನದಿಂದ ಪ್ರಾರಂಭವಾಗುತ್ತದೆ, ಮೈಥುನಾದಿ. ನಾವು ಅದನ್ನು ಬೇರೆ ರೀತಿಯಲ್ಲಿ ಹೊಳಪಿಸಬಹುದು, ಆದರೆ ಈ ಮೈಥುನ, ಲೈಂಗಿಕ ಜೀವನದ ಸಂತೋಷ, ಹಂದಿಗಳಲ್ಲಿದೆ. ಹಂದಿಗಳೂ ಸಹ ಇಡೀ ದಿನ ಅಲ್ಲಿ ಇಲ್ಲಿ ತಿನ್ನುತ್ತವೆ: "ಮಲ ಎಲ್ಲಿದೆ? ಮಲ ಎಲ್ಲಿದೆ?", ಮತ್ತು ಯಾವುದೇ ವಿವೇಚನೆ ಇಲ್ಲದೆ ಲೈಂಗಿಕ ಜೀವನವನ್ನು ನಡೆಸುತ್ತವೆ. ಹಂದಿಗಳಿಗೆ ತಾಯಿ, ಸಹೋದರಿ, ಅಥವಾ ಮಗಳು ಎಂಬ ವಿವೇಚನೆಯಿಲ್ಲ. ಆದ್ದರಿಂದ ಶಾಸ್ತ್ರ ಹೇಳುತ್ತದೆ, "ಇಲ್ಲಿ, ಈ ಭೌತಿಕ ಜಗತ್ತಿನಲ್ಲಿ, ನಾವು ಸಿಕ್ಕಿಹಾಕಿಕೊಂಡಿದ್ದೇವೆ, ಮೈಥುನಕ್ಕಾಗಿ ಮಾತ್ರ ನಾವು ಈ ಭೌತಿಕ ಜಗತ್ತಿನಲ್ಲಿ ಸೆರೆಯಾಗಿದ್ದೇವೆ.” ಅದು ಕಾಮದೇವ. ಕಾಮದೇವ ಲೈಂಗಿಕ ಜೀವನದ ದೇವರು, ಮದನ. ಒಬ್ಬನು ಮದನನಿಂದ, ಕಾಮದೇವನಿಂದ, ಪ್ರಚೋದಿಸಲ್ಪಡದಿದ್ದರೆ, ಅವನು ಮೈಥುನದಲ್ಲಿ ಖುಷಿಪಡಲು ಸಾಧ್ಯವಿಲ್ಲ. ಕೃಷ್ಣನ ಹೆಸರು ಮದನ-ಮೋಹನ. ಮದನ-ಮೋಹನ ಎಂದರೆ ಕೃಷ್ಣನತ್ತ ಆಕರ್ಷಿತನಾದವನು ಲೈಂಗಿಕ ಜೀವನದಿಂದ ಪಡೆವ ಆನಂದವನ್ನು ಮರೆತುಬಿಡುತ್ತಾನೆ. ಇದೇ ಪರೀಕ್ಷೆ. ಆದ್ದರಿಂದ ಅವನ ಹೆಸರು ಮದನ-ಮೋಹನ. ಇಲ್ಲಿರುವನು ಮದನ-ಮೋಹನ. ಸನಾತನ ಗೋಸ್ವಾಮಿ ಮದನ-ಮೋಹನನನ್ನು ಪೂಜಿಸಿದರು. ಮದನ ಅಥವಾ ಮಾದನ. ಮಾದನ ಎಂದರೆ ಹುಚ್ಚು ಹಿಡಿಯುವುದು. ಮತ್ತು ಮದನ, ಕಾಮದೇವ.

ಆದ್ದರಿಂದ ಪ್ರತಿಯೊಬ್ಬರೂ ಲೈಂಗಿಕ ಜೀವನದ ಪ್ರಭಾವದಿಂದ ಹುಚ್ಚರಾಗಿದ್ದಾರೆ. ಅನೇಕ ಸ್ಥಳಗಳಿವೆ… ಭಾಗವತದಲ್ಲಿ ಇದನ್ನು ಹೇಳಲಾಗಿದೆ, ಪುಂಸಃ ಸ್ತ್ರೀಯಾ ಮಿಥುನೀ-ಭಾವಂ ಏತತ್ ತಯೋರ್ ಮಿಥೋ ಹೃದಯ-ಗ್ರಂಥಿಮ್ ಆಹುರ್ (ಶ್ರೀ.ಭಾ 5.5.8). ಇಡೀ ಭೌತಿಕ ಪ್ರಪಂಚವು ಹೀಗೆ ನಡೆಯುತ್ತಿದೆ: ಪುರುಷನು ಮಹಿಳೆಯಿಂದ ಆಕರ್ಷಿತನಾಗುತ್ತಾನೆ, ಮಹಿಳೆ ಪುರುಷನಿಂದ ಆಕರ್ಷಿತಳಾಗುತ್ತಾಳೆ. ಮತ್ತು, ಈ ಆಕರ್ಷಣೆಯನ್ನು ಹುಡುಕುತ್ತಾ, ಅವರು ಒಂದಾದಾಗ, ಈ ಭೌತಿಕ ಪ್ರಪಂಚದ ಬಗ್ಗೆ ಅವರ ಬಾಂಧವ್ಯ ಇನ್ನೂ ಹೆಚ್ಚಾಗುತ್ತದೆ. ಮತ್ತು ಈ ರೀತಿಯಾಗಿ, ಒಗ್ಗೂಡಿದ ನಂತರ, ಅಥವಾ ಮದುವೆಯಾದ ನಂತರ, ಒಬ್ಬ ಮಹಿಳೆ ಮತ್ತು ಪುರುಷ, ಅವರು ಉತ್ತಮವಾದ ಮನೆಗಾಗಿ ಹೆಣಗುತ್ತಾರೆ, ಗೃಹ; ಕ್ಷೇತ್ರ, ಚಟುವಟಿಕೆಗಳು, ವ್ಯವಹಾರ, ಕಾರ್ಖಾನೆ, ಅಥವಾ ಕೃಷಿ ಕ್ಷೇತ್ರ. ಯಾಕೆಂದರೆ ಹಣ ಸಂಪಾದಿಸಬೇಕು. ಆಹಾರವನ್ನು ಪಡೆಯಯುವುದಕ್ಕೆ. ಗೃಹ-ಕ್ಷೇತ್ರ; ಸುತ, ಮಕ್ಕಳು; ಆಪ್ತ, ಸ್ನೇಹಿತರು; ವಿತ್ತ, ಸಂಪತ್ತು. ಅತಃ ಗೃಹ-ಕ್ಷೇತ್ರ-ಸುತಾಪ್ತ-ವಿತೈರ್ ಜನಸ್ಯ ಮೋಹೋ 'ಯಾಮ್ (ಶ್ರೀ.ಭಾ 5.5.8). ಈ ಭೌತಿಕ ಪ್ರಪಂಚದ ಆಕರ್ಷಣೆ ಹೆಚ್ಚು ಬಿಗಿಯಾಗುತ್ತದೆ. ಇದನ್ನು ಮದನ ಎಂದು ಕರೆಯಲಾಗುತ್ತದೆ, ಮದನನಿಂದ ಆಕರ್ಷಣೆ. ಆದರೆ ನಮ್ಮ ವ್ಯವಹಾರವು ಈ ಭೌತಿಕ ಪ್ರಪಂಚದ ಮಿನುಗುವಿಕೆಯಿಂದ ಆಕರ್ಷಿತವಾಗುವುದಲ್ಲ, ಕೇವಲ ಕೃಷ್ಣನಿಂದ ಆಕರ್ಷಿತವಾಗುವುದು. ಅದು ಕೃಷ್ಣ ಪ್ರಜ್ಞೆ ಚಳುವಳಿ. ಕೃಷ್ಣನ ಸೌಂದರ್ಯದಿಂದ ನೀವು ಆಕರ್ಷಿತರಾಗದಿದ್ದರೆ, ಈ ಭೌತಿಕ ಪ್ರಪಂಚದ ಈ ಸುಳ್ಳು ಸೌಂದರ್ಯದಿಂದ ನಾವು ತೃಪ್ತರಾಗಬೇಕು. ಆದುದರಿಂದ ಶ್ರೀ ಯಮುನಾಚಾರ್ಯರು ಹೇಳಿದರು: ಯಾದಾವಧಿ ಮಮ ಚೇತಃ ಕೃಷ್ಣ-ಪದಾರವಿಂದಯೋರ್ ನವ-ನವ-ಧಾಮ ರಂತುಮ್ ಆಸೀತ್ : "ನಾನು ಕೃಷ್ಣನ ಸೌಂದರ್ಯದಿಂದ ಆಕರ್ಷಿತನಾಗಿರುವವರೆಗು, ಮತ್ತು ನಾನು ಅವನ ಪಾದಕಮಲದಲ್ಲಿ ಸೇವೆ ಸಲ್ಲಿಸಲು ಪ್ರಾರಂಭಿಸಿದಾಗಿನಿಂದ ಹೊಸ ಶಕ್ತಿಯನ್ನು ಪಡೆಯುತ್ತಿದ್ದೇನೆ, ಅಂದಿನಿಂದ, ನಾನು ಮೈಥುನದ ಬಗ್ಗೆ ಯೋಚಿಸಿದ ತಕ್ಷಣ, ಅದಕ್ಕೆ ಉಗಿಯಬೇಕು ಏನಿಸುತ್ತದೆ.” ಅದು ವಿತೃಷ್ಣ, ಇನ್ನು ಆಕರ್ಷಣೆ ಇಲ್ಲ... ಈ ಭೌತಿಕ ಪ್ರಪಂಚದ ಆಕರ್ಷಣೆಯ ಕೇಂದ್ರ ಬಿಂದು ಲೈಂಗಿಕ ಜೀವನ, ಮತ್ತು ಯಾರಾದರು ಲೈಂಗಿಕ ಜೀವನದಿಂದ ಬೇರ್ಪಟ್ಟಾಗ... ತಾದಾವಧಿ ಮಮ ಚೇತಃ...,

ಯದಾವಧಿ ಮಮ ಚೇತಃ ಕೃಷ್ಣ-ಪದಾರವಿಂದಯೋರ್
ನವ-ನವ-(ರಸ-)ಧಾಮ್(ಅನುದ್ಯತ) ರಂತುಮ್ ಆಸೀತ್
ತದಾವಧಿ ಬತ ನಾರಿ-ಸಂಗಮೇ ಸ್ಮರ್ಯಮಾನೇ
ಭವತಿ ಮುಖ-ವಿಕಾರಃ ಸುಷ್ಟು ನಿಷ್ಠೀವನಂ ಚ

"ನಾನು ಮೈಥುನದ ಬಗ್ಗೆ ಯೋಚಿಸಿದ ತಕ್ಷಣ, ತಕ್ಷಣ ನನ್ನ ಬಾಯಿ ಪಕ್ಕಕ್ಕೆ ತಿರುಗುತ್ತದೆ, ಮತ್ತು ನಾನು ಅದಕ್ಕೆ ಉಗಿಯಲು ಬಯಸುತ್ತೇನೆ.” ಆದ್ದರಿಂದ ಕೃಷ್ಣ ಮದನ-ಮೋಹನ. ಮದನ ಎಲ್ಲರನ್ನೂ ಆಕರ್ಷಿಸುತ್ತಿದ್ದಾನೆ, ಲೈಂಗಿಕ ಜೀವನ, ಮತ್ತು ಕೃಷ್ಣ, ನಾವು ಕೃಷ್ಣನಿಂದ ಆಕರ್ಷಿತರಾದಾಗ, ಆಗ ಮದನ ಸಹ ಸೋಲುತ್ತಾನೆ. ಆದ್ದರಿಂದ ಮದನ ಸೋಲನುಭವಿಸಿದ ತಕ್ಷಣ, ನಾವು ಈ ಭೌತಿಕ ಪ್ರಪಂಚವನ್ನು ಜಯಿಸುತ್ತೇವೆ. ಇಲ್ಲದಿದ್ದರೆ ಅದು ತುಂಬಾ ಕಷ್ಟ.